ನಮೋ ರಾಘವೇಶ್ವರ

*ರೂಪಾಪ್ರಸಾದ ಕೋಡಿಂಬಳ
ಎನಿತು ಚಂದವೊ ಪಾಡಿ ಪೊಗಳಲು
ನಿನ್ನ ಮಹಿಮೆಯ ರಾಘವ
ಇನಿತು ದೂರಕೆ ಸಾಗಿ ಬಂದಿದೆ
ನನ್ನ ಬಾಳಿದು ಸುಂದರ.... ||

ನಿತ್ಯ ಗುರುವಿನ ಚರಣಕೆರಗುವೆ
ಭಕ್ತಿ ಭಾವವೆ ಹಂದರ
ಸತ್ಯದರಿವನು ಎತ್ತಿ ತೋರುವೆ
ಕಪಟವಿಲ್ಲದೆ ಈಶ್ವರ.....||

ಶಕ್ತಿ ಎಮಗೆ ನೀಡು ದಿನವೂ
ಸನ್ಮಾರ್ಗ ಪಥದಲಿ ಸಾಗಲು
ಯುಕ್ತಿ ದೀಪವ ಹಚ್ಚಿ ತೋರು
ಸುಜ್ಞಾನದಿಂದ ಬೀಗಲು...||

ವಿದ್ಯೆಗಳನು ಧಾರೆಯೆರೆಯುವ 
ವಿಷ್ಣುಗುಪ್ತ ವಿದ್ಯಾಲಯ
ಬುದ್ಧಿಗಳನು ಹರಿತಗೊಳಿಸುವ 
ಅರುವತ್ನಾಲ್ಕು ವಿದ್ಯೆಯ ಆಲಯ ||

ಅಶೋಕೆಯಲ್ಲಿ ಎದ್ದು ನಿಂತಿದೆ
ಮಲ್ಲಿಕಾರ್ಜುನ ದೇಗುಲ
ಶೋಕವಿಲ್ಲದ ಲೋಕದಂತಿದೆ
ಭಾನ್ಕುಳಿಯ ಗೋ ಸಾಗರ... ||

ಶಂಕರರನು ನಿತ್ಯ ಸ್ತುತಿಸಲು
ಬಾಳಿಗದುವೇ ಪ್ರೇರಣ
ಗೋವುಗಳನು ಸಾಕಿ ಸಲಹಲು
ಬದುಕಿಗದುವೇ ಹೂರಣ.... ||


Related Articles

ಪ್ರತಿಕ್ರಿಯೆ ನೀಡಿ

Latest Articles