ಇಂದು ಸಂಜೆ ಶ್ರೀ ಗವಿಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ, ಭಕ್ತರಿಗೆ ವೀಕ್ಷಣೆಗೆ ಬದಲಿ ವ್ಯವಸ್ಥೆ

ಬೆಂಗಳೂರು: ಮಕರ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ದಿನ. ಇಂದು ಬೆಂಗಳೂರಿನ ಶ್ರೀ ಗವಿ ಗಂಗಾಧರೇಶ್ವರ ದೇಗುಲದಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಹಾದು ಹೋಗಲಿವೆ.ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಭಕ್ತರು ಈ ಅಪೂರ್ವ ಘಟನೆಗೆ ನೇರ ಸಾಕ್ಷಿಯಾಗುತ್ತಿದ್ದರು.

ಆದರೆ ಈ ಬಾರಿ ಕೊರೊನಾ ಕಾರಣದಿಂದ ದೇವಾಲಯದ ಒಳಗೆ ದರ್ಶನಕ್ಕೆ ಅವಕಾಶವಿಲ್ಲ. ಆದರೂ ದೇವಸ್ಥಾನದ ಆಡಳಿ ಮಂಡಳಿ ಭಕ್ತರಿಗೆ ನಿರಾಸೆ ಉಂಟು ಮಾಡಿಲ್ಲ. ಇಂದು ಸಂಜೆ 5.16ರಿಂದ 5.20ರ ಸಮಯದಲ್ಲಿ ಶಿವಲಿಂಗಕ್ಕೆ ಸೂರ್ಯಾಭಿಷೇಕವಾಗಲಿದ್ದು, ಅದರ ವೀಕ್ಷಣೆಗೆ ದೇಗುಲದ ಆವರಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಬೃಹತ್ ಪರದೆ ವ್ಯವಸ್ಥೆ ಮಾಡಿದೆ. ಪರದೆ ಮೂಲಕವೇ ಶಿವಲಿಂಗಕ್ಕೆ ಸೂರ್ಯಾಭಿಷೇಕವಾಗುವುದನ್ನು ವೀಕ್ಷಿಸಬೇಕು, 5.40 ರ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಸಂಬ0ಧಪಟ್ಟ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ದೇಗುಲದ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles