*ಅನಿತಾ ಲಕ್ಷ್ಮಿ, ಮಂಗಳೂರು. ಹಿಗ್ಗಿ ಹಿಗ್ಗಿ ನಲಿವ ಸುಗ್ಗಿ ಬಂದಿತೀಗ ಭರದಿ ತೆನೆಗಳೀಗ ಭುವಿಗೆ ಬಾಗಿ ರವಿಯ ಭ್ರಮಣೆ ನಭದಿ...||೧|| ದಕ್ಷಿಣದಿಂ ಉತ್ತರಕೆ ವಲಸೆಗೈದ ದಿನಕರ ಹೇಮಂತನ ಮಾಗಿಚಳಿಗೆ ಧನು ಕಳೆದು ಮಕರ...||೨|| ಎಳ್ಳು ಬೆಲ್ಲ ಎಲಚಿಯೆಲ್ಲ ಹಂಚಿ ಸಿಹಿಯ ಸವಿದು ಒಳ್ಳೆ ನುಡಿ ಸಮರಸತೆಯ ಸದ್ಭಾವವು ಮೈತಳೆದು....||೩|| ದವಸಧಾನ್ಯ ರಾಶಿಕಂಡು ರೈತನಮೊಗದಿ ಕಾಂತಿ ಮನೆಮನದಿ ಸಂಪ್ರೀತಿಯ ಸಡಗರವೇ ಸಂಕ್ರಾಂತಿ...||೪|| ಹೊಸಬಟ್ಟೆ ಧರಿಸಿ ಸವಿಯುವ ಹೊಸ ಅಕ್ಕಿಯ ಹುಗ್ಗಿ ಹರೆಯ ವೃದ್ಧ ಭೇದವಿರದೆ ಸಂಕ್ರಾಂತಿಯೆಂದು ಹಿಗ್ಗಿ...||೫||