ಭಗವಾನ್ ಶ್ರೀಕೃಷ್ಣನ ಬದುಕಿನ ಕಥನವೇ ರೋಚಕ…

ಕೃಷ್ಣಎಂದರೆ ಪೂರ್ಣಾನಂದ ಸ್ವರೂಪನಾದವನು. ಅನಂತ ನಾಮಗಳಿಂದ ಕರೆಯಲ್ಪಡುವನು… ಭವ ಬಂಧ ಬಿಡಿಸಿ ಮೋಕ್ಷ ಕರುಣಿಸುವವನು…

*ಪ್ರಿಯಾ ಪ್ರಾಣೇಶ ಹರಿದಾಸ, ವಿಜಯಪುರ

ಭಗವಾನ್ ಶ್ರೀಕೃಷ್ಣ ಬೋಧಿಸಿದ ಸಂದೇಶಗಳು ಸಾರ್ವಕಾಲಿಕವಾದದ್ದು. ಭಗವದ್ಗೀತೆ ನಮ್ಮ ಜೀವನದ ಎಲ್ಲ ಸಂಶಯಗಳ ನಿವಾರಿಸಿ, ಸುಸಂದೇಶಗಳು ಸಾರಿ ನಮ್ಮ ಜೀವನವನ್ನು ಪ್ರಭಾವಿಸುತ್ತ ಬದಲಾವಣೆ ಮಾಡುತ್ತಾ ಬಂದಿದೆ. ಅವನ ಕುಶಲತೆ ಸರಳತೆ ನಮ್ಮ ಬದುಕಿನ‌ ದಾರಿದೀಪವಾಗಿದೆ. ಅವನ ಜಾಣ್ಮೆ ಮತ್ತು ಪ್ರಬುದ್ಧತೆ ನಮ್ಮ ಸಂಕಷ್ಟಗಳ ದೂರ ಮಾಡಿವೆ. ಒಟ್ಟಾರೆ ಇವನಿಗೆ ಸಮರಿಲ್ಲ. “ಕೃಷ್ಣಂ ವಂದೇ ಜಗದ್ಗುರು”. ಕೃಷ್ಣನಿಗಿಂತ ಜಗದ್ಗುರು ಬೇರಾರಿಲ್ಲ. ನಮ್ಮ ಭಾವ–ಬುದ್ಧಿಗಳಿಗೆ ಅವನು ಅತೀತ ಎಂಬ ಅನುಭವ ದಟ್ಟವಾಗುತ್ತದೆ.

ಕೃಷ್ಣಾವತಾರದ ಬಗ್ಗೆ…

ಶ್ರೀಹರಿ ಅವತರಿಸಲು ಸಂಕಲ್ಪಿಸಿದ ಶುಭ ಸಮಯವಾಯಿತು. ಜನನ ರಹಿತನಾದ, ಪೂರ್ಣಾನಂದನಾದ, ಬ್ರಹ್ಮಜನಕನು, ಸಕಲ ಭೂತಪರಿ ಪಾಲಕನಾದ, ಶ್ರಾವಣ ಮಾಸ ಕೃಷ್ಣಾಷ್ಟಮಿ ದಿನ ದೇವಕಿ ಮತ್ತು ವಸುದೇವರ ಸುತನಾಗಿ ಅವತರಿಸಿದನು. ಶ್ರೀಕೃಷ್ಙನಿಗೆ ರುಕ್ಮಿಣಿ ಸಹಿತ ಹದಿನಾರು ಸಾವಿರದಾ ಒಂದು ನೂರಾ ಏಂಟು ಪತ್ನಿಯರು. ಇವನು ಪಾದಕ್ಕೆ ತತ್ವಾಭಿಮಾನಿ ಜಯಂತನ ಮೂಲಕ ದಾಮೋದರ ನಾಮಕನಾಗಿ ಸಲಹುತ್ತಾನೆ.   ಪರೀಕ್ಷಿತ ರಾಜನಿಗೆ ಶ್ರೀಶುಕರು ಶ್ರೀಕೃಷ್ಣನ ಕಥೆ ಹೇಳುವರು. ಅಸಂಖ್ಯಾತ ರಾಕ್ಷಸರು ರಾಜರ ರೂಪದಲ್ಲಿ ಹುಟ್ಟಿ ಸಜ್ಜನರಿಗೆ ಪೀಡೆ ಮಾಡ ತೊಡಗಿದಾಗ, ದುಷ್ಟರಿಂದ ಭೂಭಾರ ಎನಿಸಿತು. ಭೂದೇವಿಯು ಆ ನಿಂದಕರ ಮತ್ತು ದುಷ್ಟರ ಭಾರ ಹೋರಲಾರದೇ ದುಃಖದಿಂದ ಬ್ರಹ್ಮ ದೇವರಿಗೆ ಮೊರೆ ಹೋಗುತ್ತಾಳೆ. ಆಗ ಬ್ರಹ್ಮ, ರುದ್ರಾದೇವತೆಗಳು ಕ್ಷೀರಗಡಲದಲ್ಲಿ ಪವಡಿಸುವ ಪರಮಾತ್ಮನಿಗೆ ಪುರುಷ ಸೂಕ್ತದಿಂದ ಸ್ತುತಿಸಿದರು. ಆಗ ಭಗವಂತ, ದುಷ್ಟರನ್ನು ಶಿಕ್ಷಿಸಲು ಇಷ್ಟರಲ್ಲೇ  ವಸುದೇವ, ದೇವಕಿಯಿಂದ ಅವತರಿಸುವೆನು. ಅಷ್ಟರಲ್ಲೇ ನೀವೆಲ್ಲರೂಲ್ಲರೂ ನಿಮ್ಮ ಅಂಶಗಳಿಂದ ಅವತರಿಸಿರಿ, ಹಾಗೇ ನಾನು ಭೂಮಂಡಲನಾಗಿರುವವರಿಗೂ ನೀವು ನಿಮ್ಮವರೆಲ್ಲರೂ ಯಾದವ  ಪಾಂಡವಾದಿ ಕುಲಗಳಲ್ಲಿ ಜನಿಸಿರಿ ಎಂದು ನುಡಿದನು.     

ಆಗ ಮಥುರಾಪುರದಲ್ಲಿ ಯದುಶ್ರೇಷ್ಟನಾದ ಶೂರ ರಾಜನಿದ್ದನು. ಈ ಶೂರನ ಮಗನೇ ವಸುದೇವ.ಇವನ 13 ನೇ ಹೆಂಡತಿಯೇ ದೇವಕಿ. ವಿದರ್ಭರಾಜನ ವಂಶಜದಲ್ಲಿ ಬರುವ ಪುನರ್ವಸುಗೆ “ಅಹುಕ” ನೆಂಬ ಮಗ,ಮತ್ತು ಅಹುಕಿ ಎಂಬ ಮಗಳು. ಈ ಅಹುಕನಿಗೆ ದೇವಕ ಮತ್ತು ಉಗ್ರಸೇನ ಎಂಬ ಇಬ್ಬರು ಗಂಡು ಮಕ್ಕಳು.ಈ ಅಹುಕನು ತನ್ನ ಮಗಳಾದ ದೇವಕಿಯನ್ನು, “ಯದುವಂಶ” ದಲ್ಲಿ ಬರುವ  ವಸುದೇವನಿಗೆ ಕೊಟ್ಟು ಮದುವೆ ಮಾಡಿದನು.     

ವಸುದೇವ ಮತ್ತು ದೇವಕಿಯರ ಜೊಡಿ ನೋಡಿ ಹಿಗ್ಗಿನಿಂದ ಉಗ್ರಸೇನನ ರಾಜನ ಮಗನಾದ ಕಂಸನು ತನ್ನ ದೊಡ್ಡಪ್ಪನ ಮಗಳಾದ ದೇವಕಿಯನ್ನು ಬಿಡಲು ಅತ್ಯಂತ ಹರುಷದಿಂದ ತಾನಾಗಿಯೇ ಸೂತನ ಸ್ಥಾನದಲ್ಲಿ ಕುಳಿತು ಅವರಿಬ್ಬರನ್ನು ಬಿಡಲು ಹೋರಟಿರುತ್ತಾನೆ. ಸಂಭ್ರಮದಿಂದಲಿ ವಾಯುವೇಗದಲ್ಲಿ ಹೊರಟಾಗ ಒಮ್ಮೆಲೆ ಅಶರೀರವಾಣಿ ಆಗುತ್ತದೆ. ಎಲೈ ! ಮೂಢ ನಿನ್ನ ಪ್ರೀತಿಯ ತಂಗಿಯಾದ ಅಷ್ಟಮ ಗರ್ಭದಿಂದ “ನಿನಗೆ ಮೃತ್ಯು” ಎಂದು ಹೇಳುತ್ತದೆ. ಆಗ ಅವರಿಬ್ಬರನ್ನು ಒಂದು ಮನೆಯಲ್ಲಿ ಕೂಡಿಡುತ್ತಾನೆ. ಆಗ ದೇವಕಿ ಮೊದಲ ಮಗ ಹುಟ್ಟಿದಾಗ, ವಸುದೇವ ತನ್ನಮೊದಲ ಮಗನನ್ನು ಕಂಸನಿಗೆ ಕೊಡುವಾಗ, ಕಂಸನುವಸುದೇವನನ್ನು ನೋಡಿ ನಿನ್ನ ಅಷ್ಟಮ ಪುತ್ರನಿಂದ ನನಗೆ ಕಂಟಕ ಇದೆ, ವಿನಃ ಮೊದಲ ಮಗುವಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಂತೋಷದಿಂದ ತನ್ನ ಅರಮನೆಗೆ ವಸುದೇವ ಹಿಂದಿರುಗುತ್ತಾನೆ.       

ಆಗ ನಾರದರು ಬಂದು ಕಂಸನಿಗೆ, ನೀವೆಲ್ಲರೂ ದೈತ್ಯ ವಂಶದವರು. ನಂದ ಗೋಪಾಲಕರು, ವಸುದೇವಾದಿಯಾದವರು, ದೇವಕಿ ಮುಂತಾದವರೆಲ್ಲರೂ ದೇವತೆಗಳು.‌ ಹೀಗಾಗಿ ನೀನು ದೇವತೆಗಳನ್ನು ಸಂಹರಿಸುವದು ಸರಿಯಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗಾಗಿ ವಸುದೇವ ಮತ್ತು ದೇವಕಿಯರನ್ನು ಸೆರೆಮನೆಯಲ್ಲಿಟ್ಟನು. ಮುಂದೆ ಹುಟ್ಟಿದ ಆರು ಪುತ್ರರನ್ನು ಹತ ಮಾಡಿದನು. ದೇವಕಿ ಆರನೇ ಗರ್ಭವನ್ನು ಭಗವಂತ ತನ್ನಯೋಗಮಾಯಾದಿಂದ ವಸುದೇವನ ಪತ್ನಿಯಾದ ರೋಹಿಣಿಯ ಗರ್ಭದಲ್ಲಿ ಸೆಳೆದು ಸ್ಥಾಪಿಸುತ್ತಾನೆ. ಆಗ ಹುಟ್ಟುವನೇ ಬಲರಾಮ.    

ಶ್ರೀ ಹರಿಯು ಅವತರಿಸುವ ಘಳಿಗೆ ಬಂತು. ದೇವಕಿ ಅಷ್ಟಮ ಗರ್ಭ ಧರಿಸಿ ಶ್ರಾವಣ ಕೃಷ್ಣ ಅಷ್ಟಮಿ ರೋಹಿಣಿ ನಕ್ಷತ್ರ ದಿನದಂದು ರಾತ್ರಿ ದೇವತೆಗಳು ಹೂಮಳೆಗರೆದರು, ಅಪ್ಸರೆಯರು ನೃತ್ಯ ಮಾಡಿದರು, ಕಿನ್ನರ ಗಂಧರ್ವರರು ಹಾಡಿದರು, ಹೀಗೆ  ಭಗವಂತ ಪ್ರಾದುರ್ಭ ವಿಸಿದನು. ಚತುರ್ಭುಜನಾದ, ಚಕ್ರಗಧಾಪದ್ಮ ಧರನಾದ, ವಜ್ರವೈಢೂರ್ಯ ಕೀರಟ ಕುಂಡಲ ಧಾರಿಯಾದ ಭಗವಂತನನ್ನು ಎವೆಯಿಕ್ಕದೇ ನೋಡುತ್ತ, ಭಗವಂತ ನಿನ್ನವಳಾದ ರಮೆಯಿಂದ (ಲಕ್ಷ್ಮಿ) ಕೂಡಿ ಪ್ರಕೃತಿಯ ಮೂರು ಗುಣಗಳನ್ನು ಬೇರಿಸಿ, ಬ್ರಹ್ಮಾಂಡವನ್ನು ಪುಟ್ಟಿಸಿದೆ ಎಂದು ನಾನಾ ವಿಧವಾಗಿ ವಸುದೇವ ದೇವಕಿ ಸ್ತುತಿಸಿದರು. ಆಗ ಭಗವಂತ ಹೇಳುತ್ತಾನೆ. ನೀವಿಬ್ಬರೂ ಸ್ವಾಯಂಭುವ ಮನ್ವಂತರದಲ್ಲಿ ಪ್ರಜಾಪತಿ ಎಂಬ ಸುತಪ ಮತ್ತು ಪ್ರಶ್ನಿ ಎಂಬುರಾಗಿದ್ದು ಬ್ರಹ್ಮನ ಅಣತಿಯಂತೆ ನೀವು ಪ್ರಜಾಸೃಷ್ಟಿಯಲ್ಲಿ ತೊಡಗಿ, ನೀವಿಬ್ಬರು ಮಗನ ಪಡೆಯಲು ಇಂದ್ರಿಗಳನ್ನು ಜಯಿಸಿ, ಎಲೆಗಳನ್ನು ಮತ್ತು ವಾಯವನ್ನು ಸೇವಿಸಿ , ಅಖಂಡವಾಗಿ ಹನ್ನೆರಡು ಸಾವಿರ ವರುಷ ನನ್ನನ್ನು ಪೂಜಿಸಿದಿರಿ ಹಾಗೇ ಭಜಿಸಿದಿರಿ. ನೀವು ಮಾಡಿದ ತಪ್ಪಸ್ಸಿಗೆ ನಾನು ಪ್ರತ್ಯಕ್ಷವಾದಾಗ ನನ್ನಂತೆ ಇರುವ ಮಗು ಬೇಕೆಂದು ವರ ಕೇಳಿದಾಗ ನಾನೇ ಮುಂದೆ ನಿಮ್ಮ ಮಗನಾಗಿ ಅವತರಿಸುವ ಹಾಗೇ ಮುಂದೆ ನೀವು ಕಶ್ಯಪ ಮತ್ತು ಅದಿತಿ ಆಗಿ ಹುಟ್ಟಿದಾಗ ನಿಮ್ಮ ಮಗನಾಗಿ ವಾಮನನಾಗಿ ಅವತರಿಸಿದೆ.

ಈಗ ಈ ಮೂರನೇ ಜನ್ಮದಲ್ಲಿ ನೀವು ವಸುದೇವ ದೇವಕಿ ಆಗಿರುವಿರಿ. ನಾನು ಮತ್ತೆ ಈಗ ನಿಮ್ಮ ಅಷ್ಟಮ ಗರ್ಭದಿಂದ ಅವತರಿಸಿದೆ. ನಿಮಗೆ ಸ್ಮರಣೆ ಸಲುವಾಗಿ ನನ್ನ ನಿಜ ರೂಪ ತೋರಿಸಿದೆನು. ವಸುದೇವ ಗೋಕುಲದಲ್ಲಿ ನನ್ನನ್ನು ಇಟ್ಟು, ಅಲ್ಲಿರುವ ಹೆಣ್ಣು ಶಿಶುವನ್ನು ತಂದು ಇಲ್ಲಿಡು ಎಂದು ಹೇಳಿದನು. ಅತ್ತ ಯಮುನಾ ತೀರದ ನಂದ ಗೋಕುಲದಲ್ಲಿ ಎರಡು ಗಳಿಗೆಯ ಅಂತರದಲ್ಲಿ ಯಶೋಧೆಯ ಗರ್ಭದಲ್ಲಿ ಹುಟ್ಟಿದವಳೇ ದುರ್ಗಾ . ಇವಳು ಲಕ್ಷ್ಮಿ ಸ್ವರೂಪಳು. ಇವಳಿಗೆ ಅನೇಕ ನಾಮಗಳಿಂದ ಕರೆಯುತ್ತಾರೆ. ಭಕ್ತಿಯಿಂದ ಭಜಿಸಿ ಮುಕ್ತರಾಗಿರಿ ಎಂದು ಹೇಳಿ ಭಗವಂತ ಮತ್ತೇ ಶಿಶು ರೂಪವಾದನು.

ವಸುದೇವನು ಒಂದು ಬುಟ್ಟಿಯಲ್ಲಿತಲೆಯ ಮೇಲೆ ಇಟ್ಟುಕೊಂಡು ಸೆರೆಮನೆಯಿಂದ ಹೋರಬರಲು ಯೋಗ ಮಾಯೆಯಿಂದ ದ್ವಾರಪಾಲಕರು ಗಾಢ ನಿದ್ರ ಪರವಶರಾದರು. ಸಂಕೋಲೆಗಳು ತನ್ನಷ್ಟಕ್ಕೆ ತಾವೇ ಬಿಚ್ಚಿಕೊಂಡವು. ಕಬ್ಬಿಣ ದ್ವಾರಗಳು ತೆರೆದವು. ಹೊರಗಡೆಯ ಕತ್ತಲೆ ಮಾಯವಾಯಿತು. ಮೇಘಗಳು ಗರ್ಜಿಸಿ ವಂದಿಸಿದವು. ಮಳೆಯು ತನ್ನ ಸಿಂಚನದ ಮೂಲಕ ಭಗವಂತನಿಗೆ ವಂದಿಸಿತು. ಶೇಷನು ಮಳೆ ಹನಿ ತಾಗಲಾರದೇ ತನ್ನ ಹೆಡೆಗಳಿಂದ ರಕ್ಷಣೆ ಮಾಡಿದನು. ಉಕ್ಕೇರಿದ ಯಮುನೆ ಭಗವಂತನನ್ನು ನೋಡಿ ಶಾಂತವಾಗಿ ಹಾದಿ ತೋರಿದಳು. ಹೀಗೆ ಸಮಸ್ತ ಜೀವಜಡ ರಾಶಿಯು ಭಗವಂತನಿಗೆ ತಾವು ಮಾಡುವ ಕಾರ್ಯಗಳ ಮೂಲಕ ವಂದನೆ ಅರ್ಪಿಸಿದವು.     

 ವಸುದೇವ ಗೋಕುಲ ಮುಟ್ಟಿ ಯಶೋದೆಯ ಪಕ್ಕದಲ್ಲಿ ತನ್ನ ಗಂಡು ಶಿಶುವನ್ನು ಮಲಗಿಸಿ, ಅಲ್ಲಿಯ ಹೆಣ್ಣು ಶಿಶುವನ್ನು ಪುನಃ ಮಥುರೆಗೆ ಮರಳಿ ಬಂದು ದೇವಕಿಯ ಪಕ್ಕದಲ್ಲಿ ಮಲಗಿಸಿದನು. ಸೆರೆಮನೆಯ ದ್ವಾರಗಳು ಮತ್ತೆ ಮೊದಲಿನಂತೆ ಮುಚ್ಚಿಕೊಂಡವು. ಕಾವಲುಗಾರರು, ಸೈನಿಕರು  ಎಲ್ಲವು ಮೊದಲಿಂತೇ ಆಯಿತು. ಆದರೆ ನಡೆದ ಘಟನೆಯ ಬಗ್ಗೆ ಯಾರಿಗೂ ಅದರ ಸ್ಮೃತಿ ಇರುವುದಿಲ್ಲ. ಸ್ವಲ್ಪ ಕ್ಷಣದಲ್ಲಿಯೇ ಮಗು ರೋಧನ ಮಾಡಿದಾಗ ಅಲ್ಲಿದ್ದ ಕಾವಲು ಗಾರರಿಗೆ ,ಸೈನಿಕರಿಗೆ ಧ್ವನಿ ಕೇಳಲು ಕಂಸನಿಗೆ ಓಡಿ ಹೋಗಿ ಹೇಳುತ್ತಾರೆ.        

ಆಗ ಕಂಸ ಬಂದು ಹೆಣ್ಣು ಶಿಶುವನ್ನು ಎತ್ತಿಕೊಳ್ಳವನು. ಆಗ ದೇವಕಿ ಅಳುತ್ತಾ ಎಷ್ಟೇ ಅಂಗಾಲಾಚಿದರು ಕೇಳದೆ ನಿಷ್ಕರುಣಿ ಯಾದ ಕಂಸನು ಆ ಶಿಶುವನ್ನು ಎತ್ತಿ ನೆಲಕ್ಕೆ ಅಪ್ಪಳಿಸ ಬೇಕೆನ್ನುವಷ್ಟರಲ್ಲಿ, ಆ ಶಿಶು ಆಕಾಶಕ್ಕೆ ಹಾರಿ ಅಷ್ಟಭುಜಗಳಿಂದ ಸರ್ವ ಅಲಂಕೃತೆಯಾದ ದುರ್ಗೇಯು ತನ್ನ ರೂಪವನ್ನು ತೋರಿಸುತ್ತಾಳೆ . ನಿನ್ನ ಸಂಹರಿಸಲು ಬೇರೆ ಕಡೆ ಹುಟ್ಟಿರುವನು ಎಂದು ಹೇಳಿ ಅದೃಶ್ಯಳಾಗುತ್ತಾಳೆ.

ಕಂಸನು ತನ್ನ ಮಂತ್ರಿ ,ಸೈನಿಕರನ್ನು ಕರೆಯಿಸಿ ಮಥುರೆಯಲ್ಲಿ ಹತ್ತು ದಿನಗಳ ಒಳಗೆ ಹುಟ್ಟಿದ ಎಲ್ಲಮಕ್ಕಳನ್ನು ಕೊಲ್ಲಲು ಆಜ್ಞೆಯನ್ನು ಮಾಡುತ್ತಾನೆ. ಆದರೆ ಕಂಸನು ಮಾಡಿದ ಉಪಾಯ ಯಾವುದು ಫಲಿಸುವದಿಲ್ಲ. ಭಗವಂತ ಶಿಶುವಾಗಿ ಇದ್ದಾಗಲೇ ಪೂತನಿಯ ಮೊಲೆ ಉಂಡು ಅವಳನ್ನು ಸಂಹರಿಸಿ ಅವಳಲ್ಲಿದ್ದ ಊರ್ವಶಿಗೆ ಮೋಕ್ಷ ಕೊಟ್ಟನು. ಶಕಟಾಸುರನನ್ನು ಸಂಹರಿದನು. ನಲಖೂಲಬರ, ಮಣಗ್ರೀವರಿಗೆ, ಧೇನುಕಾಸುರ, ವತ್ಸಾಸುರ ಹೀಗೆ ಮುಂತಾದ ವರನ್ನು ಸಂಹಾರ ಮಾಡಿದನು. ಕಾಳಿಯ ಮರ್ದನ ಮಾಡಿದ, ಗೋವರ್ಧನ ಪರ್ವತ ಎತ್ತಿದ ಅನೇಕಾನೇಕ ಲೀಲೆಗಳನ್ನು ಕೃಷ್ಣ ತೋರಿಸಿದನು. ಹೀಗೆ ನವನೀತ ಚೋರ ಬೆಳೆಯತೊಡಗಿದನು.  

ಕಂಸನು ಕೃಷ್ಣನ ಇರುವಿಕೆ ಗೊತ್ತಾಗಿ ಒಳ್ಳೆಯತನದ ನಾಟಕವಾಡಿ ಅಕ್ರೂರನನ್ನು ಮಥುರೆಗೆ ಕೃಷ್ಣನನ್ನು ಕರೆತರಲು ಕಳಿಸುತ್ತಾನೆ. ಕಂಸನ ಮಾತು ನಂಬಿದ ಅಕ್ರೂರ ಕೃಷ್ಣನನ್ನು ಕರೆಯಲುಹೋಗುತ್ತಾನೆ ಅಕ್ರೂರ ಮಥುರೆಗೆ ತಲುಪಿ ಕೃಷ್ಣನನ್ನು ನೋಡಿ ಆನಂದ ಭಾಷ್ಪಗಳಿಂದನ ಮಸ್ಕಾರ ಮಾಡಿದನು. ಹೀಗೆ ವಿಶ್ರಮಿಸುತ್ತಿರುವಾಗ ಅಕ್ರೂರ ತಾ ಬಂದ ವಿಷಯ, ನಂದನಿಗೆ ಹೇಳುತ್ತಾನೆ. ಕಂಸನಿಗೆ ನಾರದರಿಂದ  ಕೃಷ್ಣನು ವಾಸುದೇವ ಪುತ್ರ ಎಂದು ಅರಿತು. ಕೃಷ್ನನ್ನು ಸಂಹರಿಸಲು ಧನುರ್ಯಾಗ ಮಾಡುವುದಾಗಿ,ಅದಕ್ಕೆ ನನ್ನನ್ನು ಕರೆತೆಲು ಕಳಿಸಿದ್ದಾಗಿ ಹೇಳುತ್ತಾನೆ. ಆಗ ಯಶೋದೆ  ಮಗ ಕೃಷ್ಣ ಹೋಗುಕಂಸನು ಕೃಷ್ಣನ ಇರುವಿಕೆ ಗೊತ್ತಾಗಿ ಒಳ್ಳೆಯತನದ ನಾಟಕವಾಡಿ ಅಕ್ರೂರನನ್ನು ಮಥುರೆಗೆ ಕೃಷ್ಣನನ್ನು ಕರೆತರಲು ಕಳಿಸುತ್ತಾನೆ. ಕಂಸನ ಮಾತು ನಂಬಿದ ಅಕ್ರೂರ ಕೃಷ್ಣನನ್ನು ಕರೆಯಲು ಹೋಗುತ್ತಾನೆ ಅಕ್ರೂರ ಮಥುರೆಗೆ ತಲುಪಿ ಕೃಷ್ಣನನ್ನು ನೋಡಿ ಆನಂದ ಭಾಷ್ಪಗಳಿಂದ ನಮಸ್ಕಾರ ಮಾಡಿದನು.

ಹೀಗೆ ವಿಶ್ರಮಿಸುತ್ತಿರುವಾಗ ಅಕ್ರೂರ ತಾ ಬಂದ ವಿಷಯ, ನಂದನಿಗೆ ಹೇಳುತ್ತಾನೆ. ಕಂಸನಿಗೆ ನಾರದರಿಂದ  ಕೃಷ್ಣನು ವಾಸುದೇವ ಪುತ್ರ ಎಂದು ಅರಿತು. ಕೃಷ್ನನ್ನು ಸಂಹರಿಸಲು ಧನುರ್ಯಾಗ ಮಾಡುವುದಾಗಿ,ಅದಕ್ಕೆ ನನ್ನನ್ನು ಕರೆತೆಲು ಕಳಿಸಿದ್ದಾಗಿ ಹೇಳುತ್ತಾನೆ. ಆಗ ಯಶೋದೆ  ಮಗ ಕೃಷ್ಣ ಹೋಗುವದನ್ನು ಕೇಳಿ ದೇಹದಲ್ಲಿ ಪ್ರಾಣ ಇಲ್ಲದೇ ಹೇಗ ! ಇರಲಿ ಅಂತದುಂಖಿಸಿದಳು. ಕೃಷ್ಣನು ಮಥುರೆಗೆ ಹೋಗುವ ವಿಷಯ  ಊರಲ್ಲಿ ಕಾಳ್ಗಿಚ್ಚಿನಂತೆ ಗೋವುಗಳು ,ಪ್ರಾಣಿ ಪಕ್ಷಿ ಸಮಸ್ತ ಜೀವಿಗಳು ಭಾವೋದ್ವೇಗದಿಂದ ರೋಧನ ವ್ಯಕ್ತಪಡಿಸಿದವು.          

ಗೋಪಿಯರು ಕೃಷ್ಣನ ಸಂಗದಿಂದ ಬಿಡಲಾರದಾದರು. ಕೃಷ್ಣನ ಕ್ರೀಡೆಯನ್ನುಕಂಡು ಮೋಹಿತರಾಗುತಿದ್ದರು. ಗೋಪಿಯರು ಕೃಷ್ಣನ ಪುಣ್ಯಚರಿತವನ್ನು ಪಾಡಿ, ಅವನಿಂದ ಕೂಡಿ ಜಲ ವಿಹಾರ ಮಾಡಲು ಯಮುನೆಯ ಬಳಿ ಹೋಗುವುದನ್ನು ನೆನೆದು ಅತ್ತರು. ಪತಿಸುತರನ್ನು, ಸಹೋದರ ಬಂಧು ಜನರನ್ನು ತಿರಸ್ಕರಿಸಿ ನಿನ್ನಲ್ಲಿ ಬಂದ ಶರಣಾಗತರಾಗಿರುವ ನಮಗೆ ನೀನೆ ಗತಿ ಎಂದು ತಿಳಿದಿರುವೆವು. ಪಾಮರರ ಪಾಪ ನಿವಾರಣೆಗೆ ಅವತರಿಸಿರುವೆ. ನೀನು ಮಧುರೆಗೆ ಹೋದರೆ ನಮ್ಮ ಗತಿ ಏನು ? ಎಂದು  ಕೃಷ್ಣನನ್ನು ಮಥುರೆಗೆ ಹೋಗದಿರಲು ಮನ ಓಲೈಸಲು ಎತ್ನಿಸಿದರು.

ಕುಬ್ಜೆ, ಕುವಲಯಾಪೀಡ ಆನೆಯನ್ನು ಅನುಗ್ರಹಿಸುತ್ತಾನೆ. ದ್ವಾರಕ ಪ್ರವೇಶಿಸಿ ಚಾಣೂರ ಮುಷ್ಟಿಕರ ಸಂಹಾರ.  

ಸೋದರಮಾವ ಕಂಸನ ವಧೆ. ತಂದೆತಾಯಿಯರ ಭೇಟಿಯಾಗಿ,ಉಗ್ರಸೇನ ಮಹಾರಾಜನನ್ನು ಕಾರಾಗೃಹದಿಂದ ಬಿಡುಗಡೆಗೊಳಿಸಿ ಮತ್ತೆ  ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿ ರಾಜನನ್ನಾಗಿ ಸಿದನು.

ವಸುದೇವನು  ಬಲರಾಮ ಕೃಷ್ಣರಿಗೆ  ಉಪನಯನ ಮಾಡಿ , ಬ್ರಾಹ್ಮಣರಿಗೆ ಭೂರಿ ದಕ್ಷಿಣೆ ಕೊಟ್ಟು ಗೋದಾನ ಮಾಡಿ ಸತ್ಕರಿಸಿದನು. ಕೃಷ್ಣರಾಮರು ಹುಟ್ಟಿದಾಗ ಸಂಕಲ್ಪಿಸಿದ ” ಆಯುತ” ಗೋದಾನವನ್ನು ಕೊಟ್ಟನು. ಯಾದವ ಕುಲಗುರುಗಳಾದ ಗರ್ಗಾಚಾರ್ಯರರಿಂದ ಗಾಯಂತ್ರಿ ಮಂತ್ರೋಪ ದೇಶವಾಗುತ್ತದೆ. ನಂತರ ಆವಂತಿಯಲ್ಲಿರುವ ಸಾಂದೀಪನಾಚಾರ್ಯರ ಕಡೆ  ಕಲಿಯಲು ಗುರುಕಲಕ್ಕೆ ಕೃಷ್ಣಬಲರಾಮರು ತೆರಳುತ್ತಾರೆ. ಆರವತ್ತನಾಲ್ಕು ದಿನಗಳಲ್ಲಿ  ಸಕಲ ವಿದ್ಯೆಗಳನ್ನು ಕಲಿಯುತ್ತಾರೆ.

ವಿದ್ಯೆ ಮುಗಿಸಿ ಗುರು ಕಾಣಿಕೆ ಅರ್ಪಣೆ ಕೇಳಿದಾಗ ಸಂದೀಪನಾಚಾರ್ಯರರು ತಮ್ಮ ಪತ್ನಿಯಲ್ಲಿ ವಿಚಾರಿಸಿ ಹೇಳಿದರು. ಸಮುದ್ರದಲ್ಲಿ ತಮ್ಮ‌ ಪುತ್ರ ಮುಳಿಗಿರುವು ದಾಗಿ, ಅವನನ್ನು ಬದುಕಿಸಿ ಕೊಡಬೇಕೆಂದು ಹೇಳಿದರು. ಅದನ್ನು ಕೇಳಿ ರಾಮಕೃಷ್ಣರು ಸಮುದ್ರ ತೀರಕ್ಕೆ ಬಂದಾಗ ಸಮುದ್ರ ರಾಜನು ಕಾಣಿಕೆ ಕೊಟ್ಟು ಪೂಜಿಸಿದನು. ಬಂದ ಕಾರಣ ಕೇಳಿದಾಗ ಗುರುಗಳ ಪುತ್ರನ ಕುರಿತು ಹೇಳಿದಾಗ, ಆಗ ಸಮುದ್ರರಾಜನು ಅಪಹರಿಸಿದ್ದು ನಾನಲ್ಲ ಪಂಚಜನ ಎಂಬ ರಾಕ್ಷಸನು ಎಂದು ಹೇಳಿದನು.

ರಾಮಕೃಷ್ಣರು ಸಮುದ್ರದಲ್ಲಿದ್ದ ಪಂಚಜನ ಸಂಹರಿಸಿ, ಅವನ ಹೊಟ್ಟೆಯಲ್ಲದ್ದ ಲಕ್ಷ್ಮಿ ಸಾನಿಧ್ಯ ಇದ್ದ ಆ ದಿವ್ಯ ಶಂಖವನ್ನು ಶ್ರೀ ಕೃಷ್ಣನು ಸ್ವಿಕರಿಸಿದನು. ಅದೇ “ಪಾಂಚಜನ್ಯಶಂಖ” ವಾಗಿಪ್ರಖ್ಯಾತವಾಯಿತು. ಮುಂದೆ ಯಮನಲ್ಲಿ ಹೋಗಿ ಗುರುಪುತ್ರನನ್ನು ಕೇಳಿ ಸಾಂದೀಪನ ಆಚಾರ್ಯರ ಗುರುಗಳಿಗೆ ಅವರ ಮಗನನ್ನು ಒಪ್ಪಿಸಿದನು. ಹೀಗೆ ಗುರು ದಕ್ಷಿಣೆ ಮುಟ್ಟಿಸಿದನು. ದ್ವಾರಕಾ ಪಟ್ಟಣದ ನಿರ್ಮಾಣ. ಕಾಲಯವನ ಮತ್ತು ಮುಚುಕುಂದರ ಸಂಹಾರ. ದ್ವಾರಕಾ ಆಗಮನ,ರೇವತಿ ಯೊಂದಿಗೆ ಬಲರಾಮರ ವಿವಾಹ. ರುಕ್ಮಿಣಿಯ ಸಂದೇಶ ಪಡೆದ ಕೃಷ್ಣ ಸ್ವಯಂವರಕ್ಕೆ ಮೊದಲೇ ರುಕ್ಮಿಣಿಯ ಅಪಹರಣ ರುಕ್ಮಿಣಿಯ ಮತ್ತು ಶಿಶುಪಾಲರೊಡನೆ ಸಮರ ರುಕ್ಮಿಯು ಸೋಲುತ್ತಾನೆ. ದ್ವಾರಕೆಗೆ ರುಕ್ಮಿಣಿಯನ್ನು ಕರೆ ತಂದು ಅವಳೊಡನೆ ವಿವಾಹ ನಡೆಯುತ್ತದೆ. ಸತ್ಯಭಾಮಳ ಜೊತೆ ವಿವಾಹ ಮತ್ತು ಷಣ್ಮಹಿಷಿಯರ ಜೊತೆ ವಿವಾಹ ಮತ್ತು ನರಕಾಸುರನನ್ನು ಕೊಂದು, ಅವನ ಕಾರಾಗೃಹದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಮದುವೆಯಾಗಿ ದ್ವಾರಕಾದಲ್ಲಿ ಸುಖವಾಗಿದ್ದನು.

ಇಂದ್ರಪ್ರಸ್ಥಕ್ಕೆ ಕೃಷ್ಣನ ಆಗಮನ

ಧರ್ಮರಾಜನಿಂದ ರಾಜಸೂಯ ಯಾಗಕ್ಕೆ ಪ್ರಾರಂಭವಾಗುತ್ತದೆ. ಅಲ್ಲಿ ಕೃಷ್ಣನಿಗೆ ಪ್ರಥಮ ಪೂಜೆ ಇದನ್ನು ವಿರೋಧ ಮಾಡಿದ ಶಿಶುಪಾಲನನ್ನು ಸುದರ್ಶನ ಚಕ್ರದಿಂದ ಸಂಹಾರ ಮಾಡುತ್ತಾನೆ. ಯಾಗದ ಸಮಾಪ್ತಿ, ಶಾಲ್ವನ ಸಂಹಾರ. ದಂತವಕ್ತ್ರನ ಉದ್ಧಾರ ಕೃಷ್ಣ ತನ್ನ ಪ್ರಿಯ ಮಿತ್ರ ಸುಧಾಮನನ್ನು ಅನುಗ್ರಹಿಸುತ್ತಾನೆ. ಕೌರವ  ಪಾಂಡವರ ಕುರುಕ್ಷೇತ್ರ ಯುದ್ಧದಲ್ಲಿ‌  ಪಾಂಡವರು 7 ಅಕ್ಷೋಹಿಣಿ ಸೈನ್ಯದ ಜೊತೆ ಉತ್ತರಾಭಿ ಮುಖವಾಗಿ ನಿಂತರೆ , ಕೌರವರು 11 ಅಕ್ಷೋಹಿಣಿ ಸೈನ್ಯದ ಜೊತೆ ದಕ್ಷಿಣಾ ಭಿಮುಖವಾಗಿ ನಿಂತರು. ಹದಿನೆಂಟು ಅಕ್ಷೋಹಿಣಿ ಸೈನ್ಯಗಳ ನಡುವೆ ಹದಿನೆಂಟು ದಿನ ಘನಘೋರ ಯುದ್ಧ ನಡೆಯಿತು. ರಣರಂಗದಲ್ಲಿ ಅರ್ಜುನ ಎಲ್ಲ ಅಣ್ಣತಮ್ಮಂದಿರು, ಗುರುಗಳನ್ನು ಬಂಧು ಬಾಂಧವರನ್ನು ನೋಡಿ ಬಹಳ ದುಃಖದಿಂದ ಯುದ್ಧಕ್ಕೆ ನಿರಾಕರಿಸಿದಾಗ, ಕೃಷ್ಣನು ತನ್ನ ವಿರಾಟ ರೂಪ ತೋರಿಸಿ ಭವದ್ಗೀತೆಯನ್ನು ಉಪದೇಶಿಸುತ್ತಾನೆ. ಈ ಭವದ್ಗೀತೆಯಲ್ಲಿ 18 ಅಧ್ಯಾಯಗಳು 700 ಶ್ಲೋಕಗಳು ಒಳಗೊಂಡಿದೆ.

ಹೀಗೆ ಕುರುಕ್ಷೇತ್ರ ಯುದ್ದ ನಡೆದು ಪಾಂಡವರಿಗೆ ಜಯವಾಗುತ್ತದೆ. ಭಗವಂತ ಅಧರ್ಮ ತಾಂಡವ ಆಡಿದಾಗ ಒದೊಂದು ಅವತಾರ ಎತ್ತಿ ಧರ್ಮವನ್ನು ರಕ್ಷಿಸುತ್ತಾನೆ. ಹೀಗೆ ಕೃಷ್ಣನು ಯಾದವಕುಲವು ನಾಶವಾಯಿತು.‌ತಮ್ಮ ಬಂದ ಕೆಲಸ ಮುಗಿಯಿತೆಂದು  ಬಲರಾಮನಿಗೆ ಅಪ್ಪಣೆ ಕೊಡಲು, ಬಲರಾಮನು ಭಗವಂತನನ್ನು ಧ್ಯಾನಿಸಿ,ದೇಹವನ್ನು ಪರಿತ್ಯಜಿಸಿದನು.

ಪೀತಾಂಬರಧಾರಿಯಾದ ಶಂಖಗಧಾಚಕ್ರ ಪದ್ಮಧಾರಿಯಾದ, ಸರ್ವಾಭರಣನಾದ  ಭಗವಂತನು  ತನ್ನ ಎಡ ತೊಡೆಯ ಮೇಲೆ  ಬಲಗಾಲವನಿಟ್ಟು ಆಡಿಸುತ್ತಾ ಕುಳಿತ್ತಿದ್ದಾಗ ಜರಾವ್ಯಾಧನು, ತನ್ನ ಬಾಣದಿಂದ ಶ್ರೀಕೃಷ್ಣನ ಚರಣವನ್ನು ಮೃಗವೆಂದು ಭಾವಿಸಿ ಬಾಣ ಬಿಡುತ್ತಾನೆ. ವ್ಯಾಧನು ಬಂದು ನೋಡಲಾಗಿ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟಾಗ , ವ್ಯಾಧನನ್ನು ಸಂತೈಸಯತ್ತಾ , ನಿನ್ನ ಅಪರಾಧ ಇಲ್ಲ, ಎಲ್ಲವು ನನ್ನ ಇಚ್ಛೆಯಂತೆ ನಡೆದಿದೆ. ಇದರಿಂದ ನಿನಗೆ ಸ್ವರ್ಗ ಪ್ರಾಪ್ತಿ ಎಂದು ಹೇಳಿತ್ತಾನೆ. ಅದೇ ರೀತಿ ವ್ಯಾಧನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ದಾರುಕನಿಗೆ, ನೀನು ದ್ವಾರಕೆಗೆ ಹೋಗು, ನನ್ನ(ಕೃಷ್ಣ) ಮತ್ತು ಅಣ್ಣ ಬಲರಾಮ ನಿರ್ಯಾಣದ ಸುದ್ದಿ ಮುಟ್ಟಿಸು. ಇ0ದಿನಿಂದ ಏಳು ದಿನಗಳವರಿಗೆ ದ್ವಾರಕೆ ಸಮುದ್ರದಲ್ಲಿ ಮುಳುಗುತ್ತದೆ. ಎಲ್ಲರೂ ತಮ್ಮ ತಮ್ಮ ಪರಿವಾರದೊಂದಿಗೆ  ಅರ್ಜುನನ ಹಿಂದೆ ಇಂದ್ರಪ್ರಸ್ಥಕ್ಕೆ ಹೋಗಲು ತಿಳಿಸು ಎಂದು ಹೇಳುತ್ತಾನೆ. ಎಲ್ಲ ಸಂಸಾರವು ನನ್ನ ಇಚ್ಛೆಯಿಂದ ನಿಂತಿರುವುದು ಎಂದು ಹೇಳಿದನು.

ದಾರುಕನು ಶ್ರೀ ಕೃಷ್ಣನಿಗೆ ನಮಸ್ಕರಿಸಿ ದ್ವಾರಕೆಗೆ ಹೊರಟು ಹೋದನು. ಶ್ರೀಕೃಷ್ಣನು ತನ್ನ ಮೂಲರೂಪದಲ್ಲಿ ಐಕ್ಯ ಹೊಂದಿ, ನೇತ್ರಗಳನ್ನು ಮುಚ್ಚಿ, ಶರೀರವನ್ನು ಯೋಗಧಾರಣೆಯಿಂದ, ಅಂತರ್ಧಾನ ಮಾಡಿ ಪರಂಧಾಮಗೈದನು. ಇತ್ತ ಕಡೇ ಈ ಸುದ್ದಿ ಕೇಳುತ್ತಲೇ ದೇವಕಿ, ರೋಹಿಣಿ, ವಸುದೇವರು ತಮ್ಮ ಶರೀರಗಳನ್ನು ತ್ಯಜಿಸಿದರು. ರುಕ್ಮಿಣಿ ಸತ್ಯಭಾಮೆಯರು ಲಕ್ಷ್ಮಿ ದೇವಿಯ ಅವತಾರವಾಗಿದ್ದರಿಂದ ವನದಲ್ಲಿ ಅದೃಶ್ಯರಾಗಿ ವೈಕುಂಠ ಸೇರಿದರು. ಏಳು ದಿನಗಳಲ್ಲಿ ಭಗವಂತನ ಮಂದಿರ (ಶ್ರೀಕೃಷ್ಣನ ಸನ್ನಿಧಾನ ಇರುತ್ತದೆ) ಬಿಟ್ಟು ಎಲ್ಲವೂ ಮುಳುಗುತ್ತದೆ. ಉಳಿದವರು ಅರ್ಜುನನ ಹಿಂದೆ ಹೋಗುತ್ತಾರೆ. ಇಂದ್ರಪ್ರಸ್ಥಕ್ಕೆ ಹೋಗಿ ಅಣ್ಣನಾದ ಧರ್ಮರಾಜ ಮತ್ತು ಸಹೋದರರ ಮುಂದೆ ಕೃಷ್ಣನ ನಿರ್ಯಾಣದ ಬಗ್ಗೆ ಹೇಳಿದನು. ಅವರು  ಸ್ವರ್ಗಾರೋಹಣ ಮಾಡಿ ತಮ್ಮ ಮೂಲ ರೂಪವನ್ನು ಹೊಂದಿದರು.

         

ದ್ವಾರಕ ಪ್ರವೇಶಿಸಿ ಚಾಣೂರ ಮುಷ್ಟಿಕರ ಸಂಹಾರ

   ಸೋದರಮಾವ ಕಂಸನ ವಧೆ.ತಂದೆತಾಯಿಯರ ಭೇಟಿಯಾಗಿ, ಉಗ್ರಸೇನ ಮಹಾರಾಜನನ್ನು ಕಾರಾಗೃಹದಿಂದ ಬಿಡುಗಡೆಗೊಳಿಸಿ ಮತ್ತೆ  ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿ ರಾಜನನ್ನಾಗಿ ಸಿದನು. ವಸುದೇವನು  ಬಲರಾಮ ಕೃಷ್ಣರಿಗೆ  ಉಪನಯನ ಮಾಡಿ , ಬ್ರಾಹ್ಮಣರಿಗೆ ಭೂರಿ ದಕ್ಷಿಣೆ ಕೊಟ್ಟು ಗೋದಾನ ಮಾಡಿ ಸತ್ಕರಿಸಿದನು. ಕೃಷ್ಣರಾಮರು ಹುಟ್ಟಿದಾಗ ಸಂಕಲ್ಪಿಸಿದ ” ಆಯುತ” ಗೋದಾನವನ್ನು ಕೊಟ್ಟನು. ಯಾದವ ಕುಲಗುರುಗಳಾದ ಗರ್ಗಾಚಾರ್ಯರರಿಂದ ಗಾಯಂತ್ರಿ ಮಂತ್ರೋಪ ದೇಶವಾಗುತ್ತದೆ. ನಂತರ ಆವಂತಿಯಲ್ಲಿರುವ ಸಾಂದೀಪನಾಚಾರ್ಯರ ಕಡೆ  ಕಲಿಯಲು ಗುರುಕಲಕ್ಕೆ ಕೃಷ್ಣಬಲರಾಮರು ತೆರಳುತ್ತಾರೆ. ಆರವತ್ತನಾಲ್ಕು ದಿನಗಳಲ್ಲಿ ಸಕಲ ವಿದ್ಯೆಗಳನ್ನು ಕಲಿಯುತ್ತಾರೆ. ವಿದ್ಯೆ ಮುಗಿಸಿ ಗುರು ಕಾಣಿಕೆ ಅರ್ಪಣೆ ಕೇಳಿದಾಗ ಸಂದೀಪನಾಚಾರ್ಯರರು ತಮ್ಮ ಪತ್ನಿಯಲ್ಲಿ ವಿಚಾರಿಸಿ ಹೇಳಿದರು. ಸಮುದ್ರದಲ್ಲಿ ತಮ್ಮ‌ ಪುತ್ರ ಮುಳಿಗಿರುವು ದಾಗಿ, ಅವನನ್ನು ಬದುಕಿಸಿಕೊಡಬೇಕೆಂದು ಹೇಳಿದರು. ಅದನ್ನು ಕೇಳಿ ರಾಮಕೃಷ್ಣರು ಸಮುದ್ರ ತೀರಕ್ಕೆ ಬಂದಾಗ ಸಮುದ್ರ ರಾಜನು ಕಾಣಿಕೆ ಕೊಟ್ಟು ಪೂಜಿಸಿದನು. ಬಂದ ಕಾರಣ ಕೇಳಿದಾಗ ಗುರುಗಳ ಪುತ್ರನ ಕುರಿತು ಹೇಳಿದಾಗ, ಆಗ ಸಮುದ್ರರಾಜನು ಅಪಹರಿಸಿದ್ದು ನಾನಲ್ಲ ಪಂಚಜನ ಎಂಬ ರಾಕ್ಷಸನು ಎಂದು ಹೇಳಿದನು.

ರಾಮಕೃಷ್ಣರು ಸಮುದ್ರದಲ್ಲಿದ್ದ ಪಂಚಜನ ಸಂಹರಿಸಿ,ಅವನ ಹೊಟ್ಟೆಯಲ್ಲದ್ದ ಲಕ್ಷ್ಮಿ ಸಾನಿಧ್ಯ ಇದ್ದ ಆ ದಿವ್ಯ ಶಂಖವನ್ನು ಶ್ರೀ ಕೃಷ್ಣನು ಸ್ವಿಕರಿಸಿದನು.ಅದೇ “ಪಾಂಚಜನ್ಯಶಂಖ” ವಾಗಿಪ್ರಖ್ಯಾತವಾಯಿತು.

ಮುಂದೆ ಯಮನಲ್ಲಿ ಹೋಗಿ ಗುರುಪುತ್ರನನ್ನು ಕೇಳಿ, ಸಾಂದೀಪನ ಆಚಾರ್ಯರ ಗುರುಗಳಿಗೆ ಅವರ ಮಗನನ್ನು ಒಪ್ಪಿಸಿದನು. ಹೀಗೆ ಗುರು ದಕ್ಷಿಣೆ ಮುಟ್ಟಿಸಿದನು.

ದ್ವಾರಕಾ ಪಟ್ಟಣದ ನಿರ್ಮಾಣ

ಕಾಲಯವನ ಮತ್ತು ಮುಚುಕುಂದರ ಸಂಹಾರ. ದ್ವಾರಕಾ ಆಗಮನ, ರೇವತಿಯೊಂದಿಗೆ ಬಲರಾಮರ ವಿವಾಹ. ರುಕ್ಮಿಣಿಯ ಸಂದೇಶ ಪಡೆದ ಕೃಷ್ಣ ಸ್ವಯಂವರಕ್ಕೆ ಮೊದಲೇ ರುಕ್ಮಿಣಿಯ ಅಪಹರಣ ರುಕ್ಮಿಣಿಯ ಮತ್ತು ಶಿಶುಪಾಲರೊಡನೆ ಸಮರ ರುಕ್ಮಿಯು ಸೋಲುತ್ತಾನೆ. ದ್ವಾರಕೆಗೆ ರುಕ್ಮಿಣಿಯನ್ನು ಕರೆ ತಂದು ಅವಳೊಡನೆ ವಿವಾಹ ನಡೆಯುತ್ತದೆ. ಸತ್ಯಭಾಮಳ ಜೊತೆ ವಿವಾಹ ಮತ್ತು ಷಣ್ಮಹಿಷಿಯರ ಜೊತೆ ವಿವಾಹ ಮತ್ತು ನರಕಾಸುರನನ್ನು ಕೊಂದು, ಅವನ ಕಾರಾಗೃಹದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಮದುವೆಯಾಗಿ ದ್ವಾರಕಾದಲ್ಲಿ ಸುಖವಾಗಿದ್ದನು. ಇಂದ್ರಪ್ರಸ್ಥಕ್ಕೆ ಕೃಷ್ಣನ ಆಗಮನ. ಧರ್ಮರಾಜನಿಂದ ರಾಜಸೂಯ ಯಾಗ ಪ್ರಾರಂಭವಾಗುತ್ತದೆ. ಅಲ್ಲಿ ಕೃಷ್ಣನಿಗೆ ಪ್ರಥಮ ಪೂಜೆ ಇದನ್ನು ವಿರೋಧ ಮಾಡಿದ ಶಿಶುಪಾಲನನ್ನು ಸುದರ್ಶನ ಚಕ್ರದಿಂದ ಸಂಹಾರ ಮಾಡುತ್ತಾನೆ.

ಯಾಗದ ಸಮಾಪ್ತಿ, ಶಾಲ್ವನ ಸಂಹಾರ

ದಂತವಕ್ತ್ರನ ಉದ್ಧಾರ ಕೃಷ್ಣ ತನ್ನ ಪ್ರಿಯ ಮಿತ್ರ ಸುಧಾಮನನ್ನು ಅನುಗ್ರಹಿಸುತ್ತಾನೆ. ಕೌರವ  ಪಾಂಡವರ ಕುರುಕ್ಷೇತ್ರ ಯುದ್ಧದಲ್ಲಿ‌ ಪಾಂಡವರು 7 ಅಕ್ಷೋಹಿಣಿ ಸೈನ್ಯದ ಜೊತೆ ಉತ್ತರಾಭಿಮುಖವಾಗಿ ನಿಂತರೆ, ಕೌರವರು 11 ಅಕ್ಷೋಹಿಣಿ ಸೈನ್ಯದ ಜೊತೆ ದಕ್ಷಿಣಾ ಭಿಮುಖವಾಗಿ ನಿಂತರು. ಹದಿನೆಂಟು ಅಕ್ಷೋಹಿಣಿ ಸೈನ್ಯಗಳ ನಡುವೆ ಹದಿನೆಂಟು ದಿನ ಘನಘೋರ ಯುದ್ಧ ನಡೆಯಿತು.

ರಣರಂಗದಲ್ಲಿ ಅರ್ಜುನ ಎಲ್ಲ ಅಣ್ಣತಮ್ಮಂದಿರು, ಗುರುಗಳನ್ನು ಬಂಧು ಬಾಂಧವರನ್ನು ನೋಡಿ ಬಹಳ ದುಃಖದಿಂದ ಯುದ್ಧಕ್ಕೆ ನಿರಾಕರಿಸಿದಾಗ, ಕೃಷ್ಣನು ತನ್ನ ವಿರಾಟ ರೂಪ ತೋರಿಸಿ ಭವದ್ಗೀತೆಯನ್ನು ಉಪದೇಶಿಸುತ್ತಾನೆ. ಈ ಭವದ್ಗೀತೆಯಲ್ಲಿ 18 ಅಧ್ಯಾಯಗಳು 700 ಶ್ಲೋಕಗಳು ಒಳಗೊಂಡಿದೆ. ಹೀಗೆ ಕುರುಕ್ಷೇತ್ರ ಯುದ್ದ ನಡೆದು ಪಾಂಡವರಿಗೆ ಜಯವಾಗುತ್ತದೆ. ಭಗವಂತ ಅಧರ್ಮ ತಾಂಡವ ಆಡಿದಾಗ ಒದೊಂದು ಅವತಾರ ಎತ್ತಿ ಧರ್ಮವನ್ನು ರಕ್ಷಿಸುತ್ತಾನೆ.

ಕೃಷ್ಣನ ಯಾದವಕುಲವು ನಾಶವಾಯಿತು.‌ ತಮ್ಮ ಬಂದ ಕೆಲಸ ಮುಗಿಯಿತೆಂದು ಬಲರಾಮನಿಗೆ ಅಪ್ಪಣೆ ಕೊಡಲು, ಬಲರಾಮನು ಭಗವಂತನನ್ನು ಧ್ಯಾನಿಸಿ, ದೇಹವನ್ನು ಪರಿತ್ಯಜಿಸಿದನು. ಪೀತಾಂಬರಧಾರಿಯಾದ ಶಂಖ ಗಧಾ ಚಕ್ರ ಪದ್ಮಧಾರಿಯಾದ, ಸರ್ವಾಭರಣನಾದ  ಭಗವಂತನು  ತನ್ನ ಎಡ ತೊಡೆಯ ಮೇಲೆ ಬಲಗಾಲನಿಟ್ಟು ಆಡಿಸುತ್ತಾ ಕುಳಿತ್ತಿದ್ದಾಗ ಜರಾವ್ಯಾಧನು, ತನ್ನ ಬಾಣದಿಂದ ಶ್ರೀಕೃಷ್ಣನ ಚರಣವನ್ನು ಮೃಗವೆಂದು ಭಾವಿಸಿ ಬಾಣ ಬಿಡುತ್ತಾನೆ. ವ್ಯಾಧನು ಬಂದು ನೋಡಲಾಗಿ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟಾಗ, ವ್ಯಾಧನನ್ನು ಸಂತೈಸಯತ್ತಾ, ನಿನ್ನ ಅಪರಾಧ ಇಲ್ಲ, ಎಲ್ಲವು ನನ್ನ ಇಚ್ಛೆಯಂತೆ ನಡೆದಿದೆ. ಇದರಿಂದ ನಿನಗೆ ಸ್ವರ್ಗ ಪ್ರಾಪ್ತಿ ಎಂದು ಹೇಳಿತ್ತಾನೆ. ಅದೇ ರೀತಿ ವ್ಯಾಧನಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ.

ದಾರುಕನಿಗೆ, ನೀನು ದ್ವಾರಕೆಗೆ ಹೋಗು, ನನ್ನ(ಕೃಷ್ಣ) ಮತ್ತು ಅಣ್ಣ ಬಲರಾಮ ನಿರ್ಯಾಣದ ಸುದ್ದಿ ಮುಟ್ಟಿಸು. ಇ0ದಿನಿಂದ ಏಳು ದಿನಗಳವರಿಗೆ ದ್ವಾರಕೆ ಸಮುದ್ರದಲ್ಲಿ ಮುಳುಗುತ್ತದೆ. ಎಲ್ಲರೂ ತಮ್ಮ ತಮ್ಮ ಪರಿವಾರದೊಂದಿಗೆ  ಅರ್ಜುನನ ಹಿಂದೆ ಇಂದ್ರಪ್ರಸ್ಥಕ್ಕೆ ಹೋಗಲು ತಿಳಿಸು ಎಂದು ಹೇಳುತ್ತಾನೆ. ಎಲ್ಲ ಸಂಸಾರವು ನನ್ನ ಇಚ್ಛೆಯಿಂದ ನಿಂತಿರುವುದು ಎಂದು ಹೇಳಿದನು.

ದಾರುಕನು ಶ್ರೀ ಕೃಷ್ಣನಿಗೆನಮಸ್ಕರಿಸಿ ದ್ವಾರಕೆಗೆ ಹೋರಟು ಹೋದನು. ಶ್ರೀಕೃಷ್ಣನು ತನ್ನ ಮೂಲರೂಪದಲ್ಲಿ ಐಕ್ಯ ಹೊಂದಿ, ನೇತ್ರಗಳನ್ನು ಮುಚ್ಚಿ, ಶರೀರವನ್ನು ಯೋಗಧಾರಣೆಯಿಂದ, ಅಂತರ್ಧಾನ ಮಾಡಿ ಪರಂಧಾಮಗೈದನು. ಇತ್ತ ಕಡೇ ಈ ಸುದ್ದಿ ಕೇಳುತ್ತಲೇ ದೇವಕಿ, ರೋಹಿಣಿ, ವಸುದೇವರು ತಮ್ಮ ಶರೀರಗಳನ್ನು ತ್ಯಜಿಸಿದರು. ರುಕ್ಮಿಣಿ ಸತ್ಯಭಾಮೆಯರು ಲಕ್ಷ್ಮಿ ದೇವಿಯ ಅವತಾರವಾಗಿದ್ದರಿಂದ ವನದಲ್ಲಿ ಅದೃಶ್ಯರಾಗಿ ವೈಕುಂಠ ಸೇರಿದರು.\

ಏಳು ದಿನಗಳಲ್ಲಿ ಭಗವಂತನ ಮಂದಿರ (ಶ್ರೀಕೃಷ್ಣನ ಸನ್ನಿಧಾನ ಇರುತ್ತದೆ) ಬಿಟ್ಟು ಎಲ್ಲವೂ ಮುಳುಗುತ್ತದೆ. ಉಳಿದವರು ಅರ್ಜುನನ ಹಿಂದೆ ಹೋಗುತ್ತಾರೆ. ಇಂದ್ರಪ್ರಸ್ಥಕ್ಕೆ ಹೋಗಿ ಅಣ್ಣನಾದ ಧರ್ಮರಾಜ ಮತ್ತು ಸಹೋದರರ ಮುಂದೆ ಕೃಷ್ಣನ ನಿರ್ಯಾಣದ ಬಗ್ಗೆ ಹೇಳಿದನು. ಅವರು  ಸ್ವರ್ಗಾರೋಹಣ ಮಾಡಿ ತಮ್ಮ ಮೂಲ ರೂಪವನ್ನು ಹೊಂದಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles