ಮನೆಯಲ್ಲೇ ಮಾಡಿ ಬೆಂಗಾಲಿ ರಸಗುಲ್ಲ

ಮನೆಯಲ್ಲೇ ಯಾವತ್ತಾದರೂ ನೀವು ಈ ಸಿಹಿಯನ್ನು ಟ್ರೈ ಮಾಡಿದ್ದೀರಾ? ಇಲ್ಲವೆಂದರೆ ಇಂದೇ ಟ್ರೈ ಮಾಡಿ.

ರಸಗುಲ್ಲ ಅನ್ನುತ್ತಿದ್ದ ಹಾಗೆ ಬಾಯಲ್ಲಿ ನೀರು ಒಸರುತ್ತೆ. ಮನೆಯಲ್ಲೇ ಯಾವತ್ತಾದರೂ ನೀವು ಈ ಸಿಹಿಯನ್ನು ಟ್ರೈ ಮಾಡಿದ್ದೀರಾ? ಇಲ್ಲವೆಂದರೆ ಇಂದೇ ಟ್ರೈ ಮಾಡಿ.

ಕೆಲವೊಮ್ಮೆ ಹಾಲು ಯಾವುದೋ ಕಾರಣದಿಂದ ಒಡೆದು ಹೋಗುತ್ತದೆ. ಹಾಲು ಒಡೆದು ಮೊಸರು ಆಗುತ್ತದೆಯಾದರೂ, ಕಾಯಿಸುವಾಗಲೇ ಒಡೆದ ಹಾಲಿನಿಂದ ಮೊಸರು ಮಾಡಿದರೆ ಅದು ಅಷ್ಟು ರುಚಿಯಾಗಿರುವುದಿಲ್ಲ.ಒಡೆದ ಹಾಲನ್ನು ಹಾಗೆ ಚೆಲ್ಲುವ ಬದಲು ಸ್ವಾದಭರಿತ ರಸಗುಲ್ಲ ಮಾಡಿ ಬಾಯಿ ಸಿಹಿ ಕೊಳ್ಳಬಹುದು. ರಸಗುಲ್ಲವನ್ನು ಮನೆಯಲ್ಲೇ ಮಾಡಿದರೆ ರುಚಿ ಇನ್ನೂ ಹೆಚ್ಚು.


ಬೇಕಾಗುವ ಸಾಮಾಗ್ರಿಗಳು: ಒಂದು ಲೀಟರ್ ಹಾಲು, 2 ಚಮಚ ನಿಂಬೆಹಣ್ಣಿನ ರಸ, ಅರ್ಧ ಚಮಚ ಸಣ್ಣ ರವೆ ಮತ್ತು ಅರ್ಧ ಕೆ.ಜಿ ಸಕ್ಕರೆ.

ಮಾಡುವ ವಿಧಾನ: ಹಾಲನ್ನು ಕಾಯಿಸಿಕೊಳ್ಳಬೇಕು. ಕಾದಿರುವ ಹಾಲಿಗೆ ನಿಂಬೆರಸ ಹಿಂಡಿ ಅರ್ಧ ನಿಮಿಷ ಕುದಿಸಿ ಕೆಳಗಿಳಿಸಬೇಕು. (ಒಡೆದ ಹಾಲಿದ್ದರೆ ಹಾಗೇ ತಯಾರಿಸಬಹುದು) ತೆಳು ಬಟ್ಟೆಯಲ್ಲಿ ಒಡೆದ ಹಾಲನ್ನು ಶೋಧಿಸಿ ಗಟ್ಟಿ ಭಾಗವನ್ನು ಬಟ್ಟೆಯಲ್ಲಿಯೇ ಸುತ್ತಿ 2 ಗಂಟೆ ನಂತರ ಗಂಟು ಬಿಚ್ಚಿ ಒಂದು ತಟ್ಟೆಯಲ್ಲಿ ಈ ಮಿಶ್ರಣವನ್ನು 10 ನಿಮಿಷ ಚೆನ್ನಾಗಿ ನಾದಬೇಕು. ಉಂಡೆಗಳನ್ನು ಮಾಡಲು ಸುಲಭವಾಗಲೆಂದು ಸ್ವಲ್ಪ ಸಣ್ಣ ರವೆ ಬೆರೆಸಬಹುದು. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಒಂದು ತಟ್ಟೆಯಲ್ಲಿಡಬೇಕು. ಈಗ ಸಕ್ಕರೆ ನೀರನ್ನು ಒಲೆಯ ಮೇಲಿಟ್ಟು ಕುದಿದ ನಂತರ ಅದರಲ್ಲಿ ಕಾಲು ಭಾಗವನ್ನು ಇನ್ನೊಂದು ಪಾತ್ರೆಗೆ ಹಾಕಿ. ಒಲೆಯ ಮೇಲೆ ಇರುವ ಪಾಕಕ್ಕೆ ಉಂಡೆ ಮಾಡಿದ ಮಿಶ್ರಣ ಹಾಕಿ. ಸ್ವಲ್ಪ ದೊಡ್ಡ ಉರಿಯಲ್ಲಿ ಕುದಿಸಿ. ಆದರೆ ತಳ ಸೀಯದಂತೆ ನೋಡಿಕೊಳ್ಳಿ. ತೆಗೆದಿಟ್ಟುಕೊಂಡಿರುವ ಪಾಕವನ್ನು ಆಗಾಗ್ಗೆ ಉಂಡೆಗಳ ಮೇಲೆ ಚುಮುಕಿಸುತ್ತಿರಬೇಕು. ಉಂಡೆ ಸಕ್ಕರೆ ಪಾಕದಲ್ಲೇ ಅರ್ಧ ಗಂಟೆ ಬೇಯಬೇಕು. ಬೆಂದ ನಂತರ ಉಂಡೆಗಳು ಉಬ್ಬುತ್ತದೆ. ಈಗ ನೋಡಿ ರುಚಿಭರಿತ ರಸಗುಲ್ಲ ತಿನ್ನಲು ರೆಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles