ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮ

ನಾಳೆ ಶ್ರೀಕೃಷ್ಣ ಮಠಕ್ಕೆ ಮುಖ್ಯಮಂತ್ರಿ ಭೇಟಿ, ‘ವಿಶ್ವಪಥ’ ಮಾರ್ಗ ಉದ್ಘಾಟನೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆ ಆರಂಭವಾಗಿ 500ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅದಮಾರು ಮಠದಿಂದ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮ 16ರಿಂದ ಆರಂಭಗೊ0ಡಿದ್ದು, 23ರವರೆಗೆ ನಡೆಯಲಿದೆ.

ಬಿ.ಎಸ್.ಯಡಿಯೂರಪ್ಪ

ಶ್ರೀಕೃಷ್ಣ ಮಠದಲ್ಲಿ ಕ್ರಿ.ಶ.1522 ರಲ್ಲಿ ವಾದಿರಾಜ ಶ್ರೀಗಳಿಂದ ಆರಂಭವಾದ ದ್ವೈವಾರ್ಷಿಕ ಪರ್ಯಾಯೋತ್ಸವಕ್ಕೆ 2022ರ ಜ.18ರಂದು 500 ವರ್ಷಗಳು ತುಂಬಲಿವೆ. ಅದಮಾರು ಪರ್ಯಾಯ ಅವಧಿಯಲ್ಲಿ ಪರ್ಯಾಯ ಪಂಚಶತಮಾನೋತ್ಸವ ನಡೆಯುತ್ತಿದ್ದು ಈ ಅವಧಿಯಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇಲ್ಲಿನ ಅಷ್ಟಮಠಗಳ ಪರಿಸರವನ್ನು ವೀಕ್ಷಿಸಲು ನಿರ್ಮಿಸಿರುವ ವಿಶ್ವಪಥ ಮಾರ್ಗವನ್ನು ಜ.18ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಉಪನ್ಯಾಸ ಗೋಷ್ಠಿ- ಶ್ರೀಕೃಷ್ಣಾಪುರ ಮಠದ ಕುರಿತು ಹಾಗೂ ಪರ್ಯಾಯ ನೆನಪಿನ ಪುಟ: ಯು.ಕೆ.ರಾಘವೇಂದ್ರ ರಾವ್,ಸಮಾಜಕ್ಕೆ ಅಷ್ಟಮಠಗಳ ವಾಸ್ತುಶಿಲ್ಪ ಮತ್ತು ಕಾಷ್ಠ ಶಿಲ್ಪಗಳ ಕೊಡುಗೆ: ಅಜಿತ್ ಅಂದದಗೆರೆ, ಆರ್ಕಿಟೆಕ್ಟ್ ಮಾಗಡಿ.

ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ
ಶ್ರೀಕೃಷ್ಣಾಪುರ ಮಠ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಸಾನ್ನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡುವರು. ಪರ್ಯಾಯ ಶ್ರೀ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಬಿ.ವೈ ರಾಘವೇಂದ್ರ, ಕೆ.ರಘುಪತಿ ಭಟ್, ಅನಂತ ಪದ್ಮನಾಭ ಅಸ್ರಣ್ಣ, ಮೊದಲಾದವರು ಭಾಘವಹಿಸುವರು.
ಇದೇ ಸಂದರ್ಭ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ 7ಗಂಟೆಯಿ0ದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ರಾಜ್‌ಕಮಲ್ ಮತ್ತು ವೃಂದದವರು ವೇಣು ನಿನಾದ ನಡೆಸಿಕೊಡಲಿದ್ದಾರೆ.

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯ ಪಂಚಶತಮಾನೋತ್ಸವ”ದ ಕಾರ್ಯಕ್ರಮ ಉದ್ಘಾಟನೆ

ಪರ್ಯಾಯ ಪಂಚಶತಮಾನೋತ್ಸವ ಉದ್ಘಾಟನೆ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯ ಪಂಚಶತಮಾನೋತ್ಸವ”ದ ಕಾರ್ಯಕ್ರಮವನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಪಲಿಮಾರು ಕಿರಿಯ ಶ್ರೀಪಾದರುಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಅಧ್ಯಕ್ಷರು, ಆಡಳಿತ ನಿರ್ದೇಶಕರಾದ, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರರು ಮತ್ತು ಅರ್ಚಕರಾದ ವಾಸುದೇವ ಅಸ್ರಣ್ಣ ಉಪಸ್ಥಿತರಿದ್ದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವಿ.ಹರಿನಾರಾಯಣ ಅಸ್ರಣ್ಣರು ಪ್ರಸ್ತಾವನೆಗೈದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಾದ ಉಡುಪಿಯ ಆರ್.ಎಸ್.ಎಸ್ ನ ಜಿಲ್ಲಾ ಸಂಚಾಲಕರಾದ ನಾರಾಯಣ ಶೆಣೈ, ಗಿರಿಬಳಗ ಕುಂಜಾರುಗಿರಿ, ಕುಚ್ಚೂರಿನ ಶಾಂತಿನಿಕೇತನ ಯುವವೃಂದ, ಉಡುಪಿ ಜನರಲ್ ಕ್ರಾಫ್ಟರ್ಸ್ ನ ಗಣೇಶ್ ರಾವ್, ಗುಂಡಿಬೈಲು ಶ್ರೀಪತಿ ಭಟ್, ಹೆಬ್ರಿಯ ವಿವೇಕಾನಂದ ಯುವ ವೇದಿಕೆ, ಚಾರ, ಉಡುಪಿಯ ರಾಜಸ್ಥಾನ ಸಮಾಜ ಬಾಂಧವರ ಸಂಘ, ಬಜ್ಪೆ ರಾಘವೇಂದ್ರ ಆಚಾರ್ಯ, ಕುತ್ಯಾರು ಧೀರಜ್ ಎಸ್.ಶೆಟ್ಟಿ ಇವರುಗಳನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles