ಕಡಿಮೆ ಪದಾರ್ಥಗಳಲ್ಲಿ, ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಸಿಹಿತಿಂಡಿ ಬ್ರೆಡ್ ಹಲ್ವಾ. ಉಳಿದ ಬ್ರೆಡ್ಗಳನ್ನು ಬಳಸಿ ಕೂಡ ಈ ಹಲ್ವಾ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು
- ಬ್ರೆಡ್ ಸ್ಲೈಸ್ – 6 ರಿಂದ 8
- ಹಾಲು – 1 ಕಪ್
- ಸಕ್ಕರೆ – ½ ಕಪ್
- ತುಪ್ಪ – ½ ಕಪ್
- ಗೋಡಂಬಿ – 10
- ಬಾದಾಮಿ – 8
- ಒಣದ್ರಾಕ್ಷಿ – ಸ್ವಲ್ಪ
- ಏಲಕ್ಕಿ ಪುಡಿ – ¼ ಚಮಚ
- ಕೇಸರಿ – ಸ್ವಲ್ಪ (ಐಚ್ಛಿಕ)
ತಯಾರಿಸುವ ವಿಧಾನ
- ಮೊದಲು ಬ್ರೆಡ್ನ ಅಂಚುಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
- ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಹುರಿದು ತೆಗೆದಿಡಿ.
- ಅದೇ ಬಾಣಲೆಗೆ ತುಪ್ಪ ಹಾಕಿ ಬ್ರೆಡ್ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಈಗ ಹಾಲನ್ನು ಸೇರಿಸಿ ಬ್ರೆಡ್ ಮೃದುವಾಗುವವರೆಗೆ ಚೆನ್ನಾಗಿ ಕಲಸಿ.
- ನಂತರ ಸಕ್ಕರೆ ಸೇರಿಸಿ ನಿರಂತರವಾಗಿ ಕೈಯಾಡಿಸುತ್ತಿರಿ.
- ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆ ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ.
- ಏಲಕ್ಕಿ ಪುಡಿ, ಕೇಸರಿ ಹಾಗೂ ಹುರಿದ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಹಲ್ವಾ ಬಾಣಲೆಯ ಅಂಚು ಬಿಡಲು ಪ್ರಾರಂಭಿಸಿದಾಗ ಒಲೆಯಿಂದ ಕೆಳಗಿಳಿಸಿ.


























