ಮದ್ದೂರಿನಲ್ಲಿದೆ ಏಳು ಅಡಿ ಎತ್ತರದ ಉಗ್ರ ನರಸಿಂಹನ ಮೂರ್ತಿ ಹೊಂದಿರುವ ದೇಗುಲ

*ಶ್ರೀನಿವಾಸ ಮೂರ್ತಿಎನ್.ಎಸ್.

ಕರ್ನಾಟಕದ ದೇವಾಲಯಗಳಲ್ಲಿ ನರಸಿಂಹನ ಶಿಲ್ಪ ಬಹುತೇಕ ದೇವಾಲಯಗಳಲ್ಲಿ ಕಾಣಬರುತ್ತಿದ್ದು 4 ನೇ ಶತಮಾನದಿಂದ ಇಲ್ಲಿಯವರೆಗೆ ಹಲವು ದೇವಾಲಯಗಳು ನಿರ್ಮಾಣಗೊಂಡಿದೆ. ಇಂತಹ ದೇವಾಲಯಗಳಲ್ಲಿ ಅಪರೂಪದ ನರಸಿಂಹ ಮೂರ್ತಿ ಹೊಂದಿರುವ ಪುರಾತನ ದೇವಾಲಯಗಳಲ್ಲಿ ಮದ್ದೂರು ನರಸಿಂಹ ದೇವಾಲಯವೂ ಒಂದು.

ಈ ದೇವಾಲಯ ಹೊಯ್ಸಳ, ಚೋಳ ಮತ್ತು ವಿಜಯನಗರ ಶೈಲಿಯಲ್ಲಿದೆ. 1132 ರ ಶಾಸನದಲ್ಲಿ ಈ ದೇವಾಲಯದ ಉಲ್ಲೇಖ ಇರುವುದರಿಂದ, ಇದರ ಪೂರ್ವದಲ್ಲಿಯೇ ಈ ದೇವಾಲಾಯ ಇತ್ತು ಎಂದು ಕಾಣಬರುತ್ತದೆ.

ದೇವಾಲಯವು ಗರ್ಭಗುಡಿ, ಸುಖನಾಸಿ, ನವರಂಗ, ಸಭಾಮಂಟಪ ಮತ್ತು ಸುತ್ತಾಲಯ ಹೊಂದಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಭಗಳಿವೆ. ನವರಂಗದ ಭಾಗಿಲುವಾಡದಲ್ಲಿ ಚಕ್ರ, ಶಂಖ ನಡುವಿನ ಕೄಷ್ಣ ಸುಂದರವಾಗಿದೆ.

ಗರ್ಭಗುಡಿಯಲ್ಲಿ ಏಳು ಅಡಿ ಎತ್ತರದ ಸುಂದರ ಉಗ್ರನರಸಿಂಹನ ಮೂರ್ತಿ ಇದೆ. ಮೂರ್ತಿಗೆ ಎಂಟು ಭುಜಗಳಿದ್ದು ನಾಲ್ಕರಲ್ಲಿ ಚಕ್ರ, ಶಂಖ, ದಂತ ಹಾಗು ಗದೆ ಇದ್ದರೆ, ಉಳಿದ 4 ಕೈಗಳಲ್ಲಿ ಎರಡು ಕೈಯಿಂದ ತೊಡೆಯ ಮೇಲಿರುವ ಹಿರಣ್ಯ ಕಶಿಪುವಿನ ಕರಳು ಬಗೆಯುತ್ತಲೂ ಉಳಿದ, ಎರಡು ಕೈಯಿಂದ ಮಾಲೆ ಹಾಕಿ ಕೊಳ್ಳುತ್ತಿರುವಂತಿದೆ. ಪಾದದ ಬಳಿ ಎಡ ಭಾ ಗದಲ್ಲಿ ಗರುಡ ಮತ್ತು ಬಲಭಾಗದಲ್ಲಿ ಪ್ರಹ್ಲಾದ ಕೈ ಮುಗಿದು ನಿಂತಿರುವ0ತಿದೆ. ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದ್ದು ಮೂರ್ತಿ ಅರ್ಧ ಆಸೀನ ಮತ್ತು ಅರ್ಧ ಸ್ಥಾನಕ ಭಂಗಿಯಲ್ಲಿದೆ.

ದೇವಾಲಯದ ಮಂಟಪ ವಿಜಯನಗರ ಕಾಲದಲ್ಲಿ ವಿಸ್ತರಣೆಗೊಂಡಿದ್ದು ರಾಜಗೋಪುರವನ್ನು ಈಗ ಹೊಸದಾಗಿ ನಿರ್ಮಿಸಲಾಗಿದೆ. ದೇವಾಲಯದ ಹೊರ ಭಾಗದ ಸುತ್ತಲೂ ಒಳ ಪ್ರಕಾರದಲ್ಲಿ ನರಸಿಂಹನ ಹಲವು ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದ್ದು ದೇವಾಲಯಕ್ಕೆ ಆಧುನಿಕ ಸ್ಪರ್ಶ ನೀಡಿದೆ. ಪ್ರಕಾರದ ಒಂದು ಮಂದಿರದಲ್ಲಿ ರಾಮಪರಿವಾರದ ಶಿಲ್ಪವಿದ್ದು, ಕರ್ನಾಟಕದ ಪುರತಾನ ರಾಮ ಶಿಲ್ಪಗಳಲ್ಲಿ ಒಂದು ಎಂದು ಕೆಲವು ವಿದ್ವಾಂಸರ ಅಭಿಪ್ರಾಯ ಪಡುತ್ತಾರೆ.

ಸ್ಥಳ ಪುರಾಣದಂತೆ ಹಿಂದೆ ಇಲ್ಲಿ ಪಾಂಡವರು ಇಲ್ಲಿ ಕೆಲ ಕಾಲ ವಾಸಿಸುತಿದ್ದಾಗ ಅರ್ಜುನನ ಶ್ರೀ ಕೄಷ್ಣನು ಬಳಿ ಉಗ್ರನರಸಿಂಹನ ಅವತಾರ ನೋಡಬೇಕೆಂದು ಅಪೇಕ್ಶೆ ಪಟ್ಟಾಗ ಶಿಲಾರೂಪದಲ್ಲಿ ಬ್ರಹ್ಮ ದೇವರ ಮುಖಾಂತರ ಇಲ್ಲಿ ಸ್ಥಾಪಿಸಲ್ಪಟ್ಟಿತು ಎಂಬ ನಂಬಿಕೆ ಇದೆ. ಅದುದರಿಂದ ಈ ಊರಿಗೆ ಅರ್ಜುನಾಪುರಿ ಎಂಬ ಹೆಸರು ಇತ್ತು ಹಾಗೂ ಪಾಳೇಗಾರರ ಕಾಲದಲ್ಲಿ ಇಲ್ಲಿ ಮದ್ದು ಗುಂಡು ತಯಾರಿಸಿ ಶೇಖರಿಸು ಇಡುತ್ತದರಿಂದ ನಂತರ ಮದ್ದೂರು ಎಂದಾಯಿತು ಎಂದು ಸ್ಥಳ ಪುರಾಣ ಹೇಳುತ್ತದೆ.

ಇಲ್ಲಿ ಹೊಯ್ಸಳರ ಕಾಲದಲ್ಲಿ ವಿಷ್ಣುವರ್ಧನ ತನ್ನ ತಾಯಿ ಕಂಚಿಗೆ ಹೋಗಲು ಸಾಧ್ಯವಾಗದಾಗ ಚೋಳ ಶೈಲಿಯಲ್ಲಿರುವ ಸುಂದರ 16 ಅಡಿ ಎತ್ತರದ ವರದರಾಜ ಮೂರ್ತಿ ನಿರ್ಮಿಸಿದ. ಇಲ್ಲಿ ಹೊಳೆ ಆಂಜನೇಯ ಮತ್ತು ಮದ್ದೂರಮ್ಮ ದೇವಾಲಯಗಳು ಸಹ ಇದೆ.

ತಲುಪುವ ಬಗ್ಗೆ: ಮದ್ದೂರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವುದರಿಂದ ಸುಲಭವಾಗಿ ತಲುಪಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles