ಪಶ್ಚಾತ್ತಾಪದ ಅರಿವು…

*ಶಿಲ್ಪಾಶ್ರೀ

ಇನ್ನೇನು ಜಗತ್ತು ನಿಧಾನವಾಗಿ ಪರಿಚಯವಾಗುತ್ತಿದೆಯಷ್ಟೇ. ಎಲ್ಲಾ ವಿಷಯಕ್ಕೂ ಪ್ರೇರೇಪಿಸುವ ಹರೆಯ ಕೊನೆಯ ದಿನಗಳನ್ನು ಎಣಿಸುತ್ತಿದೆ. ಜವಾಬ್ದಾರಿಗಳು ಒಂದೊಂದರಂತೆ ಹೆಗಲೇರುತ್ತಿವೆ. ಇಷ್ಟೊತ್ತಿಗಾಗಲೇ ಎಷ್ಟೋ ಒತ್ತಡವನ್ನು, ಎಣಿಕೆಗೆ ಸಿಗದ ಸೋಲು ಗೆಲುವುಗಳು ಕಂಡಿರುವುದು ಸಹಜ. ಸಾವಿರ ಮೈಲಿಗಳಷ್ಟು ದೂರವಿರುವ ಜೀವನದಲ್ಲಿ ಹೊಸತರೆಡೆಗೆ ಹಂಬಲ!

ದಿನ ಬೆಳಗಾದಂತೆ  ಹೊಸ  ಬದುಕು ಪ್ರಾರಂಭಿಸಬೇಕೆಂದೆನಿಸುವುದಷ್ಟೇ. ಅದಕ್ಕೆ ಅಡ್ಡಗಾಲಿನಂತೆ ಒಂದೋ ಮಿತಿಮೀರಿ ಆಡಿದ ಮಾತೋ , ವರ್ತನೆಯೊ ಪ್ರವೇಶಿಸಿ ಯೋಜನೆಯೇ ತಲೆಕೆಳಗಾಗುವಂತೆ ಮಾಡುತ್ತದೆ. ಕೊನೆಯಿಲ್ಲದೆ ಯೋಚನೆ… ಒಮ್ಮೊಮ್ಮೆ ಜಿಗುಪ್ಸೆ ಆವರಿಸುತ್ತದೆ. ಶುರುವಾದ ಹೊರ ಜಗವನ್ನು ಕಾಣುವ ಹಂಬಲ ಬಿಡುತ್ತಿಲ್ಲ. ʼಹೊಸತುʼ ಏನೆಂದು ತಿಳಿಯದಿದ್ದರೂ ಅದರದೇ ಕನವರಿಕೆ!
ಸಾಧಿಸುವೆನೆಂಬ  ಹಠದಿಂದಲೋ, ಅಜ್ಞಾನ- ಅವಸರವೇ ಮೇಲುಗೈಯಂತೆಯೋ  ಫಲಿಸಿಯೇ ಬಿಡುವುದು!  ಪ್ರವೇಶಿಸುತ್ತಿದ್ದಂತೆ  ವರ್ಣಿಸಲಾಗದ ಪ್ರದೇಶ! ಸುತ್ತಲು ಗಾಜಿನ ಗೋಡೆಯಿಂದ ಬಂಧಿಸಲ್ಪಟ್ಟಂತೆ. ಹೊರಗಡೆ ಬೇಡ ಎಂದು ಬಿಟ್ಟು ಬಂದ ಪ್ರಪಂಚ . ಇವೆಲ್ಲ  ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸೃಷ್ಟಿಸಿದಂತಿವೆ.  ಆತ್ಮೀಯರು , ಬಂಧುಗಳು, ಬಳಗದವರನ್ನು ಕಂಡರೂ ವಿಚಾರಿಸಲಾಗುತ್ತಿಲ್ಲ.  ಅವರ ನೋವು, ನಲಿವಿನಲ್ಲಿ ಅವರೊಂದಿಗೆ ಭಾಗಿಯಾಗಲು  ಸಾಧ್ಯವಾಗುತ್ತಿಲ್ಲ. ಅಂದು ಅವರೊಂದಿಗೆ ಸಂತಸದಿಂದ ಕಳೆದ ದಿನಗಳು ನೆನಪು ಮಾತ್ರ!

ಅಂದು ಅರಿವಾಗುವುದು  ಜೀವನ ಎಂಬುದು ಎಷ್ಟು ಅಮೂಲ್ಯವಾದುದು, ಅವಸರದಿಂದ ಎಷ್ಟು ದೊಡ್ಡ ನಷ್ಟವಾಯಿತು ಎಂದು. ಜೀವನದಲ್ಲಿ ಒಂದಾದರೊಂದರಂತೆ ಸಮಸ್ಯೆಗಳು ತಪ್ಪಿದ್ದಲ್ಲ. ಸೊಲುಗಳು ಸಹಜ, ಅದನ್ನು ಬಗೆಹರಿಸಿಕೊಂಡು ಹೋಗುವುದೇ ಜೀವನ ಎಂಬ ಮಾತು ಸತ್ಯ ಎಂದು ಅರಿವಾಗುತ್ತದೆ. ಪ್ರಯೋಜನವಿದೆಯಾ...?! ಸಮಯ ಮೀರಿದೆ. ಪಶ್ಚಾತ್ತಾಪ ಪಡುವುದೊಂದೇ ಕೆಲಸ. ಎಲ್ಲಿ ಹೋದರೂ ಪಶ್ಚಾತ್ತಾಪ ಬೆನ್ನು ಬಿಡದು...

*ಶಿಲ್ಪಾಶ್ರೀ 
ಅಂತಿಮ ಬಿ.ಎ. ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ  ಕಾಲೇಜು  ಮಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles