ಗುರು ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವ 25ರಿಂದ ನಾನಾ ಕಾರ್ಯಕ್ರಮ



ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಕ್ಷೇತ್ರದ ಅಧಿಪತಿ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರು ಪ್ರಾರಂಭಿಸಿದ ಗುರು ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಏ. 25 ರಿಂದ 30ರವರೆಗೆ ಆಯೋಜಿಸಲಾಗಿದೆ.
ಏ.25 ರಂದು ಜಾನುವಾರ ಜಾತ್ರೆಗೆ ಚಾಲನೆ ನೀಡಲಾಗುವುದು. ಏ.27 ರಂದು ಬೆಳಗ್ಗೆ 8ಕ್ಕೆ ಸಿದ್ಧಲಿಂಗ ಮಹಾರಾಜ ಕಮರಿಮಠದ ಆವರಣದಲ್ಲಿಬಂಥನಾಳದ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನ್ನಿಧ್ಯದಲ್ಲಿ ಜರುಗುವ ಷಟಸ್ಥಲ ಧ್ವಜಾರೋಹಣವನ್ನು ಹಳಿಂಗಳಿಯ ಶಿವಾನಂದ ಶ್ರೀ ನೆರವೇರಿಸಲಿದ್ದಾರೆ. 10.30ಕ್ಕೆ ಸರ್ವಧರ್ಮದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ. ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಡಾ. ವೃಷಭಲಿಂಗೇಶ್ವರ ಶ್ರೀ ಸೇರಿದಂತೆ ಹಲವು ಶ್ರೀಗಳು ಸಾನ್ನಿಧ್ಯವಹಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles