ಶ್ರೀಕೃಷ್ಣನ ಕಥೆಗಳು

ಭಗವಾನ್ ಶ್ರೀಕೃಷ್ಣನ ಬಾಲಲೀಲೆಗ ಕುರಿತಂತೆ ಹಲವಾರು ಪುರಾಣ ಕಥೆಗಳಿವೆ.


ಭಗವಾನ್ ಶ್ರೀಕೃಷ್ಣ ಮತ್ತು ಅರಿಸ್ತಾಸುರ
ಒಂದು ದಿನ ಬೃಂದಾವನಕ್ಕೆ ದೊಡ್ಡ ಎತ್ತೊಂದು ವೃಂದಾವನಕ್ಕೆ ನುಗ್ಗಿ ದಾಂಧಲೆ ಮಾಡುತ್ತದೆ. ಆದರೆ ಅಲ್ಲಿನ ಗ್ರಾಮದ ಜನರಿಗೆ ಆ ಎತ್ತು ಎಲ್ಲಿಂದ ಬಂತು? ಹೇಗೆ ಬಂತು ಎಂಬುದು ತಿಳಿದಿರುವುದಿಲ್ಲö. ಹಾಗಾಗಿ ಅವರೆಲ್ಲರೂ ಸಹಾಯಕ್ಕಾಗಿ ಶ್ರೀಕೃಷ್ಣನ ಮೊರೆ ಹೋಗುತ್ತಾರೆ. ಶ್ರೀಕೃಷ್ಣ ಆ ಜಾಗಕ್ಕೆ ಬಂದಾಗ ಆ ಎತ್ತು ರಾಕ್ಷಸನ ರೂಪದಲ್ಲಿ ಬಂದಿದೆ ಎಂಬುದು ಆತನಿಗೆ ತಿಳಿದಿರುತ್ತದೆ. ಅವನು ಎತ್ತನ್ನು ನೆಲಕ್ಕೆ ಬೀಳಿಸಿ ಅದರ ಕೊಂಬುಗಳನ್ನು ಮುರಿಯುತ್ತಾನೆ. ಆಗ ಎತ್ತು ರಾಕ್ಷಸನ ರೂಪವನ್ನು ತಾಳುತ್ತದೆ. ಕೃಷ್ಣನ ಪಾದಗಳಿಗೆ ಎರಗುತ್ತದೆ.
ಆ ರಾಕ್ಷಸನು ಬೃಹಸ್ಪತಿಯ ಶಿಷ್ಯನಾಗಿರುತ್ತಾನೆ. ಗುರುವನ್ನು ಗೌರವಿಸದ ಕಾರಣ ಆತನು ಶಾಪಗ್ರಸ್ತನಾಗುತ್ತಾನೆ.
ಹಾಗಾಗಿ ಹಿರಿಯರನ್ನು, ಗುರುಗಳನ್ನು ಗೌರವಿಸದೇ ಹೋದರೆ ಅವರ ಕೋಪಕ್ಕೆ ಗುರಿಯಾಗುತ್ತೇವೆ ಎಂಬುದು ಈ ಕಥೆಯ ನೀತಿ.

ಕಾಳಿಂಗನನ್ನು ವಧಿಸಿದ ಶ್ರೀಕೃಷ್ಣ
ಒಂದೊಮ್ಮೆ ದೊಡ್ಡ ಕಾಳಿಂಗ ಸರ್ಪವೊಂದು ವೃಂದಾವನದೊಳಕ್ಕೆ ಬಂದು ಅದರ ಪಕ್ಕದಲ್ಲೇ ಹರಿಯುವ ಯಮುನಾ ನದಿಯಲ್ಲಿ ವಾಸಿಸತೊಡಗುತ್ತದೆ. ಹಾಗಾಗಿ ನದಿಯ ವಿಷಪೂರಿತವಾಗುತ್ತದೆ. ಇದರಿಂದ ಅಲ್ಲಿನ ಜನರು ಚಿಂತೆಗೀಡಾಗುತ್ತಾರೆ. ಅದಕ್ಕೆ ಕಾಳಿಂಗನನ್ನು ವಧಿಸಲು ಶ್ರೀಕೃಷ್ಣ ಮುಂದೆ ಬರುತ್ತಾನೆ. ಶ್ರೀಕೃಷ್ಣ ಕಾಳಿಂಗನ ಹೆಡೆಯ ಮೇಲೆ ಹತ್ತಿ, ನರ್ತಿಸಿ ಕಾಳಿಂಗನನ್ನು ವಧಿಸುತ್ತಾನೆ. ಮತ್ತೆ ವೃಂದಾವನಕ್ಕೆ ಬಂದು ತೊಂದರೆ ಕೊಡದಂತೆ ಕೇಳಿಕೊಳ್ಳುತ್ತಾನೆ. ಯಾವಾಗಾಲು ಒಳ್ಳೆಯತನ ಗೆಲುವು ಸಾಧಿಸುತ್ತದೆ ಎಂಬುದು ಈ ಕಥೆಯ ಸಾರಾಂಶ.

ಬೆಣ್ಣೆ ಕದ್ದ ಮುದ್ದು ಕೃಷ್ಣ
ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಗೆಳೆಯರೊಂದಿಗೆ ಸೇರಿಕೊಂಡು, ಮನೆಮನೆಗೆ ಹೋಗಿ ಬೆಣ್ಣೆ ಕದ್ದು ಮೆಲ್ಲುತ್ತಿದ್ದ. ಯಶೋಧೆ ಬೆಣ್ಣೆ ಗಡಿಗೆಗಳನ್ನು ಎತ್ತರದಲ್ಲಿ ನೇತು ಹಾಕಿರುತ್ತಿದ್ದಳು. ಆದರೂ ಗೆಳೆಯರ ನೆರವಿನೊಂದಿಗೆ ಗಡಿಗೆಯಲ್ಲಿದ್ದ ಬೆಣ್ಣೆಯನ್ನು ಖಾಲಿ ಮಾಡುತ್ತಿದ್ದ ತುಂಟ ಕೃಷ್ಣ.
ಒಂದು ದಿನ ಯಶೋಧೆ ಯಾವುದೋ ಕಾರಣಕ್ಕೆ ಹೊರಗೆ ಹೋಗಿದ್ದಳು. ಆಗ ಶ್ರೀಕೃಷ್ಣ ಎಲ್ಲ ಸ್ನೇಹಿತರನ್ನು ಒಟ್ಟುಗೂಡಿಸಿ ಗಡಿಗೆಯಲ್ಲಿದ್ದ ಬೆಣ್ಣೆ ಕದ್ದು ತಿನ್ನುತ್ತಿದ್ದರು. ಅಷ್ಟರಾಗಲೇ ಯಶೋಧೆ ಅಲ್ಲಿಗೆ ಬರುತ್ತಾಳೆ. ಆದರೆ ಶ್ರೀಕೃಷ್ಣನಿಗೆ ಅದು ತಿಳಿಯುವುದಿಲ್ಲ. ಎಲ್ಲರೂ ಓಡಿ ಹೋಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಶ್ರೀಕೃಷ್ಣನ ಗೆ ಅಮ್ಮನಿಂದ ಏಟು ತಿನ್ನುತ್ತಾನೆ. ಆತನ ತುಂಟಾಟಕ್ಕೆ ಯಶೋಧೆ ಕೋಪಿಸಿಕೊಳ್ಳುತ್ತಾಳೆ.
ಎಂದಿಗೂ ಹಿರಿಯರನ್ನು ಕೋಪಕ್ಕೆ ಸಿಲುಕಿಸಬಾರದು.

ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ಶ್ರೀಕೃಷ್ಣ
ಪ್ರತಿ ವರ್ಷ ಚೆನ್ನಾಗಿ ಮಳೆಯಾಗಲಿ ಎಂದು ವೃಂದಾವನದ ಜನರು ವರುಣ ದೇವ ಇಂದ್ರನಿಗೆ ಪೂಜೆ ಸಲ್ಲಿಸುತ್ತಿದ್ದರು. ಹಾಗೆಯೇ ಪ್ರತಿವರ್ಷವೂ ಯಾವುದೇ ಸಮಸ್ಯೆ ಇರಲಿಲ್ಲ. ಮಳೆ ಚೆನ್ನಾಗಿಯೇ ಆಗುತ್ತಿತ್ತು. ಒಂದು ವರ್ಷ ಗೋವರ್ಧನ ಪರ್ವತವನ್ನು ಆರಾಧಿಸುವಂತೆ ಶ್ರೀಕೃಷ್ಣ ವೃಂದಾವನದ ಜನರನ್ನು ಕೇಳಿಕೊಳ್ಳುತ್ತಾರೆ. ಅದರಿಂದ ವರುಣದೇವ ಕೋಪಗೊಳ್ಳುತ್ತಾನೆ. ವೃಂದಾವನದಲ್ಲಿ ಅಪಾರ ವೃಷ್ಟಿಯಾಗುವಂತೆ ಮಾಡುತ್ತಾನೆ. ಆಗ ಶ್ರೀಕೃಷ್ಣ ವೃಂದಾವನದ ಜನರನ್ನು ರಕ್ಷಿಸಲು ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿಯುತ್ತಾನೆ. ಅದು ಇಂದ್ರನಿಗೆ ತಿಳಿಯುತ್ತದೆ. ಇಂದ್ರ ಶ್ರೀಕೃಷ್ಣನಲ್ಲಿ ಕ್ಷಮೆ ಕೇಳುತ್ತಾನೆ.
ಕೋಪ ಒಳ್ಳೆಯದಲ್ಲ ಎಂಬುದು ಈ ಕಥೆಯಿಂದ ನಾವು ತಿಳಿದುಕೊಳ್ಳಬಹುದು.


ಒಂದು ದಿನ ಶ್ರೀಕೃಷ್ಣ ಗೆಳೆಯರೊಡಗೂಡಿ ದಟ್ಟವಾದ ಅರಣ್ಯದೊಳಕ್ಕೆ ತಮ್ಮ ಗೋವುಗಳನ್ನು ಕರೆದುಕೊಂಡು ಹೋಗುತ್ತಾರೆ. ಬಾಲಕರು ಆಟ ಆಡುವುದರಲ್ಲಿ ಮಗ್ನರಾಗಿರುತ್ತಾರೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅವರ ಗಮನಕ್ಕೆ ಬರುವುದಿಲ್ಲ. ಅವರ ಸುತ್ತಲೂ ಬೆಂಕಿ ಆವರಿಸುತ್ತದೆ. ಆಗ ಬಾಲಕರಿಗೆ ಏನು ಮಾಡುವುದೆಂದು ತೋಚುವುದಿಲ್ಲ. ಎಲ್ಲರೂ ಶ್ರೀಕೃಷ್ಣನಲ್ಲಿ ನಮ್ಮನ್ನು ಹೇಗಾದರೂ ಮಾಡಿ ರಕ್ಷಿಸು ಎಂದು ಬೇಡಿಕೊಳ್ಳುತ್ತಾರೆ.
`ಎಲ್ಲರೂ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನಾನು ಹೇಳುವವರೆಗೂ ಯಾರೂ ತೆರೆಯಬಾರದು ಎಂದು ಶ್ರೀಕೃಷ್ಣ ಕೇಳಿಕೊಳ್ಳುತ್ತಾನೆ. ಎಲ್ಲರೂ ಕಣ್ಣು ಮುಚಿಕೊಂಡಾಗ ಶ್ರೀಕೃಷ್ಣ ಬೆಂಕಿಯನ್ನೆಲ್ಲಾ ನುಂಗಿ ತನ್ನ ಗೆಳೆಯರನ್ನು ಹಾಗೂ ಗೋವುಗಳನ್ನು ಅಗ್ನಿಯಿಂದ ಪಾರು ಮಾಡುತ್ತಾನೆ.
ನೀತಿ: ದೇವರಲ್ಲಿ ನಂಬಿಕೆ ಇಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles