ಪದೇ ಪದೆ ಕಾಡುವ ತಲೆನೋವಿಗೆ ಮನೆ ಮದ್ದು

ಯಾವಾಗಲೂ ತಲೆನೋವು ಎನ್ನುವವರು , ಪದೇ ಪದೆ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಈ ಮನೆ ಔಷಧಗಳನ್ನು ಬಳಸಿ.

ಯಾವಾಗಲೂ ತಲೆನೋವು ಬರುತ್ತಿದ್ದರೆ ಅದಕ್ಕಾಗಿ ಪದೇ ಪದೆ ಮಾತ್ರೆಯನ್ನು ತೆಗೆದುಕೊಂಡು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೆಲವು ಔಷಧಗಳನ್ನು ಮಾಡಿ ನೋಡಬಹುದು.

ಅತಿಯಾದ ಕೆಲಸದ ಒತ್ತಡ, ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ, ಅತಿಯಾದ ಮೊಬೈಲ್ ಬಳಕೆ ಮತ್ತು ಇನ್ನಿತರ ಕಾರಣಗಳಿಂದ ಕಾಣಿಸಿಕೊಳ್ಳುವ ತಲೆ ನೋವುಗಳಿಗೆ ನೀವೇ ಔಷಧ ಮಾಡಿಕೊಳ್ಳಬಹುದು.

* ಶುಂಠಿ:

ಶುಂಠಿ ತಲೆಯಲ್ಲಿನ ರಕ್ತನಾಳಗಳ ಉರಿಯೂತವನ್ನು ತಗ್ಗಿಸಲು ಸಹಾಯ ಮಾಡುವುದರಿಂದ ತಲೆನೋವನ್ನು ನಿವಾರಿಸುತ್ತದೆ. ದಿನವೂ 2 ರಿಂದ 3 ಬಾರಿ 2 ಚಮಚ ಶುಂಠಿ ರಸ ಮತ್ತು 2 ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯಿರಿ. 1 ಚಮಚ ಶುಂಠಿ ಪುಡಿ ಮತ್ತು 2 ಚಮಚ ನೀರನ್ನು ಮಿಕ್ಸ್ ಮಾಡಿ ಆ ಪೇಸ್ಟ್ ಅನ್ನು ಕೆಲವು ನಿಮಿಷಗಳವರೆಗೆ ಹಣೆಗೆ ಹಚ್ಚಿಕೊಳ್ಳಿ. ಶುಂಠಿಯನ್ನು ಜಜ್ಜಿ ಅದನ್ನು ನೀರಿನಲ್ಲಿ ಕುದಿಸಿ ಅದರ ಆವಿಯನ್ನು ತೆಗೆದುಕೊಳ್ಳಿ.

ಪುದೀನಾ ಎಲೆ

ಮೆನ್ಥೋಲ್ ಮತ್ತು ಮೆನ್ಟೋನ್ಗಳು ಪುದೀನದ ಪ್ರಾಥಮಿಕ ಅಂಶಗಳಾಗಿವೆ. ಅವು ತಲೆನೋವನ್ನು ನಿವಾರಿಸಲು ಬಹಳ ಪರಿಣಾಮಕಾರಿಯಾಗಿದೆ. ಒಂದು ಹಿಡಿ ಪುದೀನದ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತೆಗೆದು ಹಣೆಯಮೇಲೆ ಹಚ್ಚಿಕೊಳ್ಳಿ. ಪುದೀನಾ ಎಣ್ಣೆ 3-4 ಹನಿ ಪುದೀನಾ ಎಣ್ಣೆಯನ್ನು 1 ಚಮಚ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಅಥವಾ ನೀರಿನೊಂದಿಗೆ ಬೆರೆಸಿಕೊಂಡು ಹಣೆಗೆ ಮಸಾಜ್ ಮಾಡಿಕೊಳ್ಳಿ. ಒಂದು ಬೌಲ್ ಕುದಿಯುವ ನೀರಿಗೆ 3-4 ಹನಿ ಪುದೀನಾ ಎಣ್ಣೆಯನ್ನು ಹಾಕಿ ಅದರ ಆವಿಯಲ್ಲಿ ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳುತ್ತಿರಬೇಕು.

ತುಳಸಿ

ತುಳಸಿ ಉದ್ವಿಘ್ನ ಸ್ನಾಯುಗಳ ಮೂಲಕ ಉಂಟಾಗುವ ಸೌಮ್ಯವಾದ ತಲೆನೋವುಗಳಿಗೆ ಸಹಾಯಕವಾಗುವ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತದೆ. ಜೊತೆಗೆ, ಇದು ಶಾಂತಗೊಳಿಸುವ ಮತ್ತು ನೋವುನಿವಾರಕ ಪರಿಣಾಮಗಳನ್ನು ಹೊಂದಿದೆ. ಒಂದು ಲೋಟ ನೀರಿಗೆ 5-6 ತುಳಸಿ ಎಲೆಗಳನ್ನು ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನನ್ನು ಸೇರಿಸಿ ಕುಡಿಯಿರಿ. 7-8 ಜಜ್ಜಿದ ತುಳಸಿ ಎಲೆಗಳು ಅಥವಾ 2-3 ಹನಿ ತುಳಸಿ ಎಣ್ಣೆಯನ್ನು ಕುದಿಯುವ ನೀರಿಗೆ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳಬೇಕು. 3-4 ತಾಜಾ ತುಳಸಿ ಎಲೆಗಳನ್ನು ಅಗಿಯಿರಿ ಮತ್ತು ತುಳಸಿ ಎಣ್ಣೆಗೆ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಅದನ್ನು ಹಣೆಗೆ ಮಸಾಜ್ ಮಾಡಿ.

(ಸತ್ಸಂಗ ಸಂಗ್ರಹ): ಎಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles