ಶ್ರೀ ರಾಯರ ಮಠದಲ್ಲಿ ಲಕ್ಷದೀಪೋತ್ಸವ, ಕಾರ್ತಿಕ ಹುಣ್ಣಿಮೆ ಪೂಜೆ

ಬೆಂಗಳೂರು: ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾಧೀಂದ್ರಆಚಾರ್ಯರ ನೇತೃತ್ವದಲ್ಲಿ ಕಾರ್ತಿಕ ಹುಣ್ಣಿಮೆ ಹಾಗೂ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷವಾಗಿ ಬೆಳಗ್ಗೆ 9-30 ಕ್ಕೆ ಸಾಮೂಹಿಕ “ಸತ್ಯನಾರಾಯಣ ಪೂಜೆ” ಹಾಗೂ ಸಂಜೆ 6-30 ಕ್ಕೆ “ಲಕ್ಷದೀಪೋತ್ಸವದ” ಕಾರ್ಯಕ್ರಮ ಜರುಗಿತು.

ವಿಶೇಷವಾಗಿ ಚೊಕ್ಕ ಸುಡುವುದರ ಮೂಲಕ ದೃಷ್ಟಿ ನಿವಾರಣೆಗಾಗಿ ಹಾಗೂ ಮನುಷ್ಯರ ಅರಿಷಡ್ವರ್ಗಗಳ ನಿರ್ಮೂಲನೆಗಾಗಿ ಶ್ರೀ ಗುರುರಾಯರಲ್ಲಿ ಪ್ರಾರ್ಥಿಸಿ ಲಕ್ಷದೀಪೋತ್ಸವದ ಪೂಜಾ ಕಾರ್ಯಕ್ರಮವು ಜರಗಿತು.

ಈ ಸಂದರ್ಭದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಉತ್ಸವದ ಸೇವೆಯಲ್ಲಿ ಭಾಗವಹಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು ಎಂದು ಆರ್ ಕೆ ವಾಧೀಂದ್ರ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಜಿ ಕೆ ಆಚಾರ್ಯರು, ಕಿಶೋರ್ ಆಚಾರ್ಯರು ಭಾಗವಹಿಸಿದ್ದರು

ವರದಿ: ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles