ಕುಂಬಳಕಾಯಿ ಬೀಜ ತಿನ್ನುವುದರಿಂದ ಆಗುವ ಪ್ರಯೋಜನಗಳಿವು …

ಕುಂಬಳಕಾಯಿಯ ಬೀಜ ತಿನ್ನುವುದರಿಂದ ಹಲವು ಪ್ರಯೋಜನಗಳಿದೆ. ಇದು ಆರೋಗ್ಯಕ್ಕೆ ತುಂಬಾ   ಒಳ್ಳೆಯದು. ಕುಂಬಳಕಾಯಿ ಬೀಜದ ಸೇವನೆಯಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ನೀಡಲಾಗಿದೆ.
*ಕುಂಬಳಕಾಯಿ ಬೀಜವನ್ನು ಹಾಗೆ ತಿನ್ನಬಹುದು. ಅಥವಾ ಯಾವುದಾದರೂ ಸಿಹಿ ತಿಂಡಿಗೆ ಬಳಸಿ ತಿನ್ನಬಹುದು. ಪಲ್ಯ,  ಕೋಸಂಬರಿ  ಮಾಡುವಾಗ  ಕುಂಬಳಕಾಯಿ ಬೀಜ ಬಳಸಿಕೊಳ್ಳಬಹುದು. ಈ ಬೀಜವನ್ನು ಹೆಚ್ಚಾಗಿ ಕರದಂಟು ಮಾಡುವಾಗ ಬಳಸಲಾಗುತ್ತದೆ. ಇದರಿಂದ ತ್ವಚೆ, ಕೂದಲ ಜೊತೆ ಹೆಚ್ಚುತ್ತದೆ.

* ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿದ್ದರೆ, ಹಿಮೋಗ್ಲೋಬಿನ್  ಪ್ರಮಾಣ ಕಡಿಮೆಯಾಗಿದ್ದರೆ, ಕುಂಬಳಕಾಯಿ ಬೀಜ ಸೇವಿಸಿ. ಇದರಿಂದ ದೇಹದಲ್ಲಿ ರಕ್ತ ಮತ್ತು ಹಿಮೋಗ್ಲೋಬಿನ್  ಪ್ರಮಾಣ ಹೆಚ್ಚಾಗಿ, ಆರೋಗ್ಯ ಸುಧಾರಿಸುತ್ತದೆ. ಹೆಣ್ಣು ಮಕ್ಕಳು ಪ್ರತಿದಿನ 10 ಕಾಳು ಕುಂಬಳ ಬೀಜ ತಿಂದರೆ ಉತ್ತಮ. ಕೀಲು ನೋವು ಇದ್ದವರು ಕೂಡ ಇದರ ಸೇವನೆ ಮಾಡಬಹುದು.
* ಪದೇ ಪದೆ ತಲೆ ನೋವಾಗುತ್ತಿದ್ದರೆ, ಮೈಗ್ರೇನ್ ಸಮಸ್ಯೆ ಇದ್ದಲ್ಲಿ ಕುಂಬಳಕಾಯಿ ಬೀಜದ ಸೇವನೆ ಇದಕ್ಕೆ ಪರಿಹಾರ ನೀಡುತ್ತದೆ. ಪ್ರತಿದಿನ ಒಂದು ಸ್ಪೂನ್ ಕುಂಬಳಕಾಯಿ ಬೀಜ ಪುಡಿಯನ್ನು ಉಗುರು ಬೆಚ್ಚಗಿನ ಹಾಲಿನೊಂದಿಗೆ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೇವಿಸಬೇಕು. 

*ಹೃದಯದ ಸಮಸ್ಯೆ ಇದ್ದವರಿಗೂ  ಒಳ್ಳೆಯದು. ದೇಹದ ತೂಕ ಇಳಿಸಲು ಇಚ್ಛಿಸಿದರೆ ಪ್ರತಿದಿನ ಕುಂಬಳಕಾಯಿ ಬೀಜವನ್ನು 6 ಗ್ರಾಮ್‌ನಷ್ಟು ಸೇವಿಸಿದರೆ ಸಾಕು. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್‌ನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ರಾತ್ರಿ 10 ಕುಂಬಳಕಾಯಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆದ ಬೀಜವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.

* ನಿದ್ರಾಹೀನತೆ ಸಮಸ್ಯೆ ಇರುವವರು ಕುಂಬಳಕಾಯಿ ಬೀಜದ ಪುಡಿಯನ್ನು ಹಾಲಿನ ಜೊತೆ ಕುದಿಸಿ ಸೇವಿಸುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುವುದು. 
 
*ಮಹಿಳೆಯರಿಗೆ ಮುಟ್ಟಿನ ಹೊಟ್ಟೆ ನೋವಿದ್ದರೆ, ಕುಂಬಳಕಾಯಿ ಬೀಜವನ್ನು ಸೇವಿಸುವುದು ಉತ್ತಮ. ಋತುಚಕ್ರ ಶುರುವಾಗಲು 14 ದಿನ ಇರಬೇಕಾದರೆ, ಕುಂಬಳಕಾಯಿ ಬೀಜ ಸೇವಿಸುತ್ತ ಬನ್ನಿ. ಕ್ರಮೇಣ  ಹೊಟ್ಟೆ ನೋವು ಕಡಿಮೆಯಾಗುತ್ತದೆ.

* ತ್ವಚೆಯ ಸಮಸ್ಯೆ ಮತ್ತು ಕೂದಲು ಉದರುವ ಸಮಸ್ಯೆ ಇದ್ದವರು ಕೂಡ ಇದನ್ನು ಪ್ರತಿದಿನ ಸೇವಿಸಬಹುದು. 

* ಮಧುಮೇಹಿಗಳಿಗೆ ಒಳ್ಳೆಯದು. ಕುಂಬಳಕಾಯಿ ಬೀಜವು  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿ ಇಡಲು ಸಹಕಾರಿ.

(ಸಂಗ್ರಹ )

Related Articles

ಪ್ರತಿಕ್ರಿಯೆ ನೀಡಿ

Latest Articles