*ಜಿ ಹನುಮೇಶ್ ಮಳಗಿ
ರಾಮನಂತಹ ಅಣ್ಣ ಭರತನಂತಹ ತಮ್ಮ ಹನುಮನಂತಹ ಸೇವಕ ಸುಗ್ರೀವನಂತಹ ನಾಯಕ ಹುಡುಕುತಲಿರುವೆ ಅಂಗಳದಿ ರಂಗೋಲೀ ಮಕ್ಕಳಾಡುವ ಗೋಲೀ ಅಡುಗೆ ಮನೆಯಲಿ ಹೊಗೆ ಹಜಾರದಲಿಯ ಧಗೆ ಹುಡುಕುತಲಿಹೆ ಅಜ್ಜನ ಕಥೆಗಳು ಅಜ್ಜಿಯ ವ್ಯಥೆಗಳು ಅಮ್ಮನ ಬಿಡುವು ಅಪ್ಪನ ದುಡಿವು ಹುಡುಕುತಲಿಹೆ ಹಟಮಾಡುವ ಮಕ್ಕಳು ಯುವಕರಲಿ ಉತ್ಸಾಹ ಸಂತೋಷದ ಕಣ್ಣೀರು ನಳದಲ್ಲಿ ಸಿಹಿನೀರು ಎದೆತುಂಬ ಬಿಸಿ ಭಾವ ಮನದಲ್ಲಿ ಸಿಹಿದಾಹ ಹುಡುಕುತಲಿಹೆ ಪರೋಪಕಾರೀ ಬಂಧೂ ತುಂಬಿ ಹರಿವ ಸಿಂಧೂ ರೋಗಕೆ ಮದ್ದು ರೋಷಕೆ ಗುದ್ದು ಸಾಲಕೆ ಜಾಮೀನು ರೈತನ ಜಮೀನು ಶವಕೆ ಹೆಗಲು ಸ್ವಚ್ಛಂದ ಹಗಲು ಹುಡುಕುತಲಿಹೆ ಗಂಟೆಯಲಿ ಓಂಕಾರ ದೇವರಲಿ ಅಲಂಕಾರ ಮನದಲಿ ಶಾಂತಿ ಹೊಡೆದೋಡಿದ ಭ್ರಾಂತಿ...
























