ಅಕ್ಷತೆಯಲ್ಲಿ ನಾಲ್ಕು ವಿಧ ಇದೆ.
1. ಅಕ್ಕಿಯಲ್ಲಿನ ಅಕ್ಷತೆ: ಪ್ರತಿದಿನ ಪೂಜೆಯಲ್ಲಿ, ವ್ರತಗಳಲ್ಲಿ, ಶುಭ ಕಾರ್ಯಗಳಲ್ಲಿ, ಅಕ್ಕಿಯಲ್ಲಿ ಮಾಡಿದ ಅರಶಿನದ ಅಕ್ಷತೆ ಮತ್ತು ಕುಂಕುಮದ ಅಕ್ಷತೆ ಉಪಯೋಗಿಸುತ್ತೇವೆ.
2. ತಿಲಾಕ್ಷತೆ: ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರೀ ಎಳ್ಳು ಮತ್ತು ಯುವ ಅಕ್ಷತೆಗೆ “ತಿಲಾಕ್ಷತೆ” ಎಂದು ಹೆಸರು.
3 ಮಂತ್ರಾಕ್ಷತೆ: ಮಂತ್ರಿಸಿದ ಅಕ್ಷತೆಗೆ ಮಂತ್ರಾಕ್ಷತೆ ಎಂದು ಹೆಸರು. ಉದಾಹರಣೆಗೆ: ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕೊಡುವುದು “ಮಂತ್ರಾಕ್ಷತೆ”. ಇಲ್ಲಿ ಮೂಲರಾಮರಿಗೆ, ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಮಾಡಿ ಪ್ರಸಾದವಾಗಿ ಕೊಡುತ್ತಾರೆ.
4. ಸುವರ್ಣ ಮಂತ್ರಾಕ್ಷತೆ: ಸಾಧು ಸನ್ಯಾಸಿಗಳ ಹಾಗೂ ಮಠಗಳಿಗೆ ಹೋದಾಗ, ಗುರುಗಳು ನಿಮ್ಮನ್ನು ಮಾತನಾಡಿಸಿ, ವಿಚಾರಿಸಿ, ನಿಮಗೆ ಫಲಮಂತ್ರಾಕ್ಷತೆ ಯನ್ನು ಕೊಡುತ್ತಾರೆ. ಹೀಗೆ ಗುರುಗಳು ಕೊಡುವ ಮಂತ್ರಾಕ್ಷತೆಗೆ ಸುವರ್ಣ ಮಂತ್ರಾಕ್ಷತೆ ಎಂದು ಹೆಸರು.
ಸುವರ್ಣ ಮಂತ್ರಾಕ್ಷತೆಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು. ತೆಗೆದುಕೊಳ್ಳುವವರು ಪುರುಷರಾದರೆ ಶಲ್ಯದ ತುದಿಯಿಂದ ತೆಗೆದುಕೊಳ್ಳಬೇಕು. ಹೆಂಗಸರಾದರೆ ಸೀರೆಯ ಸೆರಗಿನ ತುದಿಯಿಂದ ತೆಗೆದುಕೊಳ್ಳಬೇಕು. ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ. ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು.
ಸುವರ್ಣ ಮಂತ್ರಾಕ್ಷತೆಯನ್ನು ನಗದು ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತದೆ. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ ಗುರುಚರಿತ್ರೆ ಪಾರಾಯಣ ಮಾಡಿದರೆ, ಜಾತಕದಲ್ಲಿನ ಗುರು ಗ್ರಹದ ನೀಚತ್ವ ದೋಷ, ಗುರುಶಾಪ, ಗುರುಅಸ್ತದ ದೋಷಗಳು ಪೂರ್ಣ ನಿವಾರಣೆಯಾಗಿ, ಜಾತಕಸ್ಥರು ಜೀವನದಲ್ಲಿ ಇತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ. ಪ್ರತಿದಿನ ಪೂಜೆ ಮಾಡುವಾಗ ಸುವರ್ಣ ಮಂತ್ರಾಕ್ಷತೆಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಪೂರ್ಣ ಅನುಗ್ರಹವಾಗುತ್ತದೆ ಎನ್ನುವ ನಂಬಿಕೆ ಇದೆ.
ಸಂಗ್ರಹ: ಹೆಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಚನ್ನರಾಯ ದೇವಸ್ಥಾನ, ಹುಸ್ಕೂರು
ಧನ್ಯವಾದಗಳು
thank u