ಒಂದೇ ವರ್ಷದಲ್ಲಿ 2ನೇ ಮುದ್ರಣ ಕಂಡ ಶೃಂಗೇರಿ ಶಾರದಾಪೀಠ ಗುರುಪರಂಪರೆ ಮತ್ತು ಸ್ಥಳ ಮಹಾತ್ಮೆಯ ಕೃತಿ

ಲೋಕಶಿಕ್ಷಣ ಪ್ರಕಾಶನದಿಂದ ಪ್ರಕಟಿತ ಮಂಡಗದ್ದೆ ಪ್ರಕಾಶ ಬಾಬು ರಚಿಸಿದ “ಶೃಂಗೇರಿ ಶಾರದಾಪೀಠ ಗುರುಪರಂಪರೆ ಮತ್ತು ಸ್ಥಳ ಮಹಾತ್ಮೆ’ ಕೃತಿಯು ಕೇವಲ 8 ತಿಂಗಳಲ್ಲಿ ಮರುಮುದ್ರಣಗೊಂಡಿದೆ. ಮೊದಲ ಕೃತಿಯು ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳವರ ಆಶೀರ್ವಾದೊಂದಿಗೆ, 1-03-2020 ರಲ್ಲಿ ಶೃಂಗೇರಿ ಶಾರದಾ ಗುರುನಿವಾಸದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶೃಂಗೇರಿ ಕಿರಿಯ ಶ್ರೀಗಳು ವಿಧುಶೇಖರ ಭಾರತಿ ಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆಗೊಂಡಿತ್ತು.
ನಂತರ ಈ ಕೃತಿಯು ಮಿಂಚಿನಂತೆ ಭಕ್ತರ ಹಾಗೂ ಓದುಗರ ಕೈಸೇರಿತು. ಈಗ ಈ ಕೃತಿಯು 8ತಿಂಗಳಲ್ಲಿ 2ನೇ ಮುದ್ರಣಗೊಂಡು ಮಾರಾಟ್ಕಕ್ಕೆ ಲಭ್ಯವಿದೆ.
ಮೊದಲ ಆವೃತ್ತಿಯಲ್ಲಿರುವುದಕ್ಕಿಂತಲೂ ಹೆಚ್ಚು ಮಾಹಿತಿ, ಚಿತ್ರಗಳು, 2ನೇ ಆವೃತ್ತಿಯಲ್ಲಿದೆ. ಅದನ್ನು ಭಕ್ತಾದಿಗಳು, ಓದುಗರು, ಹಾಗೂ ಆಸ್ತಿಕ ಮಹಾ ಜನರು ಸ್ವಾಗತಿಸುವರೆಂಬ ವಿಶ್ವಾಸ ಲೋಕ ಶಿಕ್ಷಣ ಟರಸ್ಟ್ನ ನಂಬಿಕೆ, ಹಾಗೂ ಲೇಖಕರ ಅಭಿಲಾಷೆಯಾಗಿದೆ.
2ನೇ ಬಾರಿಗೆ ಮುದ್ರಣಗೊಂಡಿರುವ ಕೃತಿಯಲ್ಲಿ ಶ್ರೀಮಠದ ಚಿತ್ರಗಳು ಹಾಗೂ ಜಗದ್ಗುರುಗಳ ಚಿತ್ರಗಳು ವರ್ಣ ರಂಜಿತವಾಗಿದ್ದು ಇದರ ವಿಶೇಷತೆ. ಕೃತಿಯು 2 ಭಾಗಗಳನ್ನು ಹೊಂದಿದ್ದು, ಪ್ರಥಮ ಭಾಗದಲ್ಲಿ ಶೃಂಗೇರಿಯ ಪ್ರಾಕೃತಿಕ ಹಿನ್ನೆಲೆ, ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆ, ಶ್ರೀ ಶಂಕರರ ನೇರ ನಾಲ್ಕು ಶಿಷ್ಯರ ಪರಿಚಯ, ಶ್ರೀ ಶಾರದಾ ಪೀಠದ ಪ್ರಥಮ ಪೀಠಾಧಿಪತಿಗಳಾದಿಯಾಗಿ 37 ಜಗದ್ಗುರುಗಳ ಜೀವನ ಚರಿತ್ರೆ ಮತ್ತು ಸಾಧನೆಗಳನ್ನುಈ ಕೃತಿ ಹೊಂದಿದೆ.
ಭಾಗ 2ರಲ್ಲಿ ಶೃಂಗೇರಿ ಮಠದ ದೇವಾಲಯಗಳ ಪರಿಚಯ, ಶ್ರೀ ಶಂಕರಾಚಾರ್ಯರ ನೂತನ ದೇಗುಲ, ಕ್ಷೇತ್ರ ರಕ್ಷಣೆಗೆ 4 ದೇವತೆಗಳ ವಿವರ, ಶ್ರೀ ಶಾರದಾ ಪೀಠದ ವೈಶಿಷ್ಟö್ಯ, ಶ್ರೀ ಮಠದ ದೇವರುಗಳಿಗೆ ವಿಧವಿಧವಾದ ನೈವೇದ್ಯ, ಶ್ರೀ ಮಠದಲ್ಲಿರುವ ಅಧಿಷ್ಠಾನಗಳ ಪರಿಚಯ, ಕಾಶ್ಮೀರ ಶಾರದಾಪೀಠ ಹಾಗೂ ಶೃಂಗೇರಿ ಶಾರದಾ ಪೀಠಕ್ಕಿರುವ ಸಂಬಂಧ , ಶಾರದಾ ಗ್ರಾಮ ಪರಿಚಯ, ಸರ್ವಜ್ಞ ಪೀಠದ ವಿಶೇಷ ಮಾಹಿತಿ, ಶಾರದಾ ಸರ್ವಜ್ಞ ಪೀಠದ ಪುನರುತ್ಥಾನಕ್ಕೆ ಪ್ರಯತ್ನ, ಹೀಗೆ 48 ವಿಷಯಗಳು ಈ ಕೃತಿಯಲ್ಲಿದೆ.

ಕೃತಿ ಹೆಸರು: ಶೃಂಗೇರಿ ಶಾರದಾ ಪೀಠದ ಗುರು ಪರಂಪರೆ ಮತ್ತು ಸ್ಥಳ ಮಹತ್ವ
ಲೇಖಕರು: ಮಂಡಗದ್ದೆ ಪ್ರಕಾಶ್ ಬಾಬು
ಪುಟಗಳು: 272, ಬೆಲೆ: ರೂ.300

ಪುಸ್ತಕ ದೊರೆಯುವ ಸ್ಥಳ: ಸಂಯುಕ್ತ ಕರ್ನಾಟಕ, ಮುಖ್ಯ ಕಾರ್ಯಾಲಯ ಬೆಂಗಳೂರು ಮತ್ತು ಹುಬ್ಬಳ್ಳಿ, ರಾಮಕೃಷ್ಣ ಆಶ್ರಮ ಬೆಂಗಳೂರು, ವೇದಾಂತ ಬುಕ್ ಹೌಸ್.

Related Articles

ಪ್ರತಿಕ್ರಿಯೆ ನೀಡಿ

Latest Articles