ಡ್ರ್ಯಾಗನ್ ಫ್ರೂಟ್‌ಗೆ ಹೊಸ ನಾಮಕರಣ ಹೆಸರೇನು ಗೊತ್ತಾ?

ಗುಜರಾತ್‌ನಲ್ಲಿ ಡ್ರ್ಯಾಗನ್ ಫ್ರೂಟ್‌ಗೆ ‘ಕಮಲಂ’ ಎಂದು ಹೊಸದಾಗಿ ನಾಮಕರಣ ಮಾಡಿದೆ ಗುಜರಾತ್ ಸರಕಾರ. ಡ್ರಾಗನ್ ಫ್ರೂಟ್ ಹೆಸರು ಚೀನಾದೊಂದಿಗೆ ಬೆಸೆದುಕೊಂಡಿರುವುದರಿ0ದ ಹೆಸರು ಬದಲಿಸುವ ನಿರ್ಧಾರ ಕೈಗೊಂಡಿದೆ.
ಸಂಸ್ಕೃತದಲ್ಲಿ ಕಮಲಂ ಎಂದರೆ ತಾವರೆ ಎಂಬ ಅರ್ಥವಿದೆ. ಕಮಲದ ಹೂವಿನಂತೆ ಕಾಣುವುದರಿಂದ ಅದಕ್ಕೆ ಕಮಲ ಎನ್ನುವ ಅರ್ಥ ಸರಿ ಹೊಂದುತ್ತದೆ.

ಈ ಹಣ್ಣಿನಲ್ಲಿರುವ ಖನಿಜಾಂಶಗಳು: ಕ್ಯಾಲೊರಿ-136, ಪ್ರೊಟೀನ್ 3ಗ್ರಾಂ, ಕಾರ್ಬೋಹೈಡ್ರೇಟ್ಸ್ 29ಗ್ರಾಂ, ಫೈಬರ್ 7ಗ್ರಾಂ, ಕಬ್ಬಿಣಾಂಶ 8%, ಮೆಗ್ನೀಷಿಯಂ 12%, ವಿಟಮಿನ್ ಸಿ 9%, ವಿಟಮಿನ್ ಇ 4%.

ಕ್ಯಾಕ್ಟಸ್ ಜಾತಿಗೆ ಸೇರಿದ ಗಿಡದಲ್ಲಿ ಬೆಳೆಯುವ ಈ ಹಣ್ಣು ದಕ್ಷಿಣ ಅಮೆರಿಕಾ ಮೂಲದ್ದು. ಈ ಹಣ್ಣಿನ ಸೇವನೆಯಿಂದ ಆರೋಗ್ಯ ಲಾಭಗಳು ಅನೇಕ. ರುಚಿಯಲ್ಲಿ ಸಪ್ಪೆಯಾಗಿದೆ. ಇದರಲ್ಲಿ ಕೊಬ್ಬಿನಂಶ ಇಲ್ಲ, ಫೈಬರ್ ಅಧಿಕವಾಗಿದ್ದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುವವರಿಗೆ ಬಹಳ ಒಳ್ಳೆಯದು. ಕ್ಯಾನ್ಸರ್ ತಡೆಗಟ್ಟುತ್ತದೆ, ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ, ತ್ವಚೆಯ ಕಾಂತಿ ಹೆಚ್ಚಿಸುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles