ನವರಾತ್ರಿ ಹಬ್ಬ ಆರಂಭವಾಗಿದ್ದು, ಕಳೆದ ವರ್ಷದಂತೆ ಈ ಬಾರಿ ಗೌಜಿ ಇಲ್ಲದೇ ಇದ್ದರೂ ಮನೆ-ಮನಗಳಲ್ಲಿ ಶಕ್ತಿ ದೇವತೆಯ ಆರಾಧನೆಗೆ ಯಾವ ಕೊರತೆಯೂ ಇಲ್ಲ. ಅಲ್ಲಲ್ಲಿ ವಿಶೇಷವಾಗಿ ದೇವಿ ದೇಗುಲಗಳಲ್ಲಿ ದುರ್ಗಾ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ನವರಾತ್ರಿಯ ಒಂಬತ್ತೂ ದಿನ ದೇವಿಗೆ ಪೂಜೆ ಸಲ್ಲುತ್ತದೆ.
ದೇವಿಯ ಯಾವ ಅವತಾರವನ್ನು ಯಾವ ದಿನ ಪೂಜಿಸಲಾಗುತ್ತದೆ. ಆ ದೇವಿಗೆ ಇಷ್ಟವಾಗುವ ನೈವೇದ್ಯ, ಹೂವು, ಯಾವುದು? ಯಾವ ಶ್ಲೋಕ ಹೇಳಬೇಕು ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ನವರಾತ್ರಿ ಮೊದಲದಿನ
ದೇವಿ: ಮಾಹೇಶ್ವರಿ ನೈವೇದ್ಯ: ಖಾರ ಹುಗ್ಗಿ ಹೂವು: ಮಲ್ಲಿಗೆ ತಿಥಿ: ಪಾಡ್ಯ ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್ ನವರಾತ್ರಿ ದಿನ ೨ ದೇವಿ: ಕೌಮಾರಿ ತಿಥಿ: ಬಿದಿಗೆ ಹೂವು: ಕಣಗಲೆ ನೈವೇದ್ಯ: ಪುಳಿಯೋಗರೆ ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್ ನವರಾತ್ರಿ ದಿನ ೩ ದೇವಿ: ವಾರಾಹಿ ತಿಥಿ: ತದಿಗೆ ಹೂವು: ಸಂಪಿಗೆ ನೈವೇದ್ಯ: ಸಿಹಿ ಹುಗ್ಗಿ ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ ಧೀಮಹಿ ತನ್ನೋ ವಾರಾಹಿ ಪ್ರಚೋದಯತ್ ನವರಾತ್ರಿ ದಿನ ೪ ದೇವಿ: ಲಕ್ಷ್ಮೀ ಹೂವು: ಜಾಜಿ ತಿಥಿ: ಚತುರ್ಥಿ ಶ್ಲೋಕ: ಓಂ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ನವರಾತ್ರಿ ದಿನ ೫ ದೇವಿ: ವೈಷ್ಣವಿ ಹೂವು: ಪಾರಿಜಾತ ನೈವೇದ್ಯ: ಮೊಸರನ್ಬ ತಿಥಿ: ಪಂಚಮಿ ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್ ನವರಾತ್ರಿ ದಿನ ೬ ದೇವಿ: ಇಂದ್ರಾಣಿ ಹೂವು: ದಾಸವಾಳ ನೈವೇದ್ಯ: ತೆಂಗಿನಕಾಯಿ ಅನ್ನ ತಿಥಿ: ಷಷ್ಠಿ ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್ ನವರಾತ್ರಿ ದಿನ ೭ ದೇವಿ: ಸರಸ್ವತಿ ಹೂವು: ಮಲ್ಲಿಗೆ ತಿಥಿ: ಸಪ್ತಮಿ ನೈವೇದ್ಯ: ನಿಂಬೆಹಣ್ಣಿನ ಅನ್ನ ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ ತನ್ನೋ ವಾಣಿ ಪ್ರಚೋದಯಾತ್ ನವರಾತ್ರಿ ದಿನ ೮ ದೇವಿ: ದುರ್ಗಾ ಹೂವು: ಗುಲಾಬಿ ನೈವೇದ್ಯ: ಪಾಯಸಾನ್ನ ತಿಥಿ: ಅಷ್ಟಮಿ ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್ ನವರಾತ್ರಿ ದಿನ ೯ ದೇವಿ: ಚಾಮುಂಡ ಹೂವು: ತಾವರೆ ನೈವೇದ್ಯ: ಕ್ಷೀರಾನ್ನ ತಿಥಿ: ನವಮಿ ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಚಾಮುಂಡ ಪ್ರಚೋದಯಾತ್ ವಿಜಯ ದಶಮಿ ದೇವಿ: ವಿಜಯ ಹೂವು: ಮಲ್ಲಿಗೆ, ಗುಲಾಬಿ ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್ (ಸಂಗ್ರಹ)