ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಳೆದ 55 ವರ್ಷಗಳಿಂದ ರಾಷ್ಟ್ರೀಯ ವಿಚಾರಗಳ ಹಿನ್ನಲೆಯಲ್ಲಿ ದೇಶದಲ್ಲಿ ಕಾರ್ಯವನ್ನು ಮಾಡುತ್ತಾ ಬಂದಿದೆ. ಕರ್ನಾಟಕದಲ್ಲಿ ಕೂಡಾ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯವನ್ನು ನಡೆಸುತ್ತಾ ಇಂದು ಬಲಿಷ್ಠ ಸಾಹಿತ್ಯ ಸಂಘಟನೆಯಾಗಿ ರೂಪುಗೊಂಡಿದೆ. ಐದು ಶತಮಾನಗಳ ಸುದೀರ್ಘ ಹೋರಾಟದ ಫಲವಾಗಿ ಈಗ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಅದು ರಾಷ್ಟ್ರಮಂದಿರವಾಗಲಿದೆ. ಈ ಸಮಯದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ಎಲ್ಲೆಡೆ ಆರಂಭವಾಗಿದೆ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಿಧಿ ಅಭಿಯಾನಕ್ಕೆ ಪೂರಕವಾಗಿ ರಾಜ್ಯದಲ್ಲಿ ಸ್ಪರ್ಧಾತ್ಮಕ ಕವಿಗೋಷ್ಠಿಯನ್ನು ಸಂಘಟಿಸಿದೆ. ಬೆಂಗಳೂರು ಮಹಾನಗರದಲ್ಲಿ ಕವಿಗೋಷ್ಟಿಯ ವಿವರ ಈ ರೀತಿಯಾಗಿದೆ.
ದಿನಾಂಕ: 31 ಜನವರಿ 2021 , ಸಮಯ: ಬೆಳಗ್ಗೆ 10 ಗಂಟೆಗೆ.
ಸ್ಥಳ: ರಾಷ್ಟ್ರೋತ್ಥಾನ ಪರಿಷತ್ ಸಭಾಂಗಣ, ಗವಿಪುರಂ, ಬೆಂಗಳೂರು.
ವಿಷಯ: “ಅಯೋಧ್ಯೆಯಲ್ಲಿ ರಾಮ ಮಂದಿರ ಹೃದಯದಲ್ಲಿ ರಾಮ ಚಂದಿರ”
ವಿಷಯಕ್ಕೆ ಪೂರಕ ಮತ್ತು ಪೋಷಕ ರಚನೆಯಿರಲಿ. ಕವನವು ಸ್ವರಚಿತವಾಗಿದ್ದು ಬೇರೆಲ್ಲೂ ಪ್ರಕಟವಾಗಿರಬಾರದು. ತಮ್ಮ ಹೆಸರು, ವಿಳಾಸ, ವೃತ್ತಿ, ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಅರ್ಥಪೂರ್ಣವಾದ ಕವನಗಳನ್ನು ಆಯ್ಕೆ ಮಾಡಿ ಕವಿಗೋಷ್ಟಿಯ ದಿನ ಕವನ ವಾಚನ ಅಥವಾ ಗಾಯನಕ್ಕೆ ಅವಕಾಶ ನೀಡಲಾಗುವುದು.
ಆಯ್ಕೆಯಾದ ಕವನಗಳಿಗೆ ಬಹುಮಾನವನ್ನು ನೀಡಲಾಗುತ್ತದೆ ಹಾಗೂ ಕವನ ಸಂಕಲನ ಕೂಡಾ ಪ್ರಕಟಗೊಳ್ಳಲಿದೆ.
ಕವನಗಳನ್ನು ದಿನಾಂಕ 26-01-2021 ರ ಒಳಗಾಗಿ ಕಳಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆ [email protected]
ಭ.ರಾ. ವಿಜಯ ಕುಮಾರ್ –9448742877, ರವಿಂಜಯ ಕುಲಕರ್ಣಿ – 9513156050 ಸಂಖ್ಯೆಗೆ ವಾಟ್ಸಪ್ ಮಾಡಬಹುದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಬೆಂಗಳೂರು ಅಧ್ಯಕ್ಷರಾದ ಡಾ.ಕಿಶೋರ್ ಸಿ,ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ