ಬೆಂಗಳೂರು: ನಿನ್ನೆ (ಜ.೧೨) ವಿಧಿವಶರಾದ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಅವರ ಅಂತಿಮ ದರ್ಶನಕ್ಕೆ ಅವರ ಸಾವಿರಾರು ಭಕ್ತರು, ಅನುಯಾಯಿಗಳು, ಗಣ್ಯರು ನಿನ್ನೆಯಿಂದ ಭಾಗವಹಿಸಿದ್ದರು.
ಇಂದು ಕೂಡಾ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಶ್ರೀಮಠದ ವಿದ್ಯಾರ್ಥಿ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಮಠದಲ್ಲಿ ನಾರಾಯಣ ಉಪಾಸನೆ, ಭಜನೆ, ವೇದಪಠಣ ನಡೆಯಿತು.
ಆಶ್ರಮದ ಆವರಣದಲ್ಲಿ ಸ್ವಾಮಿ ಹರ್ಷಾನಂದ ಮಹಾರಾಜ್ ಅವರ ಪಾರ್ಥೀವ ಶರೀರಕ್ಕೆ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳು ಜರುಗಲಿದೆ. ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.