ನಾಲ್ಕು ಅಂಶಗಳಿಂದಲೇ ವಿಶೇಷತೆ ಪಡೆದಿರೋ ಪ್ರವಾಸಿ ತಾಣಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಚತುರ್ಮುಖ ಬಸದಿ (ಕಾರ್ಕಳ, ಉಡುಪಿ ಜಿಲ್ಲೆ)
ಬೆಂಗಳೂರಿನಿಂದ 362 ಕಿ.ಮೀ. ದೂರದಲ್ಲಿರುವ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಚತುರ್ಮುಖ ಬಸದಿ ಇದೆ. ಇದು ಜೈನರ ಪ್ರಮುಖ ಪವಿತ್ರ ಸ್ಥಳ. ತುಂಬಾ ಫೇಮಸ್ ಕೂಡಾ. ಈ ಬಸದಿಗೆ ಒಂದು ಸಾವಿರ ವರ್ಷಗಳ ಇತಿಹಾಸ ಇರಬಹುದು ಎಂದು ಅಂದಾಜಿಸಲಾಗಿದೆ.
ಜೈನ ಅರಸ ವೀರ ಪಾಂಡ್ಯದೇವನ ಕಾಲದಲ್ಲಿ (೧೪೩೨)ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತದೆ. ನಾಲ್ಕು ದಿಕ್ಕಿಗೂ, ಒಂದೇ ರೀತಿಯ ನಾಲ್ಕು ಬಾಗಿಲುಗಳನ್ನು ಹೊಂದಿರುವುದರಿಂದ ಈ ಬಸದಿಗೆ ಚತುರ್ಮುಖ ಬಸದಿ ಅನ್ನೋ ಹೆಸರು ಬಂದಿರಬೇಕು. ಆ ನಾಲ್ಕೂ ಬಾಗಿಲುಗಳ ಮೂಲಕ ಗರ್ಭಗೃಹವನ್ನು ನೋಡಬಹುದು. ಬಸದಿಯ ಮುಂಭಾಗದಲ್ಲಿ 108 ಕಂಬಗಳಿವೆ. ನಾಲ್ಕು ಮುಖದ ಹಾಲ್‌ನಂತೆ ರಚಿಸಲಾಗಿದೆ. ಬಸದಿಯ ಮೇಲ್ಛಾವಣಿಗೆ ದೊಡ್ಡ ಚಪ್ಪಡಿ ಕಲ್ಲುಗಳನ್ನು ಬಳಸಲಾಗಿದೆ. ಗರ್ಭಗೃಹದೊಳಗೆ ಯಕ್ಷಿ ಪದ್ಮಾವತಿ ಹಾಗೂ 24ನೇ ತೀರ್ಥಂಕರ ಮಹಾವೀರನ ವಿಗ್ರಹವಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ಇದು ಸಂರಕ್ಷಿಸಲ್ಪಟ್ಟಿದೆ.
ಬೆಂಗಳೂರಿನಿಂದ 362 ಕಿ.ಮೀ., ಮೈಸೂರು 275ಕಿ.ಮೀ. ಮಂಗಳೂರು 52 ಕಿ.ಮೀ. ಶಿವಮೊಗ್ಗ144 ಕಿ.ಮೀ. ಉಡುಪಿ ೩೮ಕಿಮೀ.
ಹತ್ತಿರದ ವಿಮಾನ ನಿಲ್ದಾಣ ಮಂಗಳೂರು, ಹತ್ತಿರದ ರೈಲು ನಿಲ್ದಾಣ ಉಡುಪಿ. ಮಂಗಳೂರಿನಿಂದ ಕಾರ್ಕಳಕ್ಕೆ ಖಾಸಗಿ ಬಸ್ ಸಂಪರ್ಕವಿದೆ.
ನರಹರಿ ಪರ್ವತ (ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ)
ಶಂಖ, ಚಕ್ರ, ಗದಾ, ಪದ್ಮ ಅನ್ನೋ ನಾಲ್ಕು ತೀರ್ಥಕೊಳಗಳಿಂದ ಫೇಮಸ್.
ಮಂಗಳೂರಿನಿಂದ28ಕಿ.ಮೀ. ದೂರದಲ್ಲಿ, ಸಮುದ್ರಮಟ್ಟದಿಂದ 1000 ಕಿ.ಮೀ. ಎತ್ತರದಲ್ಲಿ ವಿಹಂಗಮ ದೃಶ್ಯವನ್ನೊಳಗೊಂಡ ಬೆಟ್ಟವೊಂದು ಕಾಣುತ್ತದೆ. ಅತ್ಯದ್ಭುತವಾಗಿ ಕಾಣಿಸುವ ಆ ಬೆಟ್ಟವೇ ನರಹರಿ ಪರ್ವತ. ಆ ಬೆಟ್ಟದಲ್ಲಿ ನರಹರಿ ಸದಾಶಿವ ದೇವಸ್ಥಾನವಿದೆ. ಅಲ್ಲಿ ಚಕ್ರತೀರ್ಥಕೂಪವಿದೆ. ಈ ದೇವಸ್ಥಾನಕ್ಕೆ ಪಾಂಡವರ ಕಾಲದ ಪುರಾಣ ಕಥೆಯೊಂದಿದೆ.
ಮಹಾಭಾರತದ ಕುರುಕ್ಷೇತ್ರ ಯುದ್ಧದದ ಪ್ರಾಯಶ್ಚಿತಕ್ಕಾಗಿ ಶ್ರೀಕೃಷ್ಣ , ಅರ್ಜುನನ ಜತೆಗೂಡಿ ಈ ಬೆಟ್ಟಕ್ಕೆ ಬರುತ್ತಾನೆ. ಅಲ್ಲಿಗೆ ಬಂದ ಕುರುಹಾಗಿ ಶಂಖ, ಚಕ್ರö, ಗಧಾ ಹಾಗೂ ಪದ್ಮ ಅನ್ನೋ ನಾಲ್ಕು ತೀರ್ಥಕೂಪಗಳನ್ನು (ಪವಿತ್ರ ಕೊಳ)ಗಳನ್ನು ನಿರ್ಮಿಸುತ್ತಾನೆ. ಈ ಕೊಳಗಳಲ್ಲಿ ಸ್ನಾನ ಮಾಡುವ ಮೂಲಕ ಅರ್ಜುನ ಪಾಪಗಳನ್ನು ತೊಳೆದುಕೊಳ್ಳುತ್ತಾನೆ. ನಂತರ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾನೆ. ಇದರಿಂದಾಗಿ ಈ ಸ್ಥಳಕ್ಕೆ ನರಹರಿ ಸದಾಶಿವ ಅನ್ನೋ ಹೆಸರು ಬಂದಿದೆ ಎಂದು ನಂಬಲಾಗಿದೆ. ಪಾಂಡವರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುವ ಆ ನಾಲ್ಕು ಪವಿತ್ರ ಕೊಳಗಳು ಈಗಲೂ ಇವೆ.
ನರಹರಿ ಪರ್ವತ ಸದಾಶಿವ ದೇವಸ್ಥಾನವನ್ನು ತಲುಪಲು 333 ಮೆಟ್ಟಿಲುಗಳನ್ನೇರಬೇಕು. ಮೆಟ್ಟಿಲುಗಳನ್ನೇರುವ ದಾರಿಯಲ್ಲಿ ಶಿವ ಶಿವ' ಎಂದು ಬರೆದಿರುವ ಬೋರ್ಡ್ಗಳಿವೆ. ಬೆಟ್ಟದ ಮೇಲೆ ತಲುಪಿದ ನಂತರ ಅಲ್ಲಿ ನಾಲ್ಕು ಪವಿತ್ರ ತೀರ್ಥ ಕೊಳಗಳು ನಿಮ್ಮನ್ನು ಬೆರಗುಗೊಳಿಸದೆ ಇರಲಾರದು. ನಾಲ್ಕು ತೀರ್ಥಕೊಳಗಳು ಹೆಸರಿಗೆ ತಕ್ಕಂತೆ ಅದೇ ಆಕಾರದಲ್ಲಿವೆ. ಬೆಟ್ಟದ ಮೇಲಿಂದ ನೋಡಿದರೆ ಸುಳ್ಯಮಲೆ, ಬಳ್ಳಮಲೆ, ಕಡೆಂಜಮಲೆ ಹಾಗೂ ದಕ್ಷಿಣ ಭಾಗವನ್ನು ನೋಡಬಹುದು. ಅಲ್ಲದೆ ನೇತ್ರಾವತಿ ನದಿ ಹರಿವಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ನರಹರಿ ಪರ್ವತ ರಾಷ್ಟಿçÃಯ ಹೆದ್ದಾರಿ 48 ರಲ್ಲಿ ಕಂಡುಬರುತ್ತದೆ. ಇದು ಮಂಗಳೂರು-ಬೆAಗಳೂರನ್ನು ಸಂಪರ್ಕಿಸುತ್ತದೆ. ಮಂಗಳೂರಿನಿಂದ 28 ಕಿ.ಮೀ. ದೂರದಲ್ಲಿದ್ದು ೪೫ ನಿಮಿಷದಲ್ಲಿ ಬೆಟ್ಟವನ್ನು ತಲುಪಬಹುದು
.
ಚಾರ್‌ಮಿನಾರ್, ಹೈದರಾಬಾದ್ (ಆಂಧ್ರಪ್ರದೇಶ)
ಹೈದರಾಬಾದ್‌ನ ಪ್ರಮುಖ ಐತಿಹಾಸಿಕ ಸ್ಥಳ. ೧೫೯೧ರಲ್ಲಿ ನಿರ್ಮಾಣಗೊಂಡಿದೆ. ಇದನ್ನು ಮುಹಮ್ಮದ್ ಖುಲಿ ಕುತುಬ್ ಷಾಹ್ ನಿರ್ಮಾಣ ಮಾಡಿದನಂತೆ. ಇದು ಹೈದರಾಬಾದ್‌ನ ಲ್ಯಾಂಡ್‌ಮಾರ್ಕ್, ಆಂಧ್ರಪ್ರದೇಶದ ಹೆಮ್ಮೆಯ ಕಿರೀಟವಿದ್ದಂತೆ. ಚಾರ್' ಮತ್ತು
ಮಿನಾರ್’ ಅನ್ನೋ ಎರಡು ಉರ್ದು ಪದಗಳಿಂದ ಚಾರ್‌ಮಿನಾರ್ ಎಂದಾಗಿದೆ. ಅದರರ್ಥ ನಾಲ್ಕು ಗೋಪುರಗಳು ಎಂದು. ಇದು ದೆಹಲಿಯ ತಾಜ್ ಮಹಲ್ ಹಾಗೂ ಪ್ಯಾರಿಸ್‌ನ ಐಫೆಲ್ ಟವರ್‌ನಷ್ಟೇ ಪ್ರಾಮುಖ್ಯತೆ ಪಡೆದಿದೆ.
ಇಸ್ಲಾಮಿಕ್ ವಾಸ್ತಶಿಲ್ಪ ಶೈಲಿಯಲ್ಲಿ ಅಮೃತಶಿಲೆ, ಸುಣ್ಣದ ಕಲ್ಲುö, ಗ್ರಾನೈಟ್ ಹಾಗೂ ಗಾರೆ ಕೆಲಸದಿಂದ ನಿರ್ಮಾಣ ಮಾಡಲಾಗಿದೆ. ಇದು ನಾಲ್ಕು ಕಮಾನುಗಳನ್ನು ಹೊಂದಿದ್ದುö, ಬೀದಿಯ ನಾಲ್ಕೂ ಬದಿ ತೆರೆದುಕೊಂಡಿದೆ. ಇದರ ಮೇಲ್ಭಾಗಕ್ಕೆ ತಲುಪಲು ಒಟ್ಟು ೧೪೯ ಮೆಟ್ಟಿಲುಗಳಿವೆ.
ಚಾರ್‌ಮಿನಾರ್ ತನ್ನ ಭವ್ಯತೆಯಿಂದ ಮಾತ್ರವಲ್ಲದೆ, ಗತಕಾಲದ ವರ್ಚಸ್ಸಿನಿಂದಾಗಿಯೂ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಹೈದರಾಬಾದ್‌ಗೆ ಭೇಟಿ ನೀಡಿದಾಗ ಚಾರ್‌ಮಿನಾರ್‌ನ್ನು ನೋಡಲು ಮರೆಯದಿರಿ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ರಚನೆಯಲ್ಲಿ ನಿರ್ಮಾಣಗೊಂಡಿರುವ ಚಾರ್‌ಮಿನಾರ್ ಹೈದರಾಬಾದ್‌ನ ಗೋಲ್ಕೊಂಡಾ ಕೋಟೆಯ ಹತ್ತಿರದ ಆಕರ್ಷಣೆಗಳಲ್ಲಿ ಒಂದು. ಇದು ಚೌಕಾಕಾರದಲ್ಲಿದ್ದುö, ಕುತ್‌ಬ್ ಷಾಹಿ ಸಾಮ್ರಾಜ್ಯದ ಆಳ್ವಿಕೆಗೆ ಸಾಕ್ಷಿಯಾಗಿದೆ. ಇದು ೫೬ಮೀಟರ್ ಎತ್ತರ, ೩೦ಮೀಟರ್ ಅಗಲ ಇದ್ದುö, ನಾಲ್ಕು ಸ್ತಂಭಗೋಪುರಗಳನ್ನು ಹೊಂದಿದೆ. ಪ್ರತಿ ಸ್ತಂಭ ಗೋಪುರವು ಎರಡು ಬಾಲ್ಕನಿಗಳನ್ನು ಹೊಂದಿದೆ. ನಾಲ್ಕು ದಿಕ್ಕಿಗೂ ನಾಲ್ಕು ಕಮಾನುಗಳಿವೆ. ಈ ಕಮಾನುಗಳು ನಾಲ್ಕು ಪ್ರಧಾನ ರಸ್ತೆಯಲ್ಲಿವೆ. ಮೇಲಿನ ಮಹಡಿಯಲ್ಲಿ ಸಣ್ಣ ಮಸೀದಿಯಿದೆ. ಮಸೀದಿಯೊಳಗೆ ಒಮ್ಮೆಗೆ ೪೫ ಮಂದಿ ಕುಳಿತು ಪ್ರಾರ್ಥನೆ ಸಲ್ಲಿಸಬಹುದು.
ಚತುರ್ಮುಖ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ (ಆಂಧ್ರಪ್ರದೇಶ)
ಚತುರ್ಮುಖ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಆಂಧ್ರಪ್ರದೇಶದ ಚೆಬ್ರೂಲುವಿನ ಪ್ರಮುಖ ಆಕರ್ಷಣೆ. ಇದು ಆಂಧ್ರಪ್ರದೇಶದ ಗುಮಟೂರು ಜಿಲ್ಲೆಯಲ್ಲಿದೆ. ಇದು ಪಲ್ಲವ, ಚಾಲುಕ್ಯö ಹಾಗೂ ಕಾಕತೀಯರ ಪ್ರಮುಖ ಪ್ರಾದೇಶಿಕ ಕೋಟೆಯಾಗಿತ್ತು. ಒಂದು ಕಾಲದಲ್ಲಿ ಇದು ಪಲ್ಲವ, ಚಾಲುಕ್ಯ ಹಾಗೂ ಕಾಕತೀಯರ ಭದ್ರ ಕೋಟೆಯಾಗಿತ್ತು.
ಚಾರ್ ಚಿನಾರ್’ ದ್ವೀಪ (ಶ್ರೀನಗರ)
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್ ಸರೋವರದ ಮಧ್ಯಭಾಗದಲ್ಲಿ ಚಾರ್ ಚಿನಾರ್'ದ್ವೀಪವಿದೆ. ಈ ದ್ವೀಪದಲ್ಲಿ ನಾಲ್ಕು ಸುಂದರ ಚಿನಾರ್ ಮರಗಳಿರುವುದರಿಂದ
ಚಾರ್ ಚಿನಾರ್’ ದ್ವೀಪ ಅನ್ನೋ ಹೆಸರು ಬಂದಿದೆ. ನಾಲ್ಕೂ ಮರಗಳ ನಡುವೆ ಉದ್ಯಾನವಿದೆ. ಈ ಮರಗಳು ಸಾಮಾನ್ಯವಾಗಿ ಪೂರ್ವ ಹಿಮಾಲಯ ಪ್ರದೇಶದಲ್ಲಿ ಬೆಳೆಯುತ್ತವೆ. ಇವುಗಳು ದೀರ್ಘ ಕಾಲದ ಆಯಸ್ಸು ಹೊಂದಿವೆ. ಸಾಕಷ್ಟು ನೀರು ಇರುವ ಜಾಗದಲ್ಲಿ ಇದು ವಿಶಾಲವಾಗಿ ಬೆಳೆಯುತ್ತವೆ. ಈ ದ್ವೀಪ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.