ಸ್ವಾಮಿ ಜಪಾನಂದ ಅವರಿಂದ ನಿರಾಶ್ರಿತರಿಗೆ ಕಂಬಳಿ ವಿತರಣೆ

ತಿರುವಣ್ಣಾಮಲೈ: ಪ್ರಸಿದ್ಧ ಪುಣ್ಯ ಕ್ಷೇತ್ರ ಹಾಗೂ ಸಾಧು ಸಂತರ ಆವಾಸ ಸ್ಥಾನವಾಗಿರುವ ಶ್ರೀ ರಮಣಾಶ್ರಮ, ತಿರುವಣ್ಣಾಮಲೈನಲ್ಲಿ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಸುಮಾರು 200ಕ್ಕೂ ಮಿಗಿಲಾಗಿ ಸಾಧುಗಳು, ಸಂತರು ಹಾಗೂ ಭೈರಾಗಿಗಳಿಗೆ ನೆರವು ನೀಡಲಾಯಿತು.

ಶ್ರೀ ರಮಣಾಶ್ರಮ, ತಿರುವಣ್ಣಾಮಲೈ ಆವರಣದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ಅವರು ನೆರೆದ ಸಾಧು ಸಂತರಿಗೆ ಕಂಬಳಿ, ಪಂಚೆ, ಟವಲ್, ಸೋಪು, ಮುಖಗವಸು, ಪಾದರಕ್ಷೆ ಇತ್ಯಾದಿಗಳನ್ನು ವಿತರಿಸಿದರು.

ಇನ್ಫೋಸಿಸ್ ಫೌಂಡೇಷನ್, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಹಾಗೂ ಸಾಯಿ ಭಕ್ತಿ ಪ್ರೇಮಾಂಜಲಿ ಫೌಂಡೇಷನ್ ನೆರವು ನೀಡಲು ಸಹಕಾರ ನೀಡಿತ್ತು.

ರಮಣಾಶ್ರಮದ ಅಧಿಕಾರಿ ವರ್ಗದವರು ಹಾಗೂ ಅಧ್ಯಕ್ಷರಾದ ಡಾ.ಆನಂದ್ ಭಾಗವಹಿಸಿದ್ದರು.

ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಸರ್ವರಲ್ಲೂ ಪರಮೇಶ್ವರನನ್ನು ಕಂಡು ಸೇವೆ ಸಲ್ಲಿಸುವಂತಹ ಮಹತ್ಕಾರ್ಯವನ್ನು ಪೂಜ್ಯ ಸ್ವಾಮಿ ಜಪಾನಂದಜೀ ಅವರು ನಡೆಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles