ಕುಕ್ಕವಾಡ ಜಾತ್ರೆ 22 ರಂದು


ಹಿರೇಕೋಗಲೂರು: ದಾವಣಗೆರೆ ತಾಲೂಕಿನ ಕುಕ್ಕವಾಡ ಶ್ರೀ ಮಾರಿಕಾಂಬದೇವಿ ಜಾತ್ರಾ ಮಹೋತ್ಸವ ಜ.22ರಿಂದ 26ರ ವರೆಗೆ ನಡೆಯಲಿದೆ. ಗ್ರಾಮದಲ್ಲಿಸುಮಾರು 33 ವರ್ಷಗಳ ಹಿಂದೆ ಶ್ರೀ ಮಾರಿಕಾಂಬ ಜಾತ್ರೆ ನಡೆದಿತ್ತು, ಕಾರಣಾಂತರದಿಂದ ಜಾತ್ರೆ ಆಚರಿಸುವ ಕಾಲ ಕೂಡಿ ಬಂದಿದೆ ಎಂದು ಮುಖಂಡ ಜಿ.ಎಂ. ರುದ್ರೇಗೌಡ ತಿಳಿಸಿದ್ದಾರೆ.
ಜ.22ರ ಸೋಮವಾರ ದೇವಿಗೆ ವಿಶೇಷ ಅಲಂಕಾರ ನೆರವೇರಿಸಿ ರುದ್ರಾಭಿಷೇಕ ಹಾಗೂ ಮಹಾಪೂಜೆ ನೆರವೇರುವುದು. ಮಂಗಳವಾರ ಬೆಳಗ್ಗೆ ಗಂಗಾ ಪೂಜೆ ನೆರವೇರಿಸಿ ಅಲಂಕೃತ ಪಲ್ಲಕ್ಕಿಯೊಂದಿಗೆ ದೇವರುಗಳ ಪ್ರತಿಷ್ಟಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಲಿದೆ. ನಂತರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ.

24ರ ಬುಧವಾರ ಗ್ರಾಮದ ತುಂಬಾ ಚರಗ ಚೆಲ್ಲುವುದು, ರಾತ್ರಿ ದಾವಣಗೆರೆ ಹಾಗೂ ಭದ್ರಾವತಿ ಕಲಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯುವುದು. 25ರ ಗುರುವಾರ ಪೋತರಾಜರ ಕಾರ್ಯಕ್ರಮ, ಹುಲುಸಿನ ಕಾಳು ವಿತರಣೆ ಕಾರ್ಯಕ್ರಮ ನಡೆಯುತ್ತದೆ. ಜ.26ರ ಶುಕ್ರವಾರ ಬೆಳಗ್ಗೆ ಗ್ರಾಮದ ಕರಗಲ್ಲವರೆಗೆ ದೇವಿಯ ಮೆರವಣಿಗೆ ನಡೆಸಲಾಗುತ್ತದೆ. ನಂತರ ದೇವಸ್ಥಾನದೊಳಗೆ ದೇವಿಯನ್ನು ಗುಡಿ ತುಂಬಿಸುವ ಕಾರ್ಯಕ್ರಮ ನೆರವೇರಿದ ನಂತರ ಜಾತ್ರೆ ಕೊನೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles