ತ್ವಚೆ ಸಂರಕ್ಷಣೆಗೆ ಕ್ಯಾರೆಟ್ ಜ್ಯೂಸ್, ಮಾಡುವ ವಿಧಾನ ಇಲ್ಲಿದೆ

ಕ್ಯಾರೆಟ್‌ನಿಂದ ಅನೇಕ ರೀತಿಯ ಖಾದ್ಯಗಳನ್ನು ಮಾಡಿ ಸವಿಯಬಹುದು. ಕ್ಯಾರೆಟ್ ಗೊಜ್ಜು, ಪಲ್ಯ, ಪಾಯಸ, ಕ್ಯಾರೆಟ್ ಹಲ್ವಾ, ಹೀಗೆ ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ಕ್ಯಾರೆಟ್‌ನಿಂದ ಜ್ಯೂಸ್ ಕೂಡಾ ಮಾಡಿ ಕುಡಿಯಬಹುದು. ಇದರಿಂದ ತ್ವಚೆ ಕೂಡಾ ಆರೋಗ್ಯದಿಂದ ಕೂಡಿರುವುದು.

ಕ್ಯಾರೆಟ್‍ನಲ್ಲಿ ಬೀಟಾ ಕ್ಯಾರೊಟಿನ್, ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್‍ ಅಧಿಕವಾಗಿರುತ್ತವೆ. ಕ್ಯಾರೆಟ್‍ ಸೇವಿಸುವುದರಿಂದ ಕಣ್ಣುಗಳಿಗೆ, ಜೀರ್ಣ ಕ್ರಿಯೆಗೆ, ತ್ವಚೆಗೆ ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯದು.

ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಸೇವಿಸಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ. ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನು ತುಪ್ಪದ ಜೊತೆಗೆ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ಜ್ಯೂಸ್ ಕುಡಿಯುವುದರಿಂದ ಮುಖದಲ್ಲಿ ಕಣ್ಣಿನ ಸುತ್ತ ಕಪ್ಪು ಕಲೆಗಳು ಮಾಯವಾಗಿ ತ್ವಚೆಯು ಕಾಂತಿಯುತವಾಗುತ್ತದೆ. ತ್ವಚೆ ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ.

ಕ್ಯಾರೆಟ್ ಜ್ಯೂಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್ 4, ಕಿತ್ತಳೆ ದಾಳಿಂಬೆ 1, ರುಚಿಗೆ ಸ್ವಲ್ಪ ಉಪ್ಪು, ನೀರು, ಪುದೀನ ಸೊಪ್ಪು.

ಮಾಡುವ ವಿಧಾನ: ಕ್ಯಾರೆಟ್ ಚೆನ್ನಾಗಿ ತೊಳೆದು ಅದರ ಚಿಪ್ಪೆಯನ್ನು ತೆಗೆದು ಚಿಕ್ಕ ಗಾತ್ರದಲ್ಲಿ ಕತ್ತರಿಸಿ. ಕಿತ್ತಳೆ ಅಥವಾ ದಾಳಿಂಬೆಯನ್ನು ಅದಕ್ಕೆ ಹಾಕಿ. ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಅದಕ್ಕೆ ಸ್ವಲ್ಪ ಉಪ್ಪು ಹಾಕಿ ತಿರುಗಿಸಿ. ಏಳೆಂಟು ಪುದೀನಾ ಎಲೆಗಳನ್ನು ಇಡಿಯಾಗಿ ಸೇರಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles