ಕಣಿಪಾಕಂ ಶ್ರೀ ವಿಘ್ನೇಶ್ವರ

ವಿಶ್ವದ ಶ್ರೀಮಂತ ದೇಗುಲ ಎನಿಸಿದ ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಿಂದ ಕೇವಲ 70 ಕಿ.ಮೀ. ದೂರದಲ್ಲಿಶ್ರೀ ವಿಘ್ನೇಶ್ವರ ದೇವಸ್ಥಾನವಿದೆ. ಸ್ವಯಂಭೂ ವಿಘ್ನೇಶ್ವರನಾಗಿದ್ದು, ಈ ಗಣೇಶನ ಮೂರ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶದ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನಿತ್ಯ ಲಕ್ಷಾಂತರ ಭಕ್ತರು ದರ್ಶನ ಮಾಡುತ್ತಾರೆ. ವಿಶ್ವಪ್ರಸಿದ್ಧ ತಿರುಮಲದಿಂದ ಕೇವಲ 70 ಕಿ.ಮೀ. ದೂರದ ಕಣಿಪಾಕಂನಲ್ಲಿಪ್ರಥಮ ಪೂಜಿತ ಗಣೇಶನನ್ನು ಪೂಜಿಸುವ ದೇಗುಲವೊಂದಿದೆ. ಈ ದೇಗುಲದಲ್ಲಿರುವ ವಿನಾಯಕನ ಮೂರ್ತಿಗೆ ಸಾವಿರಾರು ವರ್ಷಗಳ ಐತಿಹ್ಯವಿದೆ.


ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ದೇಗುಲವನ್ನು ವಿಜಯನಗರ ಸಾಮ್ರಾಜ್ಯದ ಅರಸ ಮೊದಲನೇ ಕುಲೋತ್ತುಂಗ 1336ರಲ್ಲ್ಲಿನಿರ್ಮಾಣ ಮಾಡಿದ ಎಂಬುದು ಐತಿಹ್ಯಗಳಿಂದ ತಿಳಿದು ಬರುತ್ತದೆ. ಕಣಿಪಾಕಂ ಗ್ರಾಮದಲ್ಲಿರುವ ಶ್ರೀ ವಿಘ್ನೇಶ್ವರ ದೇವರ ಐತಿಹ್ಯದ ಬಗ್ಗೆ ಪೌರಾಣಿಕ ಕಥೆಯೊಂದಿದೆ.
ಚಿತ್ತೂರು ಜಿಲ್ಲೆಯ ವಿಹಾರಪುರಿ ಎಂಬ ಗ್ರಾಮದಲ್ಲಿಮೂವರು ಸಹೋದರರಿದ್ದರು, ಅವರಲ್ಲಿಒಬ್ಬರಿಗೆ ಕಿವಿ, ಮತ್ತೊಬ್ಬನಿಗೆ ಮಾತು ಬರುತ್ತಿರಲಿಲ್ಲ. ಮತ್ತೊಬ್ಬ ಕುರುಡನಾಗಿದ್ದ. ಮೂರೂ ಜನ ಆ ಗ್ರಾಮದಲ್ಲಿವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು. ಬಾವಿಯ ನೀರನ್ನು ಕಾಲುವೆ ಮುಖಾಂತರ ನೀರು ಹರಿಸಿ ಕೃಷಿ ಮಾಡುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಬಾವಿಯಲ್ಲಿನೀರು ಬತ್ತಿ ಹೋಗುತ್ತದೆ. ಆಗ ಅವರಲ್ಲಿಒಬ್ಬ ಬಾವಿಯ ಒಳಗಿಳಿದು ಮತ್ತಷ್ಟು ಆಳ ಮಾಡಿದರೆ ನೀರು ಬರಬಹುದೆಂಬ ಯೋಚನೆಯಲ್ಲಿಕೆಲಸ ಶುರು ಮಾಡುತ್ತಾರೆ. ಸ್ವಲ್ಪ ಹೊತ್ತಿನಲ್ಲೆನೀರು ಚಿಮ್ಮುತ್ತದೆ. ಇನ್ನೂ ಸ್ವಲ್ಪ ಆಳ ಮಾಡೋಣವೆಂದು ಮತ್ತಷ್ಟು ಅಗೆದಾಗ ಅದರಿಂದ ರಕ್ತ ಚಿಮ್ಮಿ ಬರುತ್ತದೆ. ಇಲ್ಲೇನೋ ವಿಶೇಷ ಇದೆ ಎನ್ನುವ ಅರಿವು ಅವರಿಗಾಗುತ್ತದೆ. ವಿಶೇಷ ಅಂದರೆ ನೀರಿನೊಂದಿಗೆ ಚಿಮ್ಮಿದ ಆ ರಕ್ತ ಸೋಕಿದಾಗ ಮೂವರೂ ಸಹೋದರರು ತಮ್ಮ ಅಂಗನ್ಯೂನತೆಗಳನ್ನು ಕಳೆದುಕೊಳ್ಳುತ್ತಾರೆ. ಈ ವಿಷಯ ಊರ ಜನರಿಗೆ ತಿಳಿಯುತ್ತದೆ. ಈ ಬಾವಿಯಲ್ಲಿಏನೋ ವಿಶೇಷ ಶಕ್ತಿ ಎಂದು ಸ್ಥಳೀಯರು ಭಾವಿಸುತ್ತಾರೆ. ಅಲ್ಲಿನೋಡಿದಾಗ ಬಂಡೆಯಲ್ಲಿಗಣೇಶನ ಮೂರ್ತಿ ಒಡಮೂಡಿದ್ದನ್ನು ಗಮನಿಸುತ್ತಾರೆ. ನಂತರ ವಿಘ್ನೇಶನ ವಿಶೇಷ ಶಕ್ತಿ ಇದೆ ಎಂದೇ ಭಾವಿಸಿದ ಜನರು ಆ ಮೂರ್ತಿಯನ್ನು ಪೂಜಿಸಲು ಆರಂಭಿಸುತ್ತಾರೆ.
 ಬಾವಿಯಲ್ಲಿಸಿಕ್ಕಿದ ಗಣೇಶ ಇದಾಗಿರುವುದರಿಂದ ಸ್ವಯಂಭೂ ವಿಘ್ನೇಶ್ವರ ಎಂದು ಕರೆಯುತ್ತಾರೆ. ಈ ಬಾವಿಯಲ್ಲಿಇದುವರೆಗೂ ನೀರು ಬತ್ತಿದ ಉದಾಹರಣೆಯಿಲ್ಲ. ಮಳೆಗಾಲದಲ್ಲಿನೀರು ತುಂಬಿ ಹರಿಯುತ್ತದೆ. ವಿನಾಯಕ ದೇವರಿಗೆ ಭಕ್ತರು ಇಲ್ಲಿತೆಂಗಿನಕಾಯಿಯನ್ನು ಭಕ್ತಿಯಿಂದ ಅರ್ಪಿಸುತ್ತಾರೆ.  
ಈ ದೇಗುಲದಲ್ಲಿರುವ ವಿನಾಯಕ ದೇವರ ಕಲ್ಲಿನ ಮೂರ್ತಿ ದಿನೇ ದಿನೆ ಬೆಳೆಯುತ್ತಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಪುರಾವೆ ಎಂಬಂತೆ, ಹಲವು ವರ್ಷಗಳ ಹಿಂದೆ ಭಕ್ತರು ಶ್ರೀ ವಿನಾಯಕ ದೇವರಿಗೆ ಸಮರ್ಪಿಸಿದ್ದ ಬೆಳ್ಳಿಯ ಕವಚ ಈಗ ಮೂರ್ತಿಗೆ ಹೊಂದುತ್ತಿಲ್ಲ. ಪ್ರಸ್ತುತ ದೇಗುಲದಲ್ಲಿಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ದೇಗುಲದಲ್ಲಿಮುಂಭಾಗದಲ್ಲಿಪುಷ್ಕರಿಣಿಯಿದೆ. ದೇಗುಲದ ಆವರಣದಲ್ಲಿಯೇ ಹನುಮ ದೇವರ ಗುಡಿಯೂ ಇದೆ. ಇಲ್ಲಿಗಣಹೋಮ, ಗಣಯಾಗದಂತಹ ಪೂಜೆ, ಸಂಕಲ್ಪಗಳನ್ನು ಮಾಡಬಹುದು. ಇಲ್ಲಿವರ್ಷಕ್ಕೊಮ್ಮೆ ಗಣೇಶೋತ್ಸವದ ಸಂದರ್ಭದಲ್ಲಿಬ್ರಹ್ಮೋತ್ಸವ ನಡೆಯುತ್ತದೆ. ಬೆಳಗ್ಗೆ 4ರಿಂದ ರಾತ್ರಿ 9.30 ವರೆಗೂ ಭಕ್ತರು ಇಲ್ಲಿದೇವರ ದರ್ಶನ ಮಾಡಬಹುದು.


ಈ ದೇಗುಲದ ಸಮೀಪದಲ್ಲಿಯೇ ಬಾಹುದಾ ನರಿ ಹರಿಯುತ್ತಿದೆ. ಇಲ್ಲಿಈ ನದಿ ಹರಿಯುವುದರ ಬಗ್ಗೆ ದಂತಕಥೆಯೊಂದಿದೆ. ಒಮ್ಮೆ ಸಹೋದರರಿಬ್ಬರು ಸೇರಿಕೊಂಡು ಆಟ ಆಡುತ್ತಿದ್ದಾಗ, ಅವರಲ್ಲಿಒಬ್ಬನಿಗೆ ಹಸಿವಾಗುತ್ತದೆ. ತಿನ್ನಲೂ ಏನೂ ಇರುವುದಿಲ್ಲ. ಪಕ್ಕದಲ್ಲಿಯೇ ಇದ್ದ ಮಾವಿನ ತೋಟದಿಂದ ಮಾವಿನ ಕಾಯಿ ಕೊಯ್ದು ಅಣ್ಣ ತಮ್ಮನಿಗೆ ತಿನ್ನಲು ನೀಡುತ್ತಾನೆ. ತೋಟದ ಮಾಲೀಕನಿಂದ ಕೇಳದೇ ಮಾವಿನ ಕಾಯಿ ಕೊಯ್ದು ತಿಂದುದಕ್ಕಾಗಿ ರಾಜನಿಂದ ಶಿಕ್ಷೆಗೊಳಗಾಗುತ್ತಾರೆ. ಇಬ್ಬರ ಕೈ ಕತ್ತರಿಸಿ ಅಲ್ಲಿಂದ ಕಳುಹಿಸುತ್ತಾನೆ. ಅವರು ನಡೆದೂ ನಡೆದು ಕಣಿಪಾಕಂ ತಲುಪುತ್ತಾರೆ. ಅಲ್ಲಿಯೇ ಹರಿಯುತ್ತಿದ್ದ ನದಿಯಲ್ಲಿಸ್ನಾನಗೈಯ್ಯುತ್ತಾರೆ. ಆಗ ಅವರ ತುಂಡರಿಸಿದ ಕೈಗಳು ಕೂಡಿಕೊಳ್ಳುತ್ತವೆ. ಹಾಗಾಗಿ ಆ ಸ್ಥಳಕ್ಕೆ ಬಾಹುದಾ ಎಂಬ ಹೆಸರು ಬರುತ್ತದೆ. ಬಾಹು ಅಂದರೆ ‘ಭುಜ’ ದಾ ಅಂದರೆ ‘ಕೂಡುವುದು’ ಎಂದರ್ಥ.
ಹೋಗುವುದು ಹೇಗೆ?
 ತಿರುಪತಿಯಿಂದ ಚಿತ್ತೂರಿಗೆ ನೇರ ರೈಲು ಸಂಪರ್ಕ ಇದೆ. ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ತಿರುಪತಿಗೆ ಹೋಗುವ ದಾರಿಯಲ್ಲಿಕಣಿಪಾಕಂ ದೇಗುಲ ಸಿಗುತ್ತದೆ. ಚಿತ್ತೂರಿನಿಂದ ಕೇವಲ 12 ಕಿ.ಮೀ ದೂರದಲ್ಲಿದೆ.
———

ಹತ್ತಿರದಲ್ಲಿನ ಪ್ರೇಕ್ಷಣೀಯ ಸ್ಥಳಗಳು
ಅರ್ಧಗಿರಿ ಬೆಟ್ಟ
ಚಿತ್ತೂರು ಜಿಲ್ಲೆಯ ಅರಗೊಂಡ ಗ್ರಾಮದಲ್ಲಿಶ್ರೀ ಅರ್ಧಗಿರಿ ಆಂಜನೇಯ ಸ್ವಾಮಿ ದೇಗುಲವಿದೆ. ಕಾಣಿಪಾಕಂನಿಂದ ಕೇವಲ 15 ಕಿ.ಮೀ. ದೂರದಲ್ಲಿದೆ.  ಈ ದೇಗುಲದ ಬೆಟ್ಟದಲ್ಲಿರುವ ಸಂಜೀವಿನಿ ಪುಷ್ಕರಣಿಯ ನೀರನ್ನು ಸೇವಿಸಿದರೆ ಚರ್ಮರೋಗಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಬೆಟ್ಟದ ಮೇಲಿರುವ ಈ ಪುಷ್ಕರಿಣಿ ಎಂದೂ ಬತ್ತಿದ ಉದಾಹರಣೆಗಳಿಲ್ಲ.
ಪೌರಾಣಿಕ ಐತಿಹ್ಯದಂತೆ ಹನುಮ ದೇವರು ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋಗುತ್ತಿದ್ದ ಆ ಪರ್ವತದ ಅರ್ಧಭಾಗ ಈ ಜಾಗದಲ್ಲಿಬಿದ್ದಿತೆಂದು ಹೇಳಲಾಗುತ್ತದೆ. ಹಾಗಾಗಿ ಅರ್ಧಗಿರಿ ಪರ್ವತ ಎಂಬ ಹೆಸರು ಬಂದಿದೆ.
ಈ ದೇಗುಲಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹುಣ್ಣಿಮೆಯಂದು 25 ಸಾವಿರಕ್ಕೂ ಹೆಚ್ಚು ಭಕ್ತರು ಹನುಮ ದೇವರ ದರ್ಶನ ಪಡೆಯುತ್ತಾರೆ. ದೇಗುಲ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ತೆರೆದಿರುತ್ತದೆ.
————-
ಇನ್ನಿತರ ದೇಗುಲಗಳು: ಕಾಳಹಸ್ತಿ, ವಕುಲಾ ದೇವಿ, ಕಪಿಲ ತೀರ್ಥಂ, ತಿರುಚನೂರು ಪದ್ಮಾವತಿ ದೇವಸ್ಥಾನ, ಅರ್ಧಗಿರಿ ಆಂಜನೇಯ ಸ್ವಾಮಿ ದೇವಸ್ಥಾನ, ಚಂದ್ರಗಿರಿ ಕೋದಂಡರಾಮ ದೇವಸ್ಥಾನ, ಗಂಗಮ್ಮ ದೇವಸ್ಥಾನ ತಿರುಪತಿ, ವೇದನಾರಾಯಣ, ನಾಗಲಾಪುರ, ಗೋವಿಂದರಾಜ ಸ್ವಾಮಿ ದೇವಸ್ಥಾನ ತಿರುಪತಿ, ವರಾಹಸ್ವಾಮಿ ದೇವಸ್ಥಾನ ತಿರುಮಲ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ ತಿರುಮಲ, ಕಲ್ಯಾಣ ವೆಂಕಟೇಶ್ವರ ದೇವಸ್ಥಾನ ಶ್ರೀನಿವಾಸ ಮಂಗಾಪುರ ಸೇರಿದಂತೆ ಇನ್ನೂ ಹಲವಾರು ದೇಗುಲಗಳಲ್ಲಿದೇವರ ದರ್ಶನ ಮಾಡಿ ಬರಬಹುದು. 

Related Articles

ಪ್ರತಿಕ್ರಿಯೆ ನೀಡಿ

Latest Articles