ತುಳಸಿ ಗಿಡದಲ್ಲಾಗುವ ಬದಲಾವಣೆಗಳಿಂದ ಮುಂದೆ ಮನೆಯಲ್ಲಿ ನಡೆಯುವ ಪರಿಣಾಮಗಳ ಬಗ್ಗೆ ಹೇಳಬಹುದಂತೆ…

ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದು ಎಂಬ ನಂಬಿಕೆ ನಮ್ಮದು. ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಗಿಡ ವೈಜ್ಞಾನಿಕವಾಗಿಯೂ ಹೆಚ್ಚು ಮಹತ್ವವನ್ನು ಪಡೆದಿದೆ. ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯಗಳಲ್ಲಿ ತುಳಸಿ ಗಿಡ ಕೂಡಾ ಒಂದು. ಲಕ್ಷ್ಮೀದೇವಿಯ ಆವಾಸ ಸ್ಥಾನ ಎಂದೂ ಹೇಳಲಾಗುತ್ತದೆ. ತುಳಸಿ ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣಪಡಿಸಬಹುದು.

ಒಮ್ಮೊಮ್ಮೆ ಮನೆಯಲ್ಲಿರುವ ತುಳಸಿ ಗಿಡದ ಸಹಜ ಬಣ್ಣದಲ್ಲಿ ಬದಲಾವಣೆಯಾಗುವುದು, ಇಲ್ಲವೆ ಎಲೆಗಳು ಒಣಗಿ ಉದುರಿ ಹೋಗುವುದು ಮೊದಲಾದುವುಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಹೀಗೆ ಭೌತಿಕವಾಗಿ ನಡೆಯುವ ಪ್ರಕ್ರಿಯೆಗಳಿಂದಾಗಿ ಆ ಮನೆಯಲ್ಲಿ ನಡೆಯಬಹುದಾದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದಂತೆ. ಈ ನಿಟ್ಟಿನಲ್ಲಿ ತುಳಸಿ ಗಿಡದಲ್ಲಾಗುವ ಬದಲಾವಣೆಗಳನ್ನು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಿಳಿದುಕೊಳ್ಳೋಣ.

  • ಒಂದು ವೇಳೆ ತುಳಸಿ ಗಿಡಕ್ಕೆ ನೀರೆರೆಯದಿದ್ದರೂ, ಎಲೆಗಳು ಹಸಿರಾಗಿ,ಚೆನ್ನಾಗಿ ಬೆಳೆಯುತ್ತಿದ್ದರೆ, ಆ ಮನೆಯವರಿಗೆಲ್ಲರಿಗೂ ಅದೃಷ್ಟ ಕೂಡಿಬರುತ್ತದಂತೆ. ಭವಿಷ್ಯದಲ್ಲಿ ಅಂತಹವರಿಗೆ ಹೇರಳವಾಗಿ ಸಂಪತ್ತು ಬರುತ್ತದೆ ಎಂಬ ನಂಬಿಕೆ ಇದೆ.
  • ತುಳಸಿ ಗಿಡವನ್ನು ಬೆಳೆಸುತ್ತಿರುವ ಕುಂಡದಲ್ಲಿ, ಮತ್ತೊಂದು ಸಸಿ ತನ್ನಷ್ಟಕ್ಕೆ ತಾನೇ ಹುಟ್ಟಿದರೆ, ತಾವು ಅಂದುಕೊಂಡದ್ದನ್ನು ಸಾಧಿಸುತ್ತಾರಂತೆ.
  • ತುಳಸಿ ಗಿಡ ಹಚ್ಚ ಹಸಿರಾಗಿರುವ ಮನೆಯಲ್ಲಿ ಯಾವಾಗಲೂ ಸುಖ ಸಂತೋಷಗಳೇ ತುಂಬಿರುತ್ತವೆ.
  • ತುಳಸಿ ಗಿಡದ ಎಲೆಗಳ ಬಣ್ಣ ಒಮ್ಮೆಲೇ ಬದಲಾದರೆ? ಆ ಮನೆಯ ಪೈಕಿ ಯಾರೋ ಒಬ್ಬರು ಮಾಯ ಮಾಟದಂತಹ ಪ್ರಯೋಗಕ್ಕೆ ಈಡಾಗುತ್ತಾರೆಂಬುದನ್ನು ಸೂಚಿಸುತ್ತದೆ.
  • ದಿನಾಲೂ ನೀರು ಹಾಕಿ ಚೆನ್ನಾಗಿ ಪೋಷಿಸುತ್ತಿದ್ದರೂ, ತುಳಸಿ ಗಿಡದ ಎಲೆಗಳು ಒಣಗಿಹೋಗುತ್ತಿದ್ದರೆ ಆ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗುತ್ತಾರಂತೆ.
  • ಇತರೆ ಕಾರಣಗಳಿಂದಾಗಿ ತುಳಸಿ ಗಿಡ ಒಣಗುತ್ತಿದ್ದರೆ , ಒಡನೆಯೇ ನೀರು ಹಾಕಿ ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles