ಬೇಸನ್ ಬರ್ಫಿ ಮಾಡೋದು ಇಷ್ಟು ಸುಲಭನಾ?

ಬೇಕಾಗುವ ಸಾಮಗ್ರಿ: ಕಡಲೆ ಹಿಟ್ಟು 250ಗ್ರಾಂ, ಸಕ್ಕರೆ- 1ಕಪ್, ನೀರು-125ಎಂಎಲ್, ತುಪ್ಪ-250ಮಿ.ಲೀ, ಗೋಂಡಂಬಿ, ಬಾದಾಮಿ-ತಲಾ 5.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಕಡಲೆ ಹಿಟ್ಟು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಮತ್ತೊಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿ ಸಕ್ಕರೆ ಸಿರಪ್ ತಯಾರಿಸಿಟ್ಟುಕೊಳ್ಳಿ. ರೋಸ್ಟ್ ಮಾಡಿಟ್ಟುಕೊಂಡಿದ್ದ ಬೇಸನ್ ಹಿಟ್ಟಿಗೆ ಸಕ್ಕರೆಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಕತ್ತರಿಸಿದ ಬಾದಾಮಿ, ಗೋಡಂಬಿಯಿ0ದ ಅಲಂಕರಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles