ಕಲೆಗೆ ಮೂರ್ತ ರೂಪ ನೀಡಿದ ಕಲಾವಿದೆ ಡಾ.ಸಂಜೋತಾ

ಕ್ಯಾಮೆರಾದಲ್ಲಿ ಸಿರೆ ಹಿಡಿದಷ್ಟೇ ಸುಂದರವಾಗಿ ಕಾಣುವ ವ್ಯಕ್ತಿಯ ಚಿತ್ರಗಳು. ಆದರೆ ಅವುಗಳು ಕ್ಯಾಮೆರಾದಲ್ಲಿ ಹಿಡಿದ ಚಿತ್ರಗಳಲ್ಲ. ಫೋಟೋವನ್ನು ನೋಡಿ ಅಷ್ಟೇ ಸುಂದರವಾಗಿ ಕೈಯಿಂದ ಬರೆದ ಚಿತ್ರಗಳನ್ನು ನೋಡಿದರೆ ಬೆರಗಾಗುವುದು ಖಂಡಿತಾ. ತನ್ನ ಸ್ವ ಆಸಕ್ತಿಯಿಂದ ಬೆಳೆಸಿಕೊಂಡ ಕಲೆಗೆ ಮೂರ್ತ ರೂಪ ನೀಡಿ ನೋಡುಗರನ್ನು ಬೆರಗಾಗಿಸಿದ್ದಾರೆ ಕಲಾವಿದೆ ಡಾ.ಸಂಜೋತ ಅವರು.

ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ ಎನ್ನುವ ಮಾತಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದಕ್ಕೆ ಸೂಕ್ತ ಅವಕಾಶ ಸಿಕ್ಕಾಗ ಖಂಡಿತಾ ಹೊರಹೊಮ್ಮುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಡಾ. ಸಂಜೋತಾ ಅವರು.
ಹುಟ್ಟಿದ್ದು ಮಡಿಕೇರಿಯಲ್ಲಿ, ವಿದ್ಯಾಭ್ಯಾಸ ಮಂಗಳೂರಿನಲ್ಲಿ. ತಂದೆ ಮಂಗಳೂರು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರು ಹಾಗೂ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ. ಪಿ.ಎಲ್.ಧರ್ಮ ಅವರು. ತಾಯಿ ಡಾ.ಶಾನಿ.
ಎಳವೆಯಲ್ಲಿಯೇ ತನ್ನ ಆಸಕ್ತಿಯಿಂದ ಬೆಳೆಸಿಕೊಂಡು ಬಂದ ಕಲೆಗೆ ತಂದೆ ತಾಯಿಯ ಪ್ರೋತ್ಸಾಹ ಸಹಜವಾಗಿಯೇ ದೊರಕಿತ್ತು. ಸ್ವಲ್ಪ ದಿನ ಕಲಾ ಶಾಲೆಗೆ ಹೋಗಿ ಅಭ್ಯಸಿಸಿದ ಅವರು, ಚಾರ್ಕೋಲ್ ಪೇಂಟಿ0ಗ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಈಗಾಗಲೇ ಒಟ್ಟು 25ಕ್ಕೂ ಹೆಚ್ಚು ಚಿತ್ರಗಳನ್ನು ಬರೆದಿದ್ದಾರೆ.
“ಒಂದು ಚಿತ್ರ ಮಾಡಲು ಇಂತಿಷ್ಟೇ ಸಮಯ ಅಂತಿಲ್ಲ, ಆದರೂ ಒಂದು ಚಿತ್ರ ಬರೆಯಲು ಕಡಿಮೆ ಅಂದರೂ 2 ಗಂಟೆ ಬೇಕು. ನಾನು ಈಗಾಗಲೇ 25 ಚಿತ್ರಗಳನ್ನು ಬರೆದಿದ್ದೇನೆ, ಎಲ್ಲವೂ ಚಾರ್ಕೋಲ್ ಪೇಂಟಿ0ಗ್ಸ್. ಐದು ಚಿತ್ರಗಳನ್ನು ತೈಲ ವರ್ಣದಲ್ಲಿ ರಚಿಸಿದ್ದೇನೆ. ನಾನು ಮಾಡಿದ ಅಷ್ಟೂ ಚಿತ್ರಗಳಲ್ಲಿ ತುಂಬಾ ಖುಷಿ ಕೊಟ್ಟ ಚಿತ್ರ ಅಂದರೆ ದ.ರಾ.ಬೇಂದ್ರೆ ಅವರದ್ದು. ಯಾವತ್ತಾದರೂ ಒಂದು ದಿನ ಅವುಗಳನ್ನು ಪ್ರದರ್ಶನ ಮಾಡಬೇಕೆಂದುಕೊ0ಡಿದ್ದೇನೆ’ ಎನ್ನುತ್ತಾರೆ ಡಾ.ಸಂಜೋತಾ ಅವರು.
ಮಾತ್ರವಲ್ಲ ವಿದ್ವಾನ್ ಪ್ರಮೋದ್ ಅವರ ಬಳಿ ಭರತನಾಟ್ಯವನ್ನು ಆಭ್ಯಸಿಸುತ್ತಿರುವ ಡಾ.ಸಂಜೋತಾ ಅವರು ಈಗಾಗಲೇ ಜ್ಯೂನಿಯರ್ ಮುಗಿಸಿದ್ದಾರೆ. ಹಲವೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಡೆಂಟಲ್ ಸರ್ಜರಿಯಲ್ಲಿ ಸ್ನಾತಕೊತ್ತರ (ಎಂಡಿಎಸ್) ಪದವಿ ಪಡೆಯುತ್ತಿರುವ ಡಾ. ಸಂಜೋತಾ ಅವರ ತರಗತಿಯಲ್ಲೂ ಮೊದಲನೇ ಸ್ಥಾನಿಗರಾಗಿದ್ದಾರೆ.
ವೈದ್ಯಕೀಯ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಭರತನಾಟ್ಯ ಹಾಗೂ ಚಾರ್ಕೋಲ್‌ ಪೇಂಟಿoಗ್ಸ್ನಲ್ಲಿಅಮೋಘ ಸಾಧನೆ ಮಾಡಿದ ಹೆಗ್ಗಳಿಕೆ ಸಂಜೋತಾ ಅವರದ್ದು.

Related Articles

2 COMMENTS

  1. ಅಭಿನಂದನೆಗಳು… ಡಾ. ಪಿ. ಎಲ್. ಧರ್ಮ ಸರ್ ಅವರ ಕ್ರಿಯಾಶೀಲತೆ.. ಕಠಿಣ ಪರಿಶ್ರಮ.. ದೃಢತೆ.. ಅತ್ಯುತ್ತಮ ನಾಯಕತ್ವ.ನೇರ ನಡೆ ನುಡಿ .. ಇವೆಲ್ಲ ಗುಣಗಳು ತಮ್ಮ ಮಗಳಿಗೆ ಬಂದಿದೆ. ಅಭಿನಂದನೆಗಳು ಪುಟ್ಟಿ

ಪ್ರತಿಕ್ರಿಯೆ ನೀಡಿ

Latest Articles