ಉಡುಪಿ: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಕಾರ್ಯಕ್ರಮಗಳು ಜ.9ರಿಂದ ಆರಂಭಗೊಂಡಿದ್ದು 15ರವರೆಗೆ ನಡೆಯಲಿದೆ.
ಜ. 15ರಂದು ಹಗಲು ರಥೋತ್ಸವ ನಡೆಯಲಿದ್ದು ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬ್ರಹ್ಮರಥೋತ್ಸವದ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟಮಠದ ಸ್ವಾಮೀಜಿ ಅವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅವಭೃತೋತ್ಸವದೊಂದಿಗೆ ಏಳಾಯನೋತ್ಸವ ಸಂಪನ್ನವಾಗಲಿದೆ.
ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಧನುರ್ಮಾಸ ಪೂಜೆ
ಶ್ರೀಕೃಷ್ಣಮಠದಲ್ಲಿ, ಒಂದು ತಿಂಗಳಿನಿಂದ ಕೃಷ್ಣ ದೇವರಿಗೆ ಪ್ರಾತಃ ಕಾಲದಲ್ಲಿ ನಡೆಯುತಿದ್ದ ಧನುರ್ಮಾಸದ ವಿಶೇಷ ಪೂಜೆಯು ಮಕರ ಸಂಕ್ರಮಣದ0ದು ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶಾರ್ವರಿ ಸಂವತ್ಸರದ ಕೊನೆಯ ಧನುರ್ಮಾಸ ಪೂಜೆ ಮಾಡಿದರು.
ವಿದ್ವಾನ್ ರಾಮನಾಥ ಆಚಾರ್ಯ ಅವರಿಂದ ‘ಕೃಷ್ಣ ಸಮೀಕ್ಷಾ’ ಪ್ರವಚನ
ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಪ್ರಯುಕ್ತ ನಡೆಯುವ ಸಪ್ತೋತ್ಸವದ ಅಂಗವಾಗಿ ನಡೆಯುತ್ತಿರುವ ಭಾಗವತ ಸಪ್ತಾಹದಲ್ಲಿ ‘ಕೃಷ್ಣ ಸಮೀಕ್ಷಾ’ ಪ್ರವಚನವನ್ನು ವಿದ್ವಾನ್ ರಾಮನಾಥ ಆಚಾರ್ಯರು ನಡೆಸಿದರು.
ಪಾರ್ಶ್ವನಾಥ್ ಉಪಾಧ್ಯ,ಶ್ರುತಿ ಗೋಪಾಲ್,ಆದಿತ್ಯ ಪಿ.ವಿ ಅವರಿಂದ ಭರತನಾಟ್ಯ
ಸಪ್ತೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ‘ಪುಣ್ಯ ಡಾನ್ಸ್ ಕಂಪನಿಯ’ ಪಾರ್ಶ್ವನಾಥ್ ಉಪಾಧ್ಯ, ಶ್ರುತಿ ಗೋಪಾಲ್, ಆದಿತ್ಯ ಪಿ.ವಿ ಅವರಿಂದ ಭರತನಾಟ್ಯ ನಡೆಯಿತು.