ಜನವರಿ 7ರಂದು ರಂಭಾಪುರಿ ಶ್ರೀಗಳ 65ನೇ ಜನ್ಮ ದಿನಾಚರಣೆ

ರಂಭಾಪುರಿ ಪೀಠ: ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ತೆಲಂಗಾಣ ರಾಜ್ಯದ ಕೊಲನುಪಾಕ (ಕೊಲ್ಲಿಪಾಕಿ) ಶ್ರೀ ಚಂಡಿಕಾಂಬಾ ಸಮೇತ ಸ್ವಯಂಭು ಶ್ರೀ ಸೋಮೇಶ್ವರ ದೇವಸ್ಥಾನದ ಪರಿಸರದಲ್ಲಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ಶ್ರೀ ಡಾ.ವೀರಸೋಮೇಶ್ವರ ಶ್ರೀಪಾದಂಗಳವರ ೬೫ನೇ ಜನ್ಮದಿನೋತ್ಸವ ಕಾರ್ಯಕ್ರಮ ಜ.7ರಂದು ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಜ.5, 6, 7ರಂದು ಶ್ರೀ ಸ್ವಯಂಭು ಸೋಮೇಶ್ವರ ಲಿಂಗಕ್ಕೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ಪುಷ್ಪಾರ್ಚನೆ, ಹಾಗೂ ಶ್ರೀ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Latest Articles