ಮುನಿಸಿದ ಕನಸು

* ಹನುಮೇಶ್ ಮಳಗಿ

ಬಿದ್ದ ಕನಸುಗಳನ್ನು ಎಬ್ಬಿಸುತ್ತೇನೆ
ಅವುಗಳೊಂದಿಗೆ ಮೌನ ಮಾತನಾಡುತ್ತದೆ
ಹೊರಳಿ ಹೊರಳಿ ಬೀಳುತ್ತದೆ.

ಕನಸು ಮಾರುವವರ ಬಣ್ಣಕೆ ನಿದ್ದೆ ಹಾರಿತು
ನಿದ್ದೆ ಮಾರುವವರು ಮುಸಿ ನಕ್ಕರು.

ಕಣ್ಣ ಹನಿಗಳಲಿ ಉದುರಿ ಹೋದವು ಕನಸುಗಳು ಮನಸು ವಿಲಿವಿಲಿ ಉಲಿಯಿತು

ನನ್ನ ನೋವ ನಾನಲ್ಲದೇ ಬೇರಾರು ಅರಿತಾರು

ನೋವು ನುಂಗಿದ ನಗು ನಗು ನುಂಗಿದ ನೋವು

ಮನಸು ಮುದುಡಿತು ಮುಸುಕು ಹಾಕಿತು ಉಸಿರು ಗಟ್ಟಿತು ಬಿಸಿಯುಸಿರು ತುಂಬಿತೆಲ್ಲೆಡೆ

ಬೆಳಗಾಯಿತು ತಂದಿತು ಹೊಸಬಣ್ಣ
ತೆರೆಯಿತು ನಿನ್ನೆ ಕಂಡ ಕನಸಿನ ಕಣ್ಣ

Related Articles

ಪ್ರತಿಕ್ರಿಯೆ ನೀಡಿ

Latest Articles