ಭಾಷೆಯೊಳಗಿನ ಭಾಷೆ: ಪ್ರೊ.ಧರ್ಮ ಮೀಮಾಂಸೆ

ನಮ್ಮೊಳಗಿನ ವಿಚಾರಗಳನ್ನು ಹಂಚಿಕೊಳ್ಳುವಾಗ ನಮ್ಮ ಮಾತು ಅಂದರೆ ಭಾಷೆ, ಪದಬಳಕೆಗೆ ಬಹಳ ಮಹತ್ವ ನೀಡಬೇಕು ಎನ್ನುವ ಕುರಿತು ಚಿಂತನೆಯನ್ನು ಹಂಚಿಕೊಂಡಿದ್ದಾರೆ ಮಂಗಳೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಶ್ರೀ ಪ್ರೊ.ಪಿ.ಎಲ್.ಧರ್ಮ ಅವರು.

ಭಾಷೆ ಕೇವಲ ಒಂದು ಮಾಧ್ಯಮವಲ್ಲ. ನನ್ನಿಂದ ಇನ್ನೊಬ್ಬರಿಗೆ, ನನ್ನದನ್ನು ಮತ್ತೊಬ್ಬರಿಗೆ ತಿಳಿಸುವ ಕೇವಲ ಕೆಲಸ ಮಾತ್ರವಲ್ಲ ಭಾಷೆಯದ್ದು. ಹಾಗೆಯೇ ಭಾಷೆಗೆ ಒಂದೇ ಶೈಲಿಯೂ ಇಲ್ಲ. ಭಾಷೆ ಬೆಳೆದಿದೆ, ಬೆಳಿತಾ ಇದೆ. ಮತ್ತು ಬೆಳೆಯುತ್ತಾ ಹೋಗುತ್ತದೆ. ಯಾವುದೇ ಒಂದು ಭಾಷೆ ಅಂತ್ಯವಾಗುತ್ತಿದೆ ಅಂದರೆ ಅದಕ್ಕೆ ಪೂರಕವಾಗಿ ಅಥವಾ ಅದೇ ಜಾಗಕ್ಕೆ ಇನ್ನೊಂದು ಭಾಷೆಯ ಪ್ರವೇಶವಾಗಿದೆ ಎಂದರ್ಥ. ಭಾಷೆಯ ಹೊರಗಡೆ ಏನೋ ಇದೆ ಎಂಬುದು ಶಾಶ್ವತವಲ್ಲ. ಮತ್ತು ಅದು ನಿರಂತರವಾಗಿ ಬದಲಾಗುತ್ತಾ ಹೋಗುತ್ತಿರುತ್ತದೆ. ಯಾರ ಜತೆ ಯಾವ ವಿಷಯ ಮತ್ತು ಯಾವ ಸಂದರ್ಭ ಎನ್ನುವುದರ ಮೇಲೆ ಭಾಷಾಶೈಲಿ ನಿಂತಿದೆ. ಭಾಷೆಯೊಳಗಿನ ಕೆಲವು ಮರ್ಮಗಳು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಎಂದೆ0ದಿಗೂ ಭಾಷೆಯ ಅವಿಭಾಜ್ಯ ಅಂಗವೇ ಆಗಿರುತ್ತದೆ.
ಉದಾಹರಣೆಗೆ ಭಾಷೆಯಲ್ಲಿ ಒಂದು ಮೌಲ್ಯ ಇದೆ, ಉದ್ದೇಶ ಇದೆ, ಅತ್ಯಂತ ಪ್ರಮುಖವಾಗಿ ಒಂದು ಸಿದ್ಧಾಂತ ಇದೆ, ಒಂದು ನಂಬಿಕೆ ಇದೆ. ಅತ್ಯಂತ ಪ್ರಮುಖವಾಗಿ ಒಂದು ಭಾಷೆಯಲ್ಲಿ ಅಧಿಕಾರ ಮತ್ತು ರಾಜಕಾರಣ ಇದೆ. ನಮ್ಮೂರಲ್ಲಿ ಭಾಷೆ ಇಲ್ಲದವನು/ರು ಎಂದು ಬೈದಾಗ ಈ ಮೇಲಿನ ಎಲ್ಲಾ ಮೌಲ್ಯಗಳನ್ನು ಮತ್ತು ಭಾಷೆಯ ಅಂತರAಗವನ್ನು ಕಳೆದುಕೊಂಡವನು/ರು ಎಂದರ್ಥ.
ಇದರೆಲ್ಲದರ ನಡುವೆ ಭಾಷೆಯು ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ಅತಿ ಹೆಚ್ಚು ಬಳಕೆಯಲ್ಲಿರುವ ಮನುಷ್ಯನ ಒಡನಾಡಿ. ನೋವಿಗೊಂದು, ನಲಿವಿಗೊಂದು, ಇನ್ಯಾವುದೋ ಸಂದರ್ಭಕ್ಕೆ ಒಂದೊ0ದು ರೀತಿಯಲ್ಲಿ ಒಬ್ಬನೇ ವ್ಯಕ್ತಿಯಿಂದ ಬಳಕೆಗೊಳಪಡುವ ಭಾಷೆಯನ್ನು ಎಲ್ಲನಾಗರಿಕತೆಗಳಲ್ಲಿಯೂ ಗಂಭೀರವಾಗಿ ಪರಿಗಣಿಸಿದ್ದುಂಟು.

೨. ಭಾಷೆಯು ಒಂದಲ್ಲ ಒಂದು ರೀತಿಯಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಾ ಬಂದಿದೆ. ಭಾಷೆಯೋ, ಭಾಷೆಯನ್ನು ಬಳಕೆ ಮಾಡುವವರೋ, ಅಥವಾ ಭಾಷೆಯ ಹೆಸರಲ್ಲಿ ಯಾವುದೋ ಶಕ್ತಿಯೋ? ಎನ್ನುವ ಚರ್ಚೆಗಳಿಗೆ ನಮ್ಮ ರಾಷ್ಟçವೂ ಸೇರಿದಂತೆ ಹಲವಾರು ನಾಗರೀಕತೆಗಳು ಒಳಗೊಂಡಿವೆ. ಭಾಷೆಯ ಬಳಕೆ ಹಾಗೂ ಭಾಷೆ ಉಂಟು ಮಾಡಿರುವ ಗೊಂದಲಗಳು ರಾಜಕೀಯವಾಗಿ ಸಾಕಷ್ಟು ಹೆಸರು ಮಾಡಿದೆ ಮತ್ತು ಮಾಡುತ್ತಾ ಬಂದಿದೆ. ಭಾಷೆಗಳು ಇಂದಿನ ಪರಿಸ್ಥಿತಿಯಲ್ಲಿ ಸಾಮಾಜಿಕ ಸ್ಥಾನಮಾನಗಳನ್ನು ನಿರ್ಧರಿಸುವ ಒಂದು ಪರಿಣಾಮಕಾರಿಯಾದ ಅಂಶವಾಗಿ ಮಾರ್ಪಟ್ಟಿರುವುದು ಮಿಶ್ರಪ್ರತಿಕ್ರಿಯೆಗಳನ್ನು ಉಂಟುಮಾಡಿದೆ. ನಮ್ಮ ಭಾಷೆ, ಅವರ ಭಾಷೆ, ಹಳೆ ಭಾಷೆ, ಹೊಸ ಭಾಷೆ ಮತ್ತು ವಿದೇಶೀಯರದ್ದು ಎಂದೆಲ್ಲಾ ಹೇಳಿಕೊಂಡು ಬದಲಾದ ಸಂದರ್ಭಕ್ಕೆ ಒಂದು ವಿಶ್ವಮಾನ್ಯವಾದ ಭಾಷೆಗೆ ದುಂಬಾಲು ಬಿದ್ದಿರುವುದು ವಿಪರ್ಯಾಸವೇ ಸರಿ.

೩. ಭಾಷೆಯ ಬಗ್ಗೆ ಹೀಗೆ ಬರೆಯಲು ಮೂರು ಕಾರಣಗಳು ಎದುರಾದವು.
ಮೊದಲನೆಯದು ಕೊರೊನಾ ವೈರಸ್‌ನ ಅನಿರೀಕ್ಷಿತ ಒತ್ತಡದ ಕಾಲದಲ್ಲಿ ಸಿಲುಕಿಕೊಂಡಿದ್ದಾಗ ದೇಶದ ಮೂಲೆಮೂಲೆಗಳಿಂದ ಕೇಳಿಬಂದ ಮೌಲ್ಯಯುತ ಮಾತು- “ನಾವೆಲ್ಲಾ ಮನುಷ್ಯರಾಗೋಣ, ಮಾನವೀಯ ಗುಣಗಳನ್ನು ಮೆರೆಯೋಣ’ ಎಂದು. ಯಾವುದನ್ನೋ ಕಳೆದುಕೊಂಡಿದ್ದ ನಾವು ಕೋವಿಡ್ 19 ರ ಕಾಲಘಟ್ಟದಲ್ಲಿ ಮರುಸ್ಥಾಪನೆ ಮಾಡುವಲ್ಲಿ ಪ್ರಯತ್ನಿಸಿದ್ದು ಉತ್ತಮ ಬದಲಾವಣೆ. ಪ್ರತಿಯೊಬ್ಬರ ಭಾಷಾ ಶೈಲಿ, ಮಾತಿನ ಶೈಲಿ, ಬದಲಾದದ್ದು ಕೋವಿಡ್ 19ರ ಕಾಲಘಟ್ಟದಲ್ಲಿ ಎನ್ನುವುದಕ್ಕೆ ನನಗೆ ಧೈರ್ಯವಿಲ್ಲದಿದ್ದರೂ ಬೇರೇನೂ ಕಾರಣವಿಲ್ಲ ಎನ್ನುವುದೂ ನನಗೆ ಗೊತ್ತಿದೆ. ಭಾಷೆಯ ಶೈಲಿಯಲ್ಲಿ ನಮ್ಮ ಧ್ವನಿಯಲ್ಲಿ ಏರಿಳಿತವಾದ ಕಾಲವಿದು. “ನಮ್ಮ ಅಸ್ಮಿತೆಯನ್ನು ಪ್ರಶ್ನಿಸಿಕೊಂಡ ಕಾಲವಿದು’.
ಕೋವಿಡ್ 19ರ ಕಾಲದಲ್ಲಿ ನಮ್ಮ ಜನ ಹೆಚ್ಚು ಮೊರೆ ಹೋದದ್ದು ಮಾಧ್ಯಮದ ಮೇಲೆ. ದೃಶ್ಯ ಮಾಧ್ಯಮವಂತೂ ಲಾಕ್ಡೌನ್ ಕಾಲದಲ್ಲಿ ಬಂಧು ಮಿತ್ರರಿಗಿಂತಲೂ ಮಿಗಿಲಾಗಿತ್ತು. ಕೋವಿಡ್ 19ರ ಕಾಲದಲ್ಲಿ ಮಾಧ್ಯಮದವರು ನೀಡಿದ ಕೊಡುಗೆಯಿಂದ ಹಲವಾರು ಜನರನ್ನು ಒಂಟಿತನದಿ0ದ ದೂರ ಮಾಡಿತ್ತು. ನನ್ನ ವಾರ್ಡ್ನಲ್ಲಿರುವ ಸುಮಾರು ೨೦೦ ಮನೆಗಳ ಕತೆಗಳು ಇದರಿಂದ ಹೊರತಾಗಿರಲಿಲ್ಲ. ಯಾರಿಗೆ ಯಾರೂ ಇಲ್ಲ ಎನ್ನುವ ಕಾಲದಲ್ಲಿ ನಮ್ಮನ್ನೆಲ್ಲಾ ಕೈಹಿಡಿದದ್ದು ಮಾಧ್ಯಮ. ಹಾಗಾಗಿ ಒಬ್ಬ ಬಂಧುವಾಗಿ, ಸ್ನೇಹಿತನಾಗಿ (ಸ್ನೇಹಿತೆಯಾಗಿ) ಹಿರಿಯವರಾಗಿ, ಕಿರಿಯವರಾಗಿ ನೆರೆಕರೆಯವರಾಗಿ ಸಂಕಟದ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಮಾಧ್ಯಮದ ಎಲ್ಲ ಮುಖಗಳು ಪ್ರಕಟವಾದವು.
ಮಾಧ್ಯಮದ ಪ್ರಭಾವದಿಂದ ಅದೆಷ್ಟು ಜನರ ಮಾತಿನಶೈಲಿ, ಭಾಷಾಶೈಲಿ ಬದಲಾಯಿತು.. ಮಾಧ್ಯಮವೇ ಸಾವಿರಾರು ಜನರಿಗೆ ಒಳ್ಳೆಯದನ್ನು ಮಾಡಲು ಪ್ರೇರೇಪಣೆಯಾಯಿತು.
ಮಾಧ್ಯಮದಿಂದ ಬದಲಾವಣೆ ಹಾಗೂ ಪರಿವರ್ತನೆ ನಿಜಕ್ಕೂ ಸಾಧ್ಯವೆನ್ನುವುದನ್ನು ಮಾಧ್ಯಮವೇ ಸಾವಿರಾರು ಜನರಿಗೆ ಒಳ್ಳೆಯದನ್ನು ಮಾಡಲು ಪ್ರೇರೇಪಣೆಯಾಯಿತು. ಮಾಧ್ಯಮದಿಂದ ಬದಲಾವಣೆ ಹಾಗೂ ಪರಿವರ್ತನೆ ನಿಜಕ್ಕೂ ಸಾಧ್ಯವೆನ್ನುವುದನ್ನು ಮಾಧ್ಯಮವು ಮಾಧ್ಯಮದ ಮುಖಾಂತರ ತೋರಿಸಿಕೊಟ್ಟ ಕಾಲವಿದು. ಈ ಕಾಲದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಮಾಧ್ಯಮ ಮಿತ್ರರಿಗೆ ಹೃದಯಾಂತರಾಳದ ನಮನಗಳನ್ನು ಇಡೀ ದೇಶವೇ ಸಮರ್ಪಿಸುತ್ತದೆ.
ಸಣ್ಣ ಮಕ್ಕಳಿಂದ ಮನೆಯ ಹಿರಿಯರ ತನಕ ಮಾಧ್ಯಮವು ಉಂಟು ಮಾಡಿರುವ ಪ್ರಭಾವವು ಅತ್ಯಂತ ಪರಿಣಾಮಕಾರಿಯಾದದ್ದು. “ಎರಡು ತಿಂಗಳಲ್ಲಿ “ನಾನು ಹಿಂದಿ ಕಲಿತೆ’ ಎಂದು ನಮ್ಮನೆ ಪಕ್ಕದ ಸಹೋದರಿಯೊಬ್ಬಳು ಹೇಳಿದಾಗ ಹುಬ್ಬೇಸದೇ ಆಶ್ಚರ್ಯವಾಗದೇ ಮತ್ತು ಕುತೂಹಲಕ್ಕೆ ಒಳಗಾಗದೇ ಇರಲಾಗಲಿಲ್ಲ.
೫.
ನಮ್ಮ ಮಾಧ್ಯಮದಲ್ಲಿ ನಮ್ಮತನದ ಎಲ್ಲವೂ ವಿಜೃಂಭಿತವಾಗಬೇಕು. ನಮ್ಮ ಅಸ್ಮಿತೆ (ದೇಶದ, ರಾಜ್ಯದ) ಯನ್ನು ಮಾಧ್ಯಮ ರಕ್ಷಿಸಬೇಕು ಮತ್ತು ಭವಿಷ್ಯಕ್ಕೆ ಕೊಂಡೊಯ್ಯಬೇಕು ಎನ್ನುವುದನ್ನು ಕೇಳಿದಾಗ ತುಂಬಾ ಸಂತೋಷವಾಗತ್ತೆ. ದೃಶ್ಯ ಮಾಧ್ಯಮದಲ್ಲಿ ಬಿತ್ತರವಾಗುವ ಒಂದೊAದು ಘಟನೆಯನ್ನು ಮಕ್ಕಳು ಅನುಕರಣೆ ಮಾಡುತ್ತಿರುವುದನ್ನು ನೋಡಿದಾಗ ತರಗತಿಯಲ್ಲಿ “ಸಾಮಾಜಿಕರಣ’ ಹೇಗೆ ನಡೆಯುತ್ತದೆ ಎಂದು ಪಾಠ ಮಾಡುವ ಮಾಡಿದ ನೆನಪುಗಳನ್ನುಹಲವಾರು ಬಾರಿ ಹೋಲಿಕೆ ಮಾಡಿದ್ದೆ. ಮಾಧ್ಯಮವೂ ಕೂಡಾ ಸಾಮಾಜಿಕರಣದ ಒಂದು ಅಂಗ. ಮತ್ತು ಅದು ಪರಿಣಾಮಕಾರಿಯಾಗಿ ಸಾಮಾಜಿಕರಣ ಮಾಡುತ್ತೆ ಅನ್ನುವುದನ್ನು ಸಂವೇದನಾತ್ಮಕವಾಗಿ ತಿಳಿದುಕೊಂಡಿರುವವನು ನಾನು.
ನಮ್ಮ ದೇಶದ ಮೌಲ್ಯಗಳು ನಮ್ಮ ಕಣ್ಣೆದುರೇ ಅಡ್ಡದಾರಿ ಹಿಡಿಯುತ್ತಿರುವುದನ್ನು ಕಾಣುತ್ತಿದ್ದೇನೆ. ಅಂತಹ ಘಟನೆಗಳಲ್ಲಿ ನಮ್ಮ ದೃಶ್ಯ ಮಾಧ್ಯಮದ ಪದ ಪ್ರಯೋಗ ಮತ್ತು ಭಾಷೆಯ ಬಳಕೆಯು ಪ್ರಮುಖವಾದದ್ದು.
ವಯಸ್ಸು ೨೫ರಿಂದ ಮೂವತ್ತರೊಳಗೆ ಸಂದರ್ಶನ ಸಂದರ್ಭ ಭಾಷಾ ಚತುರ/ರೆ ಮತ್ತು ಉತ್ಸಾಹದ ಚಿಲುಮೆಯಂತಿರುವ ಯುವಕ/ತಿ. ಸಂದರ್ಶನಕ್ಕೆ ಒಳಪಡುತ್ತಿರುವವರು ಹಿರಿಯರು. ವಯಸ್ಸು ಕಡಿಮೆ ಎಂದರೂ ೫೦ ರ ಮೇಲೆ ೮೦ರ ಒಳಗೆ , ವಯಸ್ಸಾದರೂ ಉತ್ಸಾಹಿ. ಈ ಸಂದರ್ಶನದಲ್ಲಿ ಅಥವಾ ಇಂತಹ ಅದೆಷ್ಟೋ ಸಂದರ್ಶನದಲ್ಲಿ ಬಳಕೆಯಾದ ಭಾಷೆ ನಮ್ಮದಲ್ಲ. ಸಾರ್ವಜನಿಕ ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು ಅಧಿಕಾರದಲ್ಲಿದ್ದುಕೊಂಡು ನೂರಾರು ವರ್ಷಗಳ ಕಾಲ ನೆನಪಿಗೆ ಬರುವಂತಹ ಕಾರ್ಯಗಳನ್ನು ಮಾಡಿರುವ, ಮಾಡುತ್ತಿರುವ ಅದೆಷ್ಟೋ ರಾಜಕಾರಣಿಗಳನ್ನು ಸಂಬೋಧಿಸುವಾಗ ಹೆಸರಿಡಿದು ಕರೆಯುವುದು ನಮ್ಮದಲ್ಲದ ಸಂಸ್ಕೃತಿಯಾದರೂ ನಮಗೆ ಹೊಂದಿಕೊಳ್ಳುವ ಭಾಷೆಯಲ್ಲಿ, ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮಿಸ್ಟರ್ ಪ್ರೆಸಿಡೆಂಟ್, ಮಿಸ್ಟರ್ ಪ್ರೆöÊಮ್ ಮಿನಿಸ್ಟರ್ ಎಂದು ಕರೆಯುವ ಆಧುನಿಕತೆಯ ಭರಾಟೆಯಲ್ಲಿ ವೈಯಕ್ತಿಕತೆಯ ಗೌರವಕ್ಕೆ ಧಕ್ಕೆ ಬರದ ಹಾಗೆ ನಡೆದುಕೊಳ್ಳುವ ಭಾಷಾ ಶೈಲಿ ಇದೆ. ಆದರೂ ಯಾವುದೋ ಕಾರಣಕ್ಕೆ ನಾವು ಪಾಶ್ಚಿಮಾತ್ಯತೆಯನ್ನು ದೂಷಿಸುತ್ತೇವೆ. ನಮ್ಮೊಳಗೆ ಇರುವ ಈ ದ್ವಂದ್ವವನ್ನು ಮಕ್ಕಳು-ಹಿರಿಯರು ಎಲ್ಲರೂ ಗಮನಿಸುತ್ತಾರೆ. ಮಾನವೀಯ ಗುಣಗಳು ಮರುಸ್ಥಾಪನೆಯಾಗುತ್ತಿರುವ ಈ ಕಾಲದಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಭಾಷೆಯಲ್ಲಿ ಇದೆ. ಭಾಷಾ ಪ್ರಯೋಗದಲ್ಲಿ ಇದೆ.
೬.
ಹಿರಿಯರ ಹೆಸರನ್ನು ಹಿಡಿದು ಸಂಬೋಧಿಸಿದರೆ ತಪ್ಪೇನು? ಎಂದು ಕೇಳಿದರೆ ಮತ್ತು ಕೇಳಲೇಬೇಕು ಎಂದು ಎನಿಸಿದರೆ ಕೇಳಿ! ಕ್ಯಾಮೆರಾದ ಒಂದು ಕಡೆ ಕುಳಿತಿರುವ ೨೫ರಿಂದ ೩೦ರ ಹರೆಯದ ಯುವಕ/ತಿ ಏರಿ ಕುಳಿತಿದ್ದೇನೆ ಎಂದು ಕೇಳುವ ಅಧಿಕಾರ ಇದೆಯಲ್ಲ ಅದು ಒಂದು ರೀತಿಯ ಸರಿ ತಪ್ಪುಗಳ ನಡುವಿನ ಸಂಬ0ಧವನ್ನು ಸೂಚಿಸುತ್ತದೆ. ಕ್ಯಾಮೆರಾದ ಇನ್ನೊಂದು ಕಡೆ ಇರುವುದು ತಪ್ಪು ಅಥವಾ ಇರುವವರು ತಪ್ಪನ್ನು ಪ್ರತಿನಿಧಿಸುವವರು ಎನ್ನುವ ಕಲ್ಪನೆಯೇ ಸರಿಯಲ್ಲ ಎಂದು ಹೇಳುವವರಿದ್ದಾರೆಯೇ? ಎಂದು ಕೇಳಿದರೆ ಯಾಕಿಲ್ಲ ಎಂದು ನಾನೂ ಹೇಳುತ್ತೇನೆ.
ಈ ದೃಶ್ಯ ಮಾಧ್ಯಮದ ಹಿರಿತನದ, ಅನುಭವದ ವ್ಯಕ್ತಿತ್ವಗಳನ್ನು ಗಣನೆಗೆ ತೆಗೆದುಕೊಳ್ಳದ ಭಾಷಾ ಪ್ರಯೋಗ ನಾಳೆ ಎನ್ನುವ ದಿನಗಳಲ್ಲಿ ಹುಟ್ಟು ಹಾಕುವ ಹೊಸ ಜನಾಂಗದ ಭಾಷಾ ಪ್ರಯೋಗಕ್ಕೆ ಅಡಿಗಲ್ಲು ಆಗಿ ಬಿಡುತ್ತದೆಯೋ ಎನ್ನುವ ಭಯ ಕಾಡದೆ ಇರಬೇಕು ಎನ್ನುವುದಾದರೆ ಭಾಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಭಾಷೆ ಎನ್ನವುದು ತಲೆಯನ್ನು ಮಾತ್ರ ಕೆಡಿಸುವುದಿಲ್ಲ. ಎಲ್ಲವನ್ನು ಕೆಡಿಸುವ ಶಕ್ತಿ ಇರುವ ಭಾಷೆಗೆ ಒಂದು ನಾಗರಿಕತೆಯನ್ನು ನಾಶ ಮಾಡುವ ಶಕ್ತಿ ಇದೆ.
ಭಾಷೆ ಬಳಸುವವರು ಭಾಷೆಯನ್ನು ಬಳಕೆ ಮಾಡಬೇಕು ಎನ್ನುವವರು ಭಾಷೆಗೆ ಜೀವ ಕೊಡಬೇಕು ಎನ್ನುವವರು ಭಾಷೆಗೆ ಲಂಗುಲಗಾಮು ಹಾಕುವವರು ಮಾತನಾಡಬೇಕು, ಮಾತನಾಡಿಸಬೇಕು ಮತ್ತು ಮಾತನಾಡಲೇಬೇಕು ಎನ್ನುವ ಸಂದರ್ಭವನ್ನು ಸೃಷ್ಟಿ ಮಾಡಿಸಲೇಬೇಕು.
ಮೌನಿಗಳಾಗುತ್ತಿರುವ ನಾವುಗಳ ಮಧ್ಯದಲ್ಲಿ ಭಾಷೆ ಬೆಳೆಯುವುದಾದರೂ ಹೇಗೆ? ನಾವೇಕೆ ಮೌನಿಗಳಾಗುತ್ತಿದ್ದೇವೆಯೋ ಯೋಚಿಸಿ!.

.

Related Articles

ಪ್ರತಿಕ್ರಿಯೆ ನೀಡಿ

Latest Articles