ನಿಸರ್ಗದಲ್ಲಿ ತಾಯಿಯನ್ನು ಕಾಣುವ ಬಗೆಯಿದು

*ಕೃಷ್ಣಪ್ರಕಾಶ್ ಉಳಿತ್ತಾಯ

ಅರುಣಾರುಣಕೌಸುಂಭವಸ್ತ್ರಭಾಸ್ವತ್ಕಟೀತಟೀ|
ರತ್ನಕಿಂಕಿಣಿಕಾರಮ್ಯರಶನಾದಾಮಭೂಷಿತಾ||

ಅರುಣವರ್ಣದಿಂದ ಕೂಡಿರುವ ವಸ್ತ್ರವನ್ನು ನಡುವಿನಲ್ಲಿ ಧರಿಸಿ ಕೇಸರಿಯಂತೆ ಶೋಭಿಸುತ್ತಿರುವ ಕಟಿ ಪ್ರದೇಶವನ್ನು ಹೊಂದಿರುವವಳು ಎಂದು “ಅರುಣಾರುಣಕೌಸುಂಭವಸ್ತ್ರಭಾಸ್ವತ್ಕಟೀತಟೀ” ಈ ನಾಮ ಬಣ್ಣಿಸುತ್ತದೆ. ಅವಳು ಕಟ್ಟಿರುವ ಮೇಲೆ ರತ್ನಮಯವಾದ ಗೆಜ್ಜೆಗಳನ್ನು ಕಟ್ಟಿ ಸಿಂಗರಿಸಲ್ಪಟ್ಟಿದೆ. ಅದು ಕಿಂಕಿಣಿನಾದವನ್ನು ಬೀರುತ್ತಿದೆ. ಹಾಗಾಗಿಯೇ “ರತ್ನಕಿಂಕಿಣಿಕಾರಮ್ಯರಶನಾದಾಮಭೂಷಿತಾ”.

ಲಲಿತೆಯನ್ನು ಕಂಡ ಋಷಿಯ ಸೌಭಾಗ್ಯವದೆಷ್ಟೋ!. ಆಕೆಯ ಕಟಿ ಪ್ರದೇಶವನ್ನು ಸಿಂಗರಿಸಿದ ಬಟ್ಟೆಯ ವರ್ಣಕೇಸರಿ. ಅರುಣವರ್ಣದಿಂದ ಕೂಡಿರುತ್ತಾ ಋಷಿಗೆ ಅರುಣೋದಯದ ನೆನಪನ್ನು ತರುತ್ತದೆ.

ಇಲ್ಲಿ ಸ್ವಾರಸ್ಯವೇನೆಂದರೆ ಋಷಿ ಅಥವಾ ಲಲಿತಾ ಸಹಸ್ರದ ಪಾಠಕ ಅರುಣೋದಯವನ್ನು ಕಂಡಾಗ ತನ್ಮಯನಾಗಿ ಅದನ್ನು ತಾಯಿಯ ಕಟಿ ಪ್ರದೇಶದ ವಸ್ತ್ರವನ್ನು ನೆನೆದುಕೊಳ್ಳುವುದೋ ಅಥವ ತಾಯಿಯ ಪ್ರಭೆಯನ್ನು ನೆನೆದುಕೊಳ್ಳುವುದೋ ಮಾಡಿದಾಗ ಆತನ ಮನದಲ್ಲಿ ಅನವರತ ಆಕೆ ನೆಲೆಯಾಗಿರುವಳು ಎಂಬ ಸಂತೃಪ್ತಿ ಮೂಡುತ್ತದೆ.

ಲಲಿತಾ ಸಹಸ್ರದ ಮೊದಲ ಫಲವೇ ಇದು. ನಾವು ಸಂಸಾರದಲ್ಲಿ ತೊಡಗಿದಾಗ ನಮ್ಮಲಿ ್ಲ ಆಕೆಯ ಅನವರತ ಅನುಸಂಧಾನವಾಗಬೇಕಾದರೆ ನಾವು ನೋಡುವ ಪ್ರತಿ ವಸ್ತುವಿನಲ್ಲೂ ಆಕೆಯ ಅಥವಾ ಆಕೆಯ ಅವಯವಗಳ ಪ್ರತಿಬಿಂಬ ಕಂಡರೆ ಅದೇ ಪ್ರಸಾದವಾಗುತ್ತದೆ.

ನಿಸರ್ಗವನ್ನು ಕಂಡಾಗ ತಾಯಿ ಲಲಿತೆಯನ್ನು ಕಂಡತಾಗುವ ಬಗೆಯೇ ಭಕ್ತನಿಗೆ ಒದಗುವ ನಿಜವಾದ ವರ. ಇದು ಆಕೆಯ ಆಶೀರ್ವಾದವಲ್ಲದೆ ಮತ್ತೇನು. ಪ್ರಕೃತಿ ಬಿಟ್ಟುಕೊಡಬೇಕು. ನಮ್ಮ ಮನದೊಳಗಿನ ಬಗೆಯನ್ನು ಆಕೆಯೇ ತೆರೆದು ತನ್ನನ್ನು ನೋಡೆಂದು ತೋರದಿದ್ದರೆ ಇದು ಸಾಧ್ಯವೇ. ಇದೊಂದು ರೀತಿ ಆಕೆಯೇ ಅಕೆಯನ್ನು ನೋಡುವಂತೆ. ತನ್ನನ್ನೇ ತಾನು ನೋಡಿದಂತೆ.

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles