108 ಶಕ್ತಿ ಗಣಪತಿ ದೇಗುಲ ಎಂದೇ ಹೆಸರಾಗಿರುವ ಈ ದೇಗುಲದಲ್ಲಿ ಒಂದೇ ಕಡೆ ಗಣೇಶನ ೧೦೮ ವಿಗ್ರಹಗಳನ್ನು ನೋಡಬಹುದು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ೫ನೇ ಮುಖ್ಯರಸ್ತೆಯಲ್ಲಿರುವ ಈ ದೇಗುಲದಲ್ಲಿ ಹಬ್ಬ, ವಿಶೇಷ ದಿನಗಳಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿನಿತ್ಯ ದೇಗುಲದಲ್ಲಿ ಬೆಳಗ್ಗೆ ಹಾಗೂ ರಾತ್ರಿ ಹೊತ್ತು ಮಹಾಪೂಜೆ ನಡೆಯುತ್ತದೆ.
ವಿಘ್ನೇಶ್ವರನ ೧೦೮ ವಿಗ್ರಹಗಳನ್ನು ಈ ದೇಗುಲದಲ್ಲಿ ಸ್ಥಾಪನೆ ಮಾಡಲಾಗಿದೆ. ಮನುಷ್ಯನ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಿಘ್ನಗಳು ಬರುತ್ತಲೇ ಇರುತ್ತವೆ. ಗಣೇಶನ ನೂರ ಎಂಟು ವಿಗ್ರಹಗಳಿರುವ ಈ ದೇಗುಲದಲ್ಲಿ ವಿಶ್ವವಂದ್ಯನ ದರ್ಶನ ಮಾಡಿದರೆ ನೂರೆಂಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುವುದು ಎನ್ನುತ್ತಾರೆ ದೇಗುಲದ ಮ್ಯಾನೇಜರ್ ಲಕ್ಷಿö್ಮಕಾಂತ್ ಅವರು.
ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುವ ದೇಗುಲದಲ್ಲಿ ಮುರಳಿ ಜೋಯಿಸ್ ಪ್ರಧಾನ ಅರ್ಚಕರಾಗಿ ದೇವರ ಸೇವೆಯಲ್ಲಿ ನಿರತರಾಗಿದ್ದಾರೆ.
ವಿಶೇಷ ಸೇವೆಗಳು: ಪಂಚಾಮೃತ ಸೇವೆ, ಅಷ್ಟೋದಕ ಸೇವೆ, ಕಡುಬು, ಅಲಂಕಾರ ಸೇವೆ ನಡೆಯುತ್ತದೆ. ಅಲಂಕಾರ ಸೇವೆಗಳಲ್ಲಿ ಬೆಣ್ಣೆ ಅಲಂಕಾರ, ಅರಶಿನ ಕುಂಕುಮ, ವಿಭೂತಿ, ಬೆಣ್ಣೆ, ಒಣ ಹಣ್ಣುಗಳ ಅಲಂಕಾರ ಸೇವೆಗಳನ್ನು ಭಕ್ತರು ಮಾಡಿಸಬಹುದು.
ದೇಗುಲ ದರ್ಶನ ಸಮಯ: ಬೆಳಗ್ಗೆ 6.30 ರಿಂದ 11. ಸಂಜೆ 6ರಿಂದ ರಾತ್ರಿ 8.30.