ಡಿಸೆಂಬರ್ 12ರಿಂದ ಕುಕ್ಕೆ ಜಾತ್ರೆ ಆರಂಭ, 20ರಂದು ಚಂಪಾಷಷ್ಠಿ ಮಹಾರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ 12ರಿಂದ 26ರವರೆಗೆ ಜಾತ್ರೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯಸರ್ಕಾರದ ಕೊರೊನಾ ನಿಯಂತ್ರಣ ನಿಯಮಗಳಿಗೆ ಅನುಗುಣವಾಗಿ ಜಾತ್ರೆ ನೆರವೇರಲಿದೆ.
ಡಿಸೆಂಬರ್ 20ರಂದು ಬೆಳಗ್ಗೆ ಚಂಪಾಷಷ್ಠಿ ಮಹಾ ರಥೋತ್ಸವ ನಡೆಯಲಿದೆ.
ಡಿ.11ರಂದು ಮೂಲ ಮೃತ್ತಿಕಾ ಪ್ರಸಾದ ತೆಗೆಯಲಾಗುವುದು. ಡಿ.12ರಂದು ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಲಿದೆ. ಆ ದಿನ ರಾತ್ರಿ ಶೇಷ ವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ.
13ರಂದು ಶೇಷವಾಹನಯುಕ್ತ ಬಂಡಿ ಉತ್ಸವ, 14ರಂದು ಲಕ್ಷದೀಪೋತ್ಸವ, ೧೫ರಂದು ಶೇಷವಾಹನೋತ್ಸವ, 16ರಂದು ಅಶ್ವವಾಹನೋತ್ಸವ, 17ರಂದು ಮಯೂರ ವಾಹನೋತ್ಸವ, 18ರಂದು ಚೌತಿ ಹೂವಿನ ತೇರು, 19ರಂದು ಮಾರ್ಗಶಿರ ಶುದ್ಧ ಪಂಚಮಿ ದಿನ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ, 20ರಂದು ಷಷ್ಠಿ ದಿನ ಬೆಳಗ್ಗೆ ಮಹಾರಥೋತ್ಸವ ನಡೆಯಲಿದೆ. 21ರಂದು ಅವಭೃತೋತ್ಸವ ಮತ್ತು ನೌಕಾವಿಹಾರ, ಡಿ.26ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ. ಅಂದು ರಾತ್ರಿ ನೀರಿನಲ್ಲಿ ಬಂಡಿ ಉತ್ಸವ, ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿದೆ.

ಚಿತ್ರ: ಲೋಕೇಶ್ ಬಿ.ಎನ್, ಕುಕ್ಕೆಸುಬ್ರಹ್ಮಣ್ಯ

Related Articles

ಪ್ರತಿಕ್ರಿಯೆ ನೀಡಿ

Latest Articles