ಸಂಗೀತ ಪ್ರೇಮಿಗಳು ನೋಡಲೇ ಬೇಕಾದ ಶ್ರೀ ಸಪ್ತಸ್ವರ ದೇವತಾ ಧ್ಯಾನ ಮಂದಿರ

ದೇವಸ್ಥಾನ ಅಂದರೆ ಮಂತ್ರಗಳು, ಪೂಜೆ, ತೀರ್ಥ ಪ್ರಸಾದ ಎನ್ನುವ ಕಲ್ಪನೆ ಬರುತ್ತದೆ. ಆದರೆ ಇಲ್ಲಿ ಮಾತ್ರ ಬಹಳ ವಿಭಿನ್ನವಾಗಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಸಂಗೀತದ ಮೂಲಕವೇ ಸರಸ್ವತಿ ದೇವಿ ಪೂಜಿಸಲ್ಫಪಡುತ್ತಾಳೆ.

ರುದ್ರಪಟ್ಟಣ. ಈ ಹೆಸರು ಕೇಳಿದೊಡನೆ ಈ ಸ್ಥಳ ಎಲ್ಲಿದೆ ಎನ್ನುವ ಕುತೂಹಲ ಮೂಡಬಹುದು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಾವೇರಿ ನದಿ ತಟದಲ್ಲಿದೆ ಈ ಸಣ್ಣ ಗ್ರಾಮ. ದೇಶಕ್ಕೆ ಅನೇಕ ಸಂಗೀತ ದಿಗ್ಗಜರನ್ನು ನೀಡಿದ ಪುಟ್ಟ ಹಳ್ಳಿಯದು. ಆರ್.ಎಸ್. ಕೇಶವಮೂರ್ತಿ, ಆರ್.ಕೆ.ರಾಮನಾಥನ್, ಆರ್.ಕೆ.ಶ್ರೀಕಂಠನ್, ಆರ್.ಕೆ. ಶ್ರೀನಿವಾಸ ಮೂರ್ತಿ, ಆರ್.ಕೆ. ಸೂರ್ಯನಾರಾಯಣ, ಆರ್.ಎನ್.ತ್ಯಾಗರಾಜನ್, ಆರ್.ಎನ್.ತಾರನಾಥನ್, ಇವರೇ ಮೊದಲಾದ ಸಂಗೀತ ದಿಗ್ಗಜರನ್ನು ಸಮಾಜಕ್ಕೆ ನೀಡಿದ ಕ್ಷೇತ್ರವಿದು.

ರುದ್ರಪಟ್ಟಣದಲ್ಲಿ ಶ್ರೀ ಸಪ್ತಸ್ವರ ದೇವತಾ ಧ್ಯಾನ ಮಂದಿರ ನಿರ್ಮಾಣಗೊಂಡಿದ್ದು ಸಂಗೀತ ಕಲಾ ಕ್ಷೇತ್ರದ ಮತ್ತೋರ್ವ ದಿಗ್ಗಜ, ಸಂಗೀತ ರತ್ನ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಅಭಿಲಾಷೆಯಿಂದ. ತನ್ನ ಹುಟ್ಟೂರಿನಲ್ಲಿ ನಿರಂತರ ಸಂಗೀತ ಮೊಳಗಬೇಕು ಎನ್ನುವ ಅವರ ತುಡಿತ, ನಿರಂತರ ಪ್ರಯತ್ನವಿದೆ. ರುದ್ರಪಟ್ಟಣ ಇದೇ ಕಾರಣಕ್ಕಾಗಿ ಇಂದು ಪ್ರಸಿದ್ಧ ಪ್ರವಾಸಿತಾಣವಾಗಿ ಗುರುತಿಸಿಕೊಳ್ಳುತ್ತಿದೆ.

ರಾಮನಾಥಪುರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಸಂಗೀತಗ್ರಾಮ ರುದ್ರಪಟ್ಟಣದಲ್ಲಿ ಶ್ರೀ ಸಪ್ತಸ್ವರ ದೇವತಾ ಧ್ಯಾನ ಮಂದಿರವಿದೆ. ಇದರ ವೈಶಿಷ್ಠ್ಯತೆಯೆಂದರೆ, ಸಂಗೀತದೇವತೆ ಸರಸ್ವತಿಯೊಂದಿಗೆ, 6 ವಾಗ್ಗೇಯಕಾರರ ವಿಗ್ರಹಗಳನ್ನೊಳಗೊಂಡಿದೆ.

ಸ- ಸರಸ್ವತಿ, ರಿ-ಪುರಂದರದಾಸರು, ಗ- ವಾದಿರಾಜರು, ಮ-ಕನಕದಾಸರು, ಪ-ಪಂಚಮ, ತ್ಯಾಗರಾಜರು, ದ- ಮುತ್ತುಸ್ವಾಮಿ ದೀಕ್ಷಿತರು, ನಿ-ನಿಷಾಧ-ಶಾಮಾಶಾಸ್ತ್ರೀಗಳು ಅವರ ಪ್ರತಿಮೆಗಳನ್ನು ಇಲ್ಲಿ ಅಳವಡಿಸಲಾಗಿದೆ. ಸಂಗೀತದ ಈ ದಿಗ್ಗಜರಿಗೆ ಪ್ರತಿವರ್ಷ ಸಂಗೀತದ ಸೇವೆ (ಸಂಗೀತೋತ್ಸವ) ಇಲ್ಲಿ ನಡೆಯುತ್ತದೆ.

ತಮಿಳುನಾಡಿನ ತಿರುವಯ್ಯಾರ್‌ನಂತೆ ಕರ್ನಾಟಕದ ಹಾಸನದಲ್ಲಿದೆ ಸಂಗೀತ ಗ್ರಾಮ ರುದ್ರಪಟ್ಟಣ. ಇಲ್ಲಿ ಸುಮಾರು 400 ವರ್ಷಗಳಷ್ಟು ಹಳೆಯದಾದ ಕೇಶವ ದೇವಾಲಯವಿದೆ. ಇದಕ್ಕೆ ಹೊಂದಿಕೊ0ಡ0ತೆ ಸಪ್ತಸ್ವರ ದೇವತಾ ಮಂದಿರವಿದೆ. ವಿಶ್ವದಲ್ಲೇ ಪ್ರಥಮ ಎನಿಸಿಕೊಂಡಿರುವ ಈ ದೇಗುಲದಲ್ಲಿ ಎಲ್ಲೆಲ್ಲೂ ಸಂಗೀತವೇ.
60 ಅಡಿ ಗೋಪುರದಲ್ಲಿರುವ ಇರುವುದು ಶಾಸ್ತ್ರೀಯ ಸಂಗೀತಕ್ಕೆ ಬಳಸುವ ಪಕ್ಕವಾದ್ಯಗಳು.
ದೇವಸ್ಥಾನ ಅಂದರೆ ಮಂತ್ರಗಳು, ಪೂಜೆ, ತೀರ್ಥ ಪ್ರಸಾದ ಎನ್ನುವ ಕಲ್ಪನೆ ಬರುತ್ತದೆ. ಆದರೆ ಇಲ್ಲಿ ಮಾತ್ರ ಬಹಳ ವಿಭಿನ್ನವಾಗಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಸಂಗೀತದ ಮೂಲಕವೇ ಸರಸ್ವತಿ ದೇವಿ ಪೂಜಿಸಲ್ಫಪಡುತ್ತಾಳೆ.

ಇಲ್ಲಿರುವ ಉದ್ಯಾನದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ ಸಂಗೀತದ ಹೆಸರುಗಳನ್ನು ಇಡಲಾಗಿದೆ. ಅಲ್ಲಿಯೇ ಇರುವ ರಾಮಮಂದಿರ ಇರುವ ದೇಗುಲಗಳ ಒಳಗೂ ಇತಿಹಾಸ ಸಾರುವ ಚಿತ್ರಗಳಿವೆ.

ದರ್ಶನ ಸಮಯ: ಬೆಳಗ್ಗೆ 10 ರಿಂದ ಸಂಜೆ 6.

ಬೆಂಗಳೂರಿನಿ0ದ 215 ಕಿಮೀ. ದೂರದಲ್ಲಿದೆ. ರಸ್ತೆ, ರೈಲು ಮಾರ್ಗದ ಮೂಲಕ ಪ್ರಯಾಣ ಬೆಳೆಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles