ಯೋಗದ ಮತ್ತು ಮುದ್ರೆಗಳ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವಿಕೆ
ಯೋಗವು ಔಷಧಿಗಳಿಗೆ ಪರ್ಯಾಯವಲ್ಲ. ಬದಲಿಗೆ ರೋಗಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿದೆ. ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯೋಗಾಭ್ಯಾಸವು ದೇಹ ಮತ್ತು ಮನಸ್ಸನ್ನು ಅಭಿವೃದ್ಧಿಪಡಿಸಲು ಸಹಾಯಮಾಡುತ್ತದೆ. ಇದು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ. ಸ್ಥಿರವಾದ ಯೋಗಾಭ್ಯಾಸ ನಿರ್ದಿಷ್ಟವಾಗಿ ಕೆಲವು ಭಂಗಿಗಳೊಂದಿಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚಿಸುತ್ತದೆ. ಯೋಗವು ವ್ಯಕ್ತಿಯ ಪಂಚಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಯೋಗವು ದೇಹದಲ್ಲಿ ವ್ಯವಸ್ಥಿತವಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಒಟ್ಟಾರೆ ಉರಿಯೂತವನ್ನು ಕಡಿಮೆಮಾಡುತ್ತದೆ. ರೋಗ ನಿರೋಧಕ ಶಕ್ತಿಗಾಗಿ ಯೋಗ ಭಂಗಿಗಳನ್ನು ನಿತ್ಯ ಅಭ್ಯಾಸ ಮಾಡಿದಾಗ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಗಟ್ಟಲು ನಮ್ಮ ದೇಹದ ಎಲ್ಲಾ ವ್ಯವಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಸಫಲವಾಗುವುದು.
ನಮ್ಮ ದೇಹ ಮತ್ತು ಅದರ ವ್ಯವಸ್ಥೆಗಳಲ್ಲಿ ಸಮತೋಲನವನ್ನು ಬೆಳೆಸುವ ಮೂಲಕ, ನಾವು ನಮ್ಮ ಆರೋಗ್ಯ ಶಕ್ತಿ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಬೆಂಬಲಿಸಬಹುದು. ಒತ್ತಡದ ಜೀವನವು ಅನಾರೋಗ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಾವು ತೀವ್ರವಾಗಿ ಒತ್ತಡಕ್ಕೊಳಗಾದಾಗ ನಮ್ಮ ಅಂಗಗಳು, ಸ್ನಾಯುಗಳು, ಮೂಳೆಗಳು, ಸ್ನಾಯುರಜ್ಜುಗಳನ್ನು ಹಾನಿಗೊಳಿಸುತ್ತದೆ.
ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ನಮ್ಮ ಸುತ್ತಮುತ್ತಲಿನ ಜನರು ಸೀನುವಾಗ ಮತ್ತು ಕೆಮ್ಮುತ್ತಿರುವಾಗ ರೋಗಾಣುಗಳು ದೇಹಕ್ಕೆ ಪ್ರವೇಶಿಸಿ ಕಾಯಿಲೆಯನ್ನುಂಟು ಮಾಡುತ್ತದೆ. ಈ ವೈರಸ್ ವಾಯುಗಾಮಿ ಆಗಿರುವುದರಿಂದ ಬೇಗನೆ (ಹತ್ತಿರ ಸಂಪರ್ಕದಲ್ಲಿರುವವರಿಗೆ) ಹರಡುತ್ತದೆ. ವೈರಸ್ ಮೂಗು ಮತ್ತು ಗಂಟಲಿನ ಮೂಲಕ ಹಾದು ಹೋಗುತ್ತದೆ. ವೈರಸ್ನ್ನು ಮೇಲೆ ದಾಳಿಮಾಡಲು ಬಿಳಿ ರಕ್ತ ಕಣಗಳನ್ನು ಕಳುಹಿಸುತ್ತದೆ. ಬಿಳಿ ರಕ್ತಕಣಗಳು ಗಂಟಲು ಕಡೆಗೆ ಸೆಳೆಯಲು ಯೋಗ ಸಹಕಾರಿಯಾಗುತ್ತದೆ. ಯೋಗವು ನಮ್ಮ ದೇಹವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಪಡಿಸುವ ಸಮಗ್ರ ಅಭ್ಯಾಸವಾಗಿದೆ. ಪರಿಣಾಮವಾಗಿ ದೇಹದ ರಕ್ಷಣಾ ಕಾರ್ಯ ವಿಧಾನವು ಅಂತಹ ಸ್ಥಿತಿಯಲ್ಲಿ ಸುಧಾರಿಸುತ್ತದೆ. ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ ಆಯ್ಕೆಗಳು ಮತ್ತು ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸವನ್ನು ಅಳವಡಿಸಿಕೊಂಡಾಗ ಆರೋಗ್ಯಕರ ಜೀವನವನ್ನು ಸುಲಭವಾಗಿ ಸಾಧಿಸಬಹುದು. ಯೋಗದ ನಿಯಮಿತ ಅಭ್ಯಾಸವು ದೇಹದ ಶಕ್ತಿ ವ್ಯವಸ್ಥೆ ಅಥವಾ ನಾಡಿಗಳನ್ನು ಸಮತೋಲನಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪ್ರಾಣಾಯಾಮವು (ಉಸಿರಾಟದ ವ್ಯಾಯಾಮಗಳು) ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತವನ್ನು ತಡೆಯುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಕೋವಿಡ್-19ರ ವಿರುದ್ಧ ಹೋರಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದೆ.
ರೋಗ ನಿರೋಧಕ ಶಕ್ತಿ ವರ್ಧಿಸುವ ಆಯುರ್ವೇದ ಸಲಹೆಗಳು :
- ನಿಯಮಿತವಾಗಿ ಬಿಸಿ ನೀರು ಕುಡಿಯುವುದು.
- ಪ್ರತಿದಿನ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು.
- ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು.
- ಆಯುರ್ವೇದ ಪದ್ಧತಿಯಲ್ಲಿ ಹೇಳಲಾದ ದಿನಚರ್ಯ ಹಾಗೂ ಋತುಚರ್ಯೆಯನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯ ಗಳಿಸಬಹುದು.
ಯೋಗ ಎಂದರೆ ಏನು?
ಯೋಗವು ಮೂಲತಃ ಆಧ್ಯಾತ್ಮದ ಆಧಾರದಿಂದಿರುವ/ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆಯಾಗಿದ್ದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂತದ್ದು ಇದು ಆರೋಗ್ಯವಾಗಿ ಬಾಳಲು ಒಂದು ವಿಜ್ಞಾನ ಮತ್ತು ಕಲೆ. ವ್ಯಾಪಕವಾಗಿ ತೊಡಗಿಸಿಕೊಂಡಿರುವ ಯೋಗಸಾಧನಗಳು ಇಂತಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ ಸಮಾಧಿ, ಬಂಧಗಳು, ಹಾಗೂ ಮುದ್ರೆಗಳು, ಷಟ್ಕರ್ಮಗಳು, ಯುಕ್ತಾಹಾರ, ಮಂತ್ರಜಪ, ಯುಕ್ತ ಕರ್ಮ ಇತ್ಯಾದಿ. ಯೋಗ ಎನ್ನುವ ಪದ ಸಂಸ್ಕøತ ಮೂಲಧಾತುವಾದ “ಯುಜ್” ಎನ್ನುವುದರಿಂದ ಬಂದಿದ್ದು “ಕೂಡಿಸು ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು” ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಯುಜ್ಯತೇ ಸಮಾಧೀಯತೇsನೇನ ಇತಿ ಯೋಗಃ ಇದು ಯೋಗ ಶಬ್ದದ ಉತ್ಪತ್ತಿಯಾಗಿದೆ. ಇಲ್ಲಿ ಜೀವಾತ್ಮವನ್ನು ಯಾವುದು ಆತ್ಮ ಸಾಕ್ಷಾತ್ಕಾರದೆಡೆಗೆ (ಪರಮಾತ್ಮನೆಡೆಗೆ) ಒಯ್ಯುವುದೋ ಅದು ಯೋಗ. ಜಾÐನ ಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗಗಳೆಂದು ನಾಲ್ಕು ವಿಧದ ಯೋಗಗಳಿವೆ. ಯೋಗ : ಚಿತ್ತ ವೃತ್ತಿ ನಿರೋಧಃ -(ಪತಂಜಲಿ ಋಷಿಗಳ 196 ಸೂತ್ರಗಳ – 2 ನೇ ಅಧ್ಯಾಯದಲ್ಲಿ) ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆ ಹಿಡಿದು ಸರ್ವಥಾ ವಿರೋಧಿಸಿ, ನಿಲ್ಲಿಸಿ, ಏಕಾಗ್ರತೆ ಸಾಧಿಸುವುದೇ ಯೋಗ.
ವೈರಲ್ ಸೋಂಕು, ಕೆಮ್ಮು, ಅಲರ್ಜಿ ಶೀತ, ನಿಯಂತ್ರಣಕ್ಕೆ ಅಭ್ಯಾಸ ಮಾಡಬೇಕದ ಯೋಗ, ಪ್ರಾಣಾಯಾಮ, ಮುದ್ರೆಗಳ ಸಂಕ್ಷಿಪ್ತ ಪಟ್ಟಿ:-
- ಆರಂಭದಲ್ಲಿ ಇಷ್ಟದೇವರ ಪ್ರಾರ್ಥನೆ.
- ಕಪಾಲ ಬಾತಿ, ತ್ರಾಟಕ ಕ್ರಿಯೆ.
- ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ (ಸಾಧ್ಯವಾಗುವವರಿಗೆ) ತುಸು ವಿಶ್ರಾಂತಿ.
ಆಸನಗಳು : ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ಪಾದ ಹಸ್ತಾಸನ, ವೀರಭದ್ರಾಸನ, ತ್ರಿಕೋಣಾಸನ, ಪ್ರಸಾರಿತ, ಪಾದೋತ್ತಾನಾಸನ, ಪದ್ಮಾಸನದಲ್ಲಿ ಪರ್ವತಾಸನ, ಪಶ್ಚಿಮೋತ್ತಾನಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕಾಸನ, ವಕ್ರಾಸನ ಸರ್ವಾಂಗಾಸನ ಹಲಾಸನ, ಮಕರಾಸನ, ಸರ್ಪಾಸನ, ಅದೋಮುಖ ಶ್ವಾನಾಸನ, ಬಕಾಸನ, ಶವಾಸನ ಇತ್ಯಾದಿ.
ಪ್ರಾಣಾಯಾಮಗಳು :-ನಾಡೀಶುದ್ಧಿ ಪ್ರಾಣಾಯಾಮ, ಭ್ರಾಮರಿ, ಉಜ್ಜಾಯೀ ಪ್ರಾಣಾಯಾಮ,
ಸೂರ್ಯನುಲೋಮ, ಸುಖ ಪ್ರಾಣಾಯಾಮ ಇತ್ಯಾದಿ.
ಕ್ರಿಯೆಗಳು:- ಶುದ್ಧೀಕರಣಕ್ಕಾಗಿ, ಕಪಾಲಬಾತಿ, ಜಲನೇತ, ಸೂತ್ರನೇತಿಯಿಂದ ಶೀತ ಅಲರ್ಜಿಯನ್ನು ಹತೋಟಿಯಲ್ಲಿಡಬಹುದು.
ಮುದ್ರೆಗಳಲ್ಲಿ ಪ್ರಾಣಮುದ್ರೆ, ಮಂತ್ರ: ‘ಓಂ ಹಿರಣ್ಯ ಗರ್ಭಾಯ ನಮಃ’ 108 ಬಾರಿ ಪಠಿಸಿ ಯಾ ಇಷ್ಟ ದೇವರನ್ನು ನೆನೆಸಿ.
ಚಿನ್ಮುದ್ರೆ ಮಂತ್ರ:- ಐಂ ಹ್ರೀಂ ಐಂ ಹ್ರೀಂ ಓಂ ಸರಸ್ವತೈ ನಮಃ [ಯಾ ಓಂ ಸರಸ್ವತೈ ನಮಃ] ಎಂದು 108 ಬಾರಿ ಪಠಿಸಿ ಯಾ ಇಷ್ಟ ದೇವರನ್ನು ನೆನೆಸಿ.
ಸಹಜ ಶಂಖ ಮುದ್ರೆ (ಓಂ ವಿಷ್ಣುವೇ ನಮಃ 108 ಬಾರಿ ಪಠಿಸಿ) ಅದಿತಿಮುದ್ರೆ, ಶಂಖ ಮುದ್ರೆ, ಭ್ರಮರ ಮುದ್ರೆ, ಸೂರ್ಯಮುದ್ರೆ, ಲಿಂಗ ಮುದ್ರೆ. [ಮುದ್ರೆಗಳನ್ನು ಗುರುಮುಖೇನನೇ ಕಲಿತು ಅಭ್ಯಾಸ ಮಾಡಿ]
ಸೋಂಕು, ಶೀತ ಅಲರ್ಜಿಯಿಂದ ಬಳಲುತ್ತಿರುವವರು ವೈದ್ಯರ ತಪಾಸಣೆ, ಉಪಚಾರದೊಂದಿಗೆ, ಯೋಗ ಮುದ್ರೆಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಆಸನಗಳನ್ನು ನಿತ್ಯ ಅಭ್ಯಾಸ ಮಾಡಿದರೆ ಸಾಕಷ್ಟು ನಿಯಂತ್ರಿಸಬಹುದು ಹಾಗೂ ಪದೇ ಪದೇ ಔಷಧಿಯನ್ನು ಸೇವಿಸುವುದನ್ನು ನಿಲ್ಲಿಸಬಹುದು.
ಮುದ್ರೆಗಳು ಉನ್ನತ ಹಂತದ ಅಭ್ಯಾಸವಾಗಿದ್ದು, ಪ್ರಾಣಶಕ್ತಿಯನ್ನು ಹೆಚ್ಚಿಸುವ ಹಾಗೂ ಕುಂಡಲಿನಿ ಶಕ್ತಿ ಜಾಗ್ರತಿಗೊಳಿಸುವ ಸಾಧನವಾಗಿದೆ. ಸಹಜ ಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯವ ಸಾಧನವು ಆಗಿದೆ. ಸಾಧಕರ ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಶ್ಚಲಗೊಳಿಸಲು ಮುದ್ರೆಗಳನ್ನು ಉಪಯೋಗಿಸಲಾಗುತ್ತದೆ. ದೇಹದಲ್ಲಿ ರಂಧ್ರಗಳು ಎಲ್ಲೆಲ್ಲ ಇರುತ್ತದೆ ಮತ್ತು ಅವುಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಮುದ್ರೆಯು ತಿಳಿಸಿಕೊಡುತ್ತದೆ. ಮುದ್ರಚಿಕಿತ್ಸೆಯು ಖರ್ಚಿಲ್ಲದ್ದು. ಏಕೆಂದರೆ ಇದಕ್ಕೆ ಯಾವುದೇ ಉಪಕರಣ ಅಥವಾ ಗಾಡ್ಜೆಟ್ಗಳ ಆವಶ್ಯಕತೆಗಳಿಲ್ಲ. ಇದೊಂದು ರೀತಿಯ ಸ್ವ-ಚಿಕಿತ್ಸೆ. ಮುದ್ರೆಯ ಬಗ್ಗೆ ಯಾರು ಪ್ರಾಥಮಿಕ ಜ್ಞಾನವನ್ನು ಹೊಂದಿರುತ್ತಾರೋ ಅವರು ತಾವೇ ಸಾಮಾನ್ಯ ತೊಂದರೆಗಳಿಗೆ ಚಿಕಿತ್ಸೆ ಮಾಡಿಕೊಳ್ಳಬಹುದು.
ಕೊರೋನ ಕಾಯಿಲೆ ಬಂದಾಗ (ಜ್ವರವಿದ್ದಾಗ ಯೋಗ ಮಾಡಬಾರದು) ಯೋಗ ಹೆಚ್ಚು ಪ್ರಯೋಜನವಾಗುವುದಿಲ್ಲ. ಉಸಿರಾಟದ ತೊಂದರೆಗಳ ನಿಯಂತ್ರಣಕ್ಕೆ ಹಾಗೂ ಶ್ವಾಸಕೋಶದ ಸಾಮಾಥ್ರ್ಯ ಹೆಚ್ಚಿಸಲು ಯೋಗವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಗುರುಮುಖೇನನೇ ಕಲಿತು ಅಭ್ಯಾಸ ಮಾಡಿ. ದೇಹಕ್ಕೆ ಹೇಗೆ ಪೋಷಕಾಂಶಗಳನ್ನು ನೀಡುತ್ತೇವೋ ಅದೇ ರೀತಿ ಮನಸ್ಸಿಗೂ ಒಳ್ಳೆಯ ಆಹಾರ ನೀಡಿ. ಮಾನಸಿಕತೆ ಕಾಪಾಡಿಕೊಳ್ಳಲು ಸದಾಚಾರ, ಸತ್ಸಂಗ, ಒಳ್ಳೆಯ ಪುಸ್ತಕಗಳ ಓದು, ಒಳ್ಳೆಯ ಕಲೆಗಳ ಹವ್ಯಾಸ, ಶಾರೀರಿಕ ಚಟುವಟಿಕೆ, ಇತ್ಯಾದಿಗಳನ್ನು ರೂಢಿಸಿಕೊಳ್ಳಿ.
‘‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್
ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು
ಫೋನ್ ನಂ. : 9448394987