ಕುಕ್ಕೆಯಲ್ಲಿವಾರ್ಷಿಕ ಜಾತ್ರೆ ಆರಂಭ, ಚಂದ್ರಮಂಡಲ ತೇರಿನಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು

ಕುಕ್ಕೆಸುಬ್ರಹ್ಮಣ್ಯ: ನಾಗದೇವರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಡಿ.14 ರಂದು ಲಕ್ಷದೀಪೋತ್ಸವ ನೆರವೇರಿತು,

ಲಕ್ಷದೀಪೋತ್ಸವದ ಪ್ರಯುಕ್ತ ರಾತ್ರಿ ದೇಗುಲದಿಂದ ಕಾಶಿಕಟ್ಟೆಯವರೆಗೆ ಚಂದ್ರಮಂಡಲ ತೇರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು.

 15ರಂದು ಶೇಷವಾಹನೋತ್ಸವ, 16ರಂದು ಅಶ್ವವಾಹನೋತ್ಸವ, 17ರಂದು ಮಯೂರ ವಾಹನೋತ್ಸವ, 18ರಂದು ಚೌತಿ ಹೂವಿನ ತೇರು, 19ರಂದು ಮಾರ್ಗಶಿರ ಶುದ್ಧ ಪಂಚಮಿ ದಿನ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ, 20ರಂದು ಷಷ್ಠಿ ದಿನ ಬೆಳಗ್ಗೆ ಮಹಾರಥೋತ್ಸವ ನಡೆಯಲಿದೆ. 21ರಂದು ಅವಭೃತೋತ್ಸವ ಮತ್ತು ನೌಕಾವಿಹಾರ, ಡಿ.26ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ.

ಚಿತ್ರಗಳು: ಸೂರ್ಯ ಕುಕ್ಕೆಸುಬ್ರಹ್ಮಣ್ಯ

Related Articles

ಪ್ರತಿಕ್ರಿಯೆ ನೀಡಿ

Latest Articles