ಶಿವನ ಪರಮ ಭಕ್ತೆ ಬೊಂತಾದೇವಿ

12 ನೇ ಶತಮಾನದ ವಚನಕಾರ್ತಿ ಬೊಂತಾದೇವಿ ರಾಜನ ಮಗಳಾಗಿದ್ದರೂ ಬಸವಣ್ಣನವರ ವಿಚಾರಧಾರೆಗೆ ಮಾರು ಹೋಗಿ ಕಲ್ಯಾಣದಲ್ಲಿ ಇತರೆ ವಚನಕಾರ್ತಿಯರೊಂದಿಗೆ ಸತ್ಯಶುದ್ಧ ಕಾಯಕ ಮಾಡಿದ ಶಿವಶರಣೆ.

ಸಮಾನವಾದ ಸಾತ್ವಿಕ ಪ್ರೇರಣೆ, ಸಂಕಲ್ಪ ಹೊಂದಿದ ಶರಣ ಸಮುದಾಯದಿಂದ ಸರಳ ಭಾಷೆಯಲ್ಲಿ, ಜನರಿಗೆ ಆಪ್ತವಾಗುವ ರೀತಿಯಲ್ಲಿ ರಚನೆಗೊಂಡಿದ್ದು ವಚನ ಸಾಹಿತ್ಯ. ಇಂತಹ ಸಾಹಿತ್ಯ ಮೂಡಿಬಂದ ಕಾಲ ಪರಿವರ್ತನೆಯ ಕಾಲ ಎನ್ನಬಹುದು.

ಪರಂಪರಾಗತವಾಗಿ ಬಂದಿದ್ದ ಜಾತಿ-ಮತ, ವರ್ಣ-ವೃತ್ತಿಭೇದಗಳಂತಹ ಅಸಮಾನತೆಗಳನ್ನು ಕಿತ್ತೊಗೆದು ಐಕ್ಯತೆಯನ್ನು ಸ್ಥಾಪಿಸಲು ಶರಣರು ಸಾಕಷ್ಟು ಪ್ರಯತ್ನಿಸುತ್ತಾರೆ. ಆ ಕಾಲದಲ್ಲಿ ಸ್ತ್ರೀಯರೂ ಸಹ ತಮ್ಮನ್ನು ಮುತ್ತಿಕೊಂಡಿದ್ದ ಅಸಮಾನತೆಯ ಸಂಕೋಲೆಗಳಿ0ದ ಹೊರಬರಲು, ತಮ್ಮ ವೈಚಾರಿಕ ಶಕ್ತಿಯಿಂದಲೇ ವಚನಗಳ ಮೂಲಕ ಜಾತಿವ್ಯವಸ್ಥೆ, ವೃತ್ತಿ ಭಿನ್ನತೆ, ಸಾಮಾಜಿಕ ಅಸಮಾನತೆ, ಇವೇ ಮೊದಲಾದ ಸಾಮಾಜಿಕ ಅನಿಷ್ಠಗಳನ್ನು ಹೋಗಲಾಡಿಸಲು ಶ್ರಮಿಸುತ್ತಾರೆ.

ಅರಸು ಮನೆತನದಿಂದ ಬಂದ ಅಕ್ಕಮಹಾದೇವಿಯಂತೆ, ವಿರಾಗಿಯಾಗಿ ಶಿವ ನಿಷ್ಠೆಯಲ್ಲಿ ತನ್ನನ್ನು ತೊಡಗಿಸಿಕೊಂಡ ವಚನಕಾರ್ತಿಯರಲ್ಲಿ ಬೊಂತಾದೇವಿ ಕೂಡಾ ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.
ಬೊಂತಾದೇವಿ ಕಾಶ್ಮೀರದ ಮಾಂಡವ್ಯಪುರದ ಅರಸನ ಮಗಳು. ಈಕೆಯ ಮೂಲಹೆಸರು ನಿಜದೇವಿ'. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ ನೆಲೆಗೊಂಡು ವೈರಾಗ್ಯ ತಾಳಿ ಸುಖ-ಭೋಗಗಳನ್ನೆಲ್ಲ ತೊರೆದು ಶಿವಶರಣರ ಸಂಗವನ್ನು ಮಾಡುತ್ತಾಳೆ. ಇವಳ ಮೂಲ ಹೆಸರು ನಿಜದೇವಿ. ದಿಗಂಬರೆಯಾಗಿದ್ದ ಶ್ರೇಷ್ಠ ಶಿವಭಕ್ತೆ.

ಅಕ್ಕಮಹಾದೇವಿಯಂತೆ ಅರಮನೆಯ ಭೋಗಭಾಗ್ಯಗಳನ್ನು ತೊರೆದು ಉಟ್ಟಬಟ್ಟೆಯನ್ನು ಕಳಚಿ ಕಲ್ಯಾಣದ ಕಡೆ ನಡೆದವಳು. ಅರಸೊತ್ತಿಗೆಯಲ್ಲಿ ಬೆಳೆದು ಐಷಾರಾಮಿ ಜೀವನ ನಡೆಸಬಹುದಾದ ಎಲ್ಲ ಸವಲತ್ತುಗಳಿದ್ದರೂ, ಬಾಲ್ಯದಲ್ಲಿಯೇ ಭೋಗವನ್ನು ತೊರೆಯುತ್ತಾಳೆ. ಲೌಕಿಕ ಜೀವನದಲ್ಲಿ ವೈರಾಗ್ಯವನ್ನು ತಳೆದು ಶಿವನನ್ನೇ ತನ್ನ ಪರದೈವ ಎಂದುಕೊ0ಡು ಆರಾಧಿಸುತ್ತಾಳೆ. ಹೀಗೆ ಶಿವಭಕ್ತಿಯಲ್ಲಿ ಬೊಂತಾದೇವಿಯವರದ್ದು ಉನ್ನತ ಸ್ಥಾನ.

ಒಂದೊಮ್ಮೆ ಶಿವನ ಪರಮ ಭಕ್ತೆಯಾಗಿದ್ದ ನಿಜದೇವಿಯನ್ನು ಪರೀಕ್ಷಿಸಲು ಶಿವನೇ ಬಂದು ಅವಳಿಗೆ ಒಂದು ಬೊಂತೆ(ಕೌದಿ) ಕೊಟ್ಟು ಇದನ್ನು ಹೊದೆದುಕೋ ಎನ್ನುತ್ತಾನೆ. ಶಿವನು ಕೊಟ್ಟ ಬೊಂತೆಯನ್ನು ಆಕೆ ಹೊದೆಯುತ್ತಾಳೆ. ಬೊಂತೆಯನ್ನು ಹೊದ್ದ ನಿಜದೇವಿಯನ್ನು ಅಲ್ಲಿನ ಜನಬೊಂತಾದೇವಿ’ ಎಂದು ಕರೆಯುತ್ತಾರೆ. ಅಂದಿನಿ0ದ ಆಕೆ ಬೊಂತಾದೇವಿ ಎಂದೇ ಪ್ರಸಿದ್ಧಳಾಗುತ್ತಾಳೆ.

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದು0ಟೆ ? ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುAಟೆ ? ಎಲ್ಲಿ ನೋಡಿದಡೆ ಬಯಲೊಂದೆದ ಬಿತ್ತಿಯಿ0ದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.'

ಮೇಲಿನ ಈ ವಚನದಲ್ಲಿ ಆಕೆ ಶಿವ ಸರ್ವಾಂತರ್ಯಾಮಿ. ಎಲ್ಲೆಡೆ ಇದ್ದಾನೆ ಎಂಬುದನ್ನು ಶಿವನನ್ನು ಬಯಲಿಗೆ ಹೋಲಿಕೆ ಮಾಡಿ ವಿವರಿಸಿದ್ದಾರೆ.

ಇಲ್ಲಿಬಯಲು’ ಅಂದರೆ ದೇವರು. ಊರ ಒಳಗಿನ ಬಯಲು, ಊರ ಹೊರಗಿನ ಬಯಲು ಎಂಬುದಿಲ್ಲ. ಬಯಲಿಗೆ ಒಳಗೆ ಹೊರಗೆ ಎನ್ನುವ ಭೇದವಿಲ್ಲ. ಹಾಗೆಯೇ ಶಿವನಿಗೆ ಯಾವ ಭೇದವಿಲ್ಲ. ಆತ ಅಲ್ಲಿ, ಇಲ್ಲಿ, ಒಳಗೆ, ಹೊರಗೆ ಎಲ್ಲೆಲ್ಲೂ ಇದ್ದಾನೆ.

ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಯರ ಬಯಲು ಎಂಬುದಾಗಿ ಎಲ್ಲಾದರೂ ಉಂಟೇ? ಎಂದು ಭೇದ ಮಾಡುವ ಜನರಿಗೆ ನೇರವಾಗಿಯೇ ಪ್ರಶ್ನಿಸುತ್ತಾಳೆ. ಜಾತಿವ್ಯವಸ್ಥೆಯ ಕುರಿತು ವಿಡಂಬನೆ ಮಾಡುತ್ತಾರೆ.

ಎಲ್ಲ ಕಡೆ ಇರುವುದೊಂದೇ ಬಯಲು, ಅಂದರೆ ಇರುವ ದೇವನೊಬ್ಬನೇ. ಅವನೇ ಶಿವ. ಎಲ್ಲೇ ಹೋಗಿ ಶಿವನನ್ನು ಕರೆದರೂ ಶಿವ ಓ'ಎನ್ನದೇ ಇರಲಾರ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಹೀಗೆ ಬೊಂತಾದೇವಿ ತನ್ನ ಅಸಾಮಾನ್ಯ ನಿಷ್ಠೆಯಿಂದ ಶರಣರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಮಾತ್ರವಲ್ಲ ದೇವಿಯ ಆಧ್ಯಾತ್ಮಿಕ ಸಾಧನೆ ಅಸಾಮಾನ್ಯವಾದುದು. ಇವರ ಆರು ವಚನಗಳು ದೊರಕಿವೆ. ತನ್ನ ವಚನಗಳಲ್ಲಿ ವೇದ, ಪುರಾಣ, ಆಗಮಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ.

ಇವರ ವಚನಗಳ ಅಂಕಿತಬಿಡಾಡಿ’. ಶಿವನನ್ನೇ `ಬಿಡಾಡಿ’ ಎಂದು ಕರೆದು ಶಿವನಿಗೆ ನಿಷ್ಠೆ ತೋರುತ್ತಾಳೆ. ದೊರೆತ ಇವರ ಆರು ವಚನಗಳಲ್ಲಿ ಶಿವನ ಸ್ವರೂಪ, ಅನಂತತೆ ಮತ್ತು ದೇವರು ಎಲ್ಲೆಡೆ ಇದ್ದಾನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ವಚನಗಳಲ್ಲಿ ಆಧ್ಯಾತ್ಮಿಕ ಸಾಧನೆ, ಸಮತಾಭಾವ ಮತ್ತು ಸಾಮಾಜಿಕ ಕಳಕಳಿಯೂ ವ್ಯಕ್ತವಾಗಿರುವುದನ್ನು ಕಾಣಬಹುದು.

Related Articles

1 COMMENT

  1. ಬೇವಿನ ಬೀಜವ ಬಿತ್ತಿ ಮಾವಿನ ಫಸಲು ಬಯಸುವ ಮೂಢಾ
    ಮಾವಿನ ಬೀಜವ ಬಿತ್ತಿ ಬೇವಿನ ಕಹಿಯ ನೀಡು ಮಾವಿನ ರುಚಿಯೇ ನೋಡಾ

ಪ್ರತಿಕ್ರಿಯೆ ನೀಡಿ

Latest Articles