ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಅವರೊಂದಿಗೆ ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ನಡೆಸಿದ ಮಾತುಕತೆಯನ್ನು ಸ್ವತಃ ಶ್ರೀಗಳು ಇಲ್ಲಿ ಹಂಚಿಕೊಂಡಿದ್ದಾರೆ.
ಹರಿಹರ: ಇಲ್ಲಿನ ಶ್ರೀ ಪಂಚಮಸಾಲಿ ಜಗದ್ಗುರು ಮಠಕ್ಕೆ ಅ.27ರಂದು ನಿನ್ನೆ(ಮಂಗಳವಾರ) ಶ್ರೀ ಶಂಕರಗೌಡ ಪಾಟೀಲರು ಭೇಟಿ ನೀಡಿ ಅಲ್ಲಿನ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಅವರೊಂದಿಗೆ ಶಂಕರಗೌಡ ಪಾಟೀಲ ಅವರು ನಡೆಸಿದ ಮಾತುಕತೆಯನ್ನು ಸ್ವತಃ ಶ್ರೀಗಳು ಇಲ್ಲಿ ಹಂಚಿಕೊಂಡಿದ್ದಾರೆ.
ಶ್ರೀ ಶಂಕರಗೌಡ ಪಾಟೀಲರು ಹರಿಹರದ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿದ್ದರು. ಪಾಟೀಲರು ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದಾರೆ. ಜನಪರವಾದ ಮತ್ತು ರಾಷ್ಟ್ರ ಪರವಾದ ಪಾಟೀಲರ ಆಯ್ಕೆ ವೈಯಕ್ತಿಕವಾಗಿ ನಮಗೆ ಮತ್ತು ಉತ್ತರ ಕರ್ನಾಟಕದ ಜನರಿಗೆ ತುಂಬಾ ಸಂತಸ ತಂದಿದೆ.
ಭೇಟಿ ಸಂದರ್ಭದಲ್ಲಿ ಶ್ರೀ ಶಂಕರಗೌಡ ಪಾಟೀಲರು ಹಲವು ವಿಷಯಗಳನ್ನ ನಮ್ಮ ಜೊತೆ ಚರ್ಚಿಸಿದರು. ಅವರಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬಹಳ ದೊಡ್ಡ ಕನಸಿದೆ. ಹುರುಪಿದೆ. ಉತ್ತರ ಕರ್ನಾಟಕದ ರಾಜಮನೆತನದಲ್ಲಿ ಜನಿಸಿದ ಪಾಟೀಲರು ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು. ಆದರೂ ಅವರಿಗೆ ಎಲೆಮರೆಕಾಯಿಯಂತೆ ಕೆಲಸ ಮಾಡುವ ಮನೊಭಾವ ಸಿದ್ದಿಸಿದೆ.
ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಅನ್ನೋದು ಅವರ ಕಾಯಕದ ಇಂಗಿತ. ನಾನು ಅನ್ನೋದಕ್ಕಿಂತ ನಾವು ಅನ್ನೋದರಲ್ಲಿ ಹೆಚ್ಚು ಒಳಗೊಳ್ಳುವಿಕೆ ಇದೆ ಅನ್ನೋದು ಅವರ ನಂಬಿಕೆ. ಶ್ರೀ ಶಂಕರಗೌಡ ಪಾಟೀಲರು ಸಹೃದಯಿಗಳು. ಮಹತ್ವಾಕಾಂಕ್ಷಿಗಳು. ಸದಾ ಜನಪರವಾಗಿ ದುಡಿಯುವವರು. ಹೇಗೆಂದರೆ ಹಾಲಿನಲ್ಲಿ ಬೆರೆಸಿದ ಸಕ್ಕರೆಯ ಹಾಗೆ. ಇದ್ದರೂ ಅವರ ಇರುವಿಕೆಯೇ ಗೊತ್ತಾಗಲ್ಲ. ಆದರೆ ಎಲ್ಲವೂ ರುಚಿಕಟ್ಟಾಗಿ ಆಗಿರುತ್ತದೆ. ಅಂತಹ ಸರಳ ಸಜ್ಜನ ವ್ಯಕ್ತಿತ್ವ ಅವರದ್ದು.
ಇನ್ನೊಂದು ಹೇಳಲೇಬೇಕಾದ ಪಾಟೀಲರ ಗುಣವೆಂದರೆ ಅವರ ಧೀಶಕ್ತಿ. ಅವರೆಂದೂ ಅಧಿಕಾರದ ವ್ಯಾಮೋಹಿ ಅಲ್ಲವೇ ಅಲ್ಲ. ಅತ್ಯುತ್ತಮ ಸಂಘಟನಾ ಸಾಮರ್ಥ್ಯವಿರುವ, ಸಮರ್ಥ ನಾಯಕತ್ವ ಗುಣವಿರುವ ಪಾಟೀಲರು ಅಧಿಕಾರ ವ್ಯಾಮೋಹಿ ಆಗದೆ ನಿಸ್ವಾರ್ಥತೆಯಿಂದ ಕೆಲಸ ಮಾಡುತಿದ್ದಾರೆ.
ಕೆಸರಿನಲ್ಲಿದ್ದರೂ ಕಮಲ ಹೇಗೆ ಅದಕ್ಕೆ ಅಂಟಿಕೊಳ್ಳುವುದಿಲ್ಲವೋ ಹಾಗೆ, ಶುದ್ಧ. ಸಂಸಾರದಲ್ಲಿದ್ದೂ ಸನ್ಯಾಸಿಯಂತೆ ಇರುವ ವ್ಯಕ್ತಿತ್ವ ಪಾಟೀಲರದ್ದು. ಶ್ರೀ ಶಂಕರಗೌಡ ಪಾಟೀಲರಿಗೆ ಸಾಧು ಸಂತರು ,ಯೋಗಿಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ.
ಗೌರವವಿದೆ. ಶ್ರೀ ಸ್ವಾಮಿ ವಿವೇಕಾನಂದರಂಥ ಮಹಾನ್ ಯೋಗಿಗಳು ಈ ದೇಶದ ಬಹುದೊಡ್ಡ ಪರಿವರ್ತನೆಗೆ ಕಾರಣರಾದರು. ಹಾಗಾಗಿ ಯೋಗಿಗಳು, ಸಂತರು ಈ ದೇಶದಲ್ಲಿ ಹೆಚ್ಚೆಚ್ಚು ರೂಪುಗೊಳ್ಳಬೇಕು. ಆ ಮೂಲಕ ರಾಷ್ಟ್ರವನ್ನ ಸದೃಢವಾಗಿ ಕಟ್ಟಬೇಕು ಅನ್ನೋದು ಅವರ ಕನಸು.
ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯವರಾದ ಶ್ರೀ ಶಂಕರಗೌಡ ಪಾಟೀಲ ಬೆಳಗಾವಿಯವರು ಕಳೆದ ಮೂರು ದಶಕಗಳಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಮುಖ ಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನ ತಳಮಟ್ಟದಲ್ಲಿ ಕಟ್ಟುವಲ್ಲಿ ಶ್ರೀ ಶಂಕರಗೌಡರ ಪಾತ್ರ ಬಹಳ ಮುಖ್ಯವಾದುದು. ವಿಜಯಪುರದ ಮಣ್ಣಿನ ಮಗನ ಕಾರ್ಯದಕ್ಷತೆ, ಪರಿಶ್ರಮ ಮತ್ತು ಸಂಘಟನಾ ಕೌಶಲವನ್ನು ಅರಿತ ಸಂಘ ಅವರಿಗೆ ಹಲವು ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಶ್ರೀಶಂಕರ ಗೌಡರು ಕೊಂಡಿಯಾಗಿ ಕೆಲಸ ಮಾಡಲಿ ಆ ಮೂಲಕ ಉತ್ತರ ಕರ್ನಾಟಕದ ದನಿಯಾಗಿ ಹೆಚ್ಚು ಅಭಿವೃದ್ಧಿಗೆ ಕಾರಣವಾಗಲಿ ಅಂತ ನಾನು ಅವರಿಗೆ ಶುಭಾಶಯ ಕೋರುತ್ತೇನೆ.