ಶ್ರೀ ವಿಷ್ಣುವಿನ ಕೂರ್ಮಾವತಾರದ ದೇಗುಲಗಳಿವು

ಕೂರ್ಮನ ಅವತಾರದಲ್ಲಿ ವಿಷ್ಣುವನ್ನು ಆರಾಧಿಸುವ ದೇವಸ್ಥಾನಗಳು ದೇಶದಲ್ಲೆ ಸಿಗುವುದು ತುಂಬಾ ವಿರಳ. ಅಂತಹ ವಿರಳಾತೀತ ದೇಗುಲಗಳ ಪರಿಚಯ ಇಲ್ಲಿದೆ.

ಹಿಂದೂ ಪುರಾಣಗಳ ಪ್ರಕಾರ ದೇವರ ಅವತಾರಗಳ ಕಥೆಗಳು ರೋಚಕ. ವಿಷ್ಣುವಿನ ದಶಾವತಾರಗಳಲ್ಲಿ ಎರಡನೇ ಅವತಾರವೇ ಕೂರ್ಮಾವತಾರ. ಕೃತಯುಗದಲ್ಲಿ ಭಗವಾನ್ ಶ್ರೀವಿಷ್ಣು ಕೂರ್ಮಾವತಾರ ತಾಳುತ್ತಾನೆ. ಕೂರ್ಮನ ಅವತಾರದಲ್ಲಿ ವಿಷ್ಣುವನ್ನು ಆರಾಧಿಸುವ ದೇವಸ್ಥಾನಗಳು ದೇಶದಲ್ಲೆ ಸಿಗುವುದು ತುಂಬಾ ವಿರಳ. ಅಂತಹ ವಿರಳಾತೀತ ದೇಗುಲಗಳ ಪರಿಚಯ ಇಲ್ಲಿದೆ.
ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀ ಕೂರ್ಮಂನಲ್ಲಿ ನೆಲೆಗೊಂಡಿವೆ.

ಶ್ರೀ ಕೂರ್ಮನ್ ದೇವಸ್ಥಾನ
ಈ ದೇವಸ್ಥಾನದಲ್ಲಿ ಕೂರ್ಮನನ್ನೇ ಮೂಲ ದೇವರನ್ನಾಗಿ ಆರಾಸಲಾಗುತ್ತದೆ. ಶ್ರೀ ರಾಮಾನುಜಾಚಾರ್ಯರು ಶ್ರೀಕಾಕುಲಂನಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದರು ಎಂಬುದು ಚರಿತ್ರೆಯ ಪುಟಗಳಿಂದ ತಿಳಿದುಬರುತ್ತದೆ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಈ ದೇವಸ್ಥಾನ, ಶ್ರೀಕಾಕುಳಂ ಪಟ್ಟಣದಿಂದ 16ಕಿ.ಮೀ. ದೂರದಲ್ಲಿದೆ.
ಶ್ರೀ ಕಾಕುಳಂನಲ್ಲಿರುವ ಕೂರ್ಮ ದೇವಸ್ಥಾನ ಏಳುನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿರುವ ದೇವರು ಅಂದರೆ ಎರಡು ಅಡಿ ಎತ್ತರದ ಹೊಂದಿದೆ. ಮತ್ತೊಂದು ಕಡೆ ರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಯನ್ನು ನೋಡಬಹುದು. ಗೋಡೆಗಳಲ್ಲಿ ಗೋವಿಂದದೇವ (ಶ್ರೀಕೃಷ್ಣ) ಹಾಗೂ ಅವನ ಸಖಿಯರ ಚಿತ್ರಣವನ್ನು ಕಾಣಬಹುದು.
ಪೂರ್ವಾಭಿಮುಖವಾಗಿರುವ ಈ ದೇವಸ್ಥಾನದಲ್ಲಿ ಕೂರ್ಮದೇವ ಪಶ್ಚಿಮಾಭಿಮುಖವಾಗಿದ್ದಾನೆ. ವಿಶೇಷತೆ ಅಂದರೆ ದೇವಸ್ಥಾನದ ಪ್ರವೇಶ ದ್ವಾರದ ಮೂಲಕ ಬಂದರೆ ದೇವರ ಹಿಂಭಾಗ ಮಾತ್ರ ಕಾಣಿಸುತ್ತದೆ. ಶಿಲೆಯಿಂದ ಕೆತ್ತಲ್ಪಟ್ಟ ದೇವರ ಮೂರ್ತಿಯು ಎರಡು ರೀತಿಯ ವಿನ್ಯಾಸವನ್ನೊಳಗೊಂಡಿದೆ. ಆಮೆಯ ದೇಹ, ಕಾಲು ಹೊಂದಿರುವ ದೇವರ ಮೂರ್ತಿಯು ವಿಷ್ಣುವಿನ ಕೈಗಳು ಹಾಗೂ ಶಿರವನ್ನು ಹೊಂದಿದೆ.
ಬಿಲ್ಮಂಗಲ ಠಾಕೂರನು ಕೂರ್ಮದೇವನ ಪರಮಭಕ್ತನಾಗಿದ್ದ. ಅವನ ಭಕ್ತಿಗೆ ಮೆಚ್ಚಿದ ವಿಷ್ಣುದೇವ ಹಿಮ್ಮುಖವಾಗಿ ಅವನಿಗೆ ದರ್ಶನ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಬಿಲ್ಮಂಗಲನಿಗೆ ದೇವಸ್ಥಾನದ ಪಕ್ಕದಲ್ಲಿಯೇ ಸುಂದರವಾದ ದೇವಸ್ಥಾನವನ್ನು ನಿರ್ಮಾಣಗೊಂಡಿದೆ. ಈ ದೇವಸ್ಥಾನದೊಳಗೇ ಬಿಲ್ವಮಂಗಲನ ಸಮಾಯಿದೆ ಎಂದು ನಂಬಲಾಗಿದೆ. ದೇಗುಲದ ವಾಸ್ತುಶಿಲ್ಪ ಬಹಳ ಸುಂದರವಾಗಿದೆ.
ಹತ್ತಿರದ ಯಾತ್ರಾಕ್ಷೇತ್ರಗಳು : ತಿರುಪತಿ, ವಿಶಾಖಪಟ್ಟಣಂ, ಹೈದರಾಬಾದ್‍ನಲ್ಲಿರುವ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಭೇಟಿನೀಡಿ ಬರಬಹುದು.

ಹೋಗುವುದು ಹೇಗೆ?: ಹತ್ತಿರದ ವಿಮಾನ ನಿಲ್ದಾಣ ವಿಶಾಖಪಟ್ಟಣಂ, ಶ್ರೀಕಾಕುಳಂನಿಂದ 106ಕಿ.ಮೀ., ಹತ್ತಿರದ ರೈಲು ನಿಲ್ದಾಣ ಶ್ರೀಕಾಕುಳಂ ರೋಡ್ ರೈಲು ನಿಲ್ದಾಣ ಅಲ್ಲಿಂದ 30 ಕಿ.ಮೀ. ದೂರದಲ್ಲಿ  ಶ್ರೀಕೂರ್ಮ ದೇವಸ್ಥಾನವಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳಿಂದ ಶ್ರೀಕಾಕುಳಂಗೆ ರಸ್ತೆ ಮಾರ್ಗದ ಮೂಲಕವೂ ಭೇಟಿ ನೀಡಬಹುದು.

2. ಕೂರ್ಮೈ ದೇವಸ್ಥಾನ: ಚಿತ್ತೂರಿನಲ್ಲಿರುವ ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾಗಿರುವ ಈ  ದೇವಸ್ಥಾನವನ್ನು ಕೂರ್ಮ ವಾದಿರಾಜ ಸ್ವಾಮಿ ದೇವಸ್ಥಾನ ಎಂದೂ ಕರೆಯುತ್ತಾರೆ. ಈ ಸ್ಥಳ ಪ್ರಸಿದ್ಧ ಶಿವ ದೇವಸ್ಥಾನದಿಂದಲೂ ಪುಣ್ಯಕ್ಷೇತ್ರ ಎನಿಸಿದೆ. ಅತಿ ದೊಡ್ಡ ಶಿವಲಿಂಗ ಇರುವ ದಕ್ಷಿಣ ಭಾರತದ ಸ್ಥಳಗಳಲ್ಲಿ ಒಂದಾಗಿದೆ.

3. ಗವಿ ರಂಗಾಪುರ, ಹೊಸದುರ್ಗ
ಚಿತ್ರದುರ್ಗದ ಹೊಸದುರ್ಗದಲ್ಲಿರುವ ಗವಿರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ವಿಷ್ಣುವನ್ನು ಕೂರ್ಮನ ಅವತಾರದಲ್ಲಿ ದರ್ಶನ ಮಾಡಬಹುದು.
ಹೊಸದುರ್ಗ ಪಟ್ಟಣದಿಂದ 28ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನದೊಳಗಿನ ಗುಹೆಯೊಳಗೆ ವಿಷ್ಣುವಿನ ಕೂರ್ಮವತಾರವನ್ನು ಕಾಣಬಹುದು. ಗುಹೆ ಇರುವುದರಿಂದಲೇ ಈ ದೇವಸ್ಥಾನಕ್ಕೆ ಗವಿರಂಗಾಪುರ ಎಂಬ ಹೆಸರು ಬಂದಿದೆ.
ರಸ್ತೆ ಮಾರ್ಗದ ಮೂಲಕ ಇಲ್ಲವೇ ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಬಹುದು. ಮುಂಭಾಗದಲ್ಲಿ ಗರುಡನ ದೊಡ್ಡದಾದ ಕಂಚಿನ ಮೂರ್ತಿಯನ್ನು ಕಾಣಬಹುದು. ರಾಜಗೋಪುರದಲ್ಲಿ ಹಲವಾರು ಪೌರಾಣಿಕ ಚಿತ್ರಗಳು ಚಿತ್ರಿತಗೊಂಡಿವೆ. ಗೋಡೆಗಳಲ್ಲಿ ಸಮುದ್ರಮಥನದ ಚಿತ್ರಗಳು ಕೆತ್ತಲ್ಪಟ್ಟಿವೆ. ಗರ್ಭಗೃಹವು ಗುಹೆಯಂತೆ ನಿರ್ಮಾಣಗೊಂಡಿದೆ. ಭಗವಾನ್ ವಿಷ್ಣುವಿನ ಸುಂದರವಾದ ಮೂರ್ತಿಯು ಗುಹೆಯ ಮಧ್ಯಭಾಗದಲ್ಲಿ. ಆ ಮೂರ್ತಿಗೆ ಬೆಳ್ಳಿಯ ಕಣ್ಣುಗಳನ್ನು ಅಂಟಿಸಲಾಗಿದೆ. ವಿಷ್ಣುವಿನ ನಾಮವನ್ನು ಹಣೆಯಲ್ಲಿ ಚಿತ್ರಿಸಲಾಗಿದೆ. ಬೆಳ್ಳಿಯ ಶಂಖ, ಚಕ್ರವನ್ನು ಎಡ ಬಲ ಕೈಗಳಲ್ಲಿ ಕಾಣಬಹುದು.  ಗುಡಿಯೊಳಗಿರುವ ಮೂರ್ತಿಯು ನಿತ್ಯ ಹೂವಿನಿಂದ ಅಲಂಕಾರಗೊಂಡಿರುತ್ತದೆ. ಪ್ರತಿದಿನ ಆರತಿ ನಡೆಯುತ್ತದೆ, ಮೊಸರನ್ನು ತೀರ್ಥ ರೂಪದಲ್ಲಿ ನೀಡಲಾಗುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles