ತ್ರಿವಿಧ ದಾಸೋಹಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ವರ್ಷದ ಪುಣ್ಯಸ್ಮರಣೋತ್ಸವ

ತುಮಕೂರು: ಶ್ರೀ ಸಿದ್ಧಗಂಗಾಮಠದಲ್ಲಿ ಲಿಂಗೈಕ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದೆಲ್ಲೆಡೆಯಿಂದ ಸಾವಿರಾರು ಭಕ್ತರು ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ.

ತುಮಕೂರು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಂಡಿರುವ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ಶ್ರೀಗಳ ಗದ್ದುಗೆ ದರ್ಶನ ಪಡೆದ ಮುಖ್ಯಮಂತ್ರಿ ಬಿ.ಎಸ್‌ವೈ
ರಂಗೋಲಿಯಲ್ಲಿ ಅರಳಿದ ಸ್ವಾಮಿಗಳ ಚಿತ್ರ 

ಬೂಂದಿ, ಮಾಲ್ದಿ, ಚಿತ್ರಾನ್ನ, ಕೀರಿನ ದಾಸೋಹ

     ಸಿದ್ಧಗಂಗೆಯ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆಗೆ ಬರುವ ಭಕ್ತರಿಗಾಗಿ ನಾಲ್ಕು ಕಡೆ ಸಾವಿರಾರು ಮಂದಿ ಕೂರಲು ಅನುಕೂಲ ಕಲ್ಪಿಸಿ, ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಸಿಹಿಬೂಂದಿ, ಕಾರಬೂಂದಿ,ಚಿತ್ರಾನ್ನ, ಪಾಯಸ, ಅನ್ನಸಾಂಬಾರ್, ಮಜ್ಜಿಗೆ, ಹೆಸರುಬೇಳೆ, ಪಲ್ಯ, ಉಪ್ಪಿನಕಾಯಿ ಬಡಿಸುತ್ತಿದ್ದು, ರಾತ್ರಿ ಇದರ ಜೊತೆಗೆ ಮಾಲ್ಡಿ ಪುಡಿಯನ್ನು ವಿಶೇಷವಾಗಿ ಭಕ್ತರಿಗೆ ದಾಸೋಹದಲ್ಲಿ ನೀಡಲಾಗುತ್ತದೆ.

ಪೂಜ್ಯರ ಪುಣ್ಯ ಸ್ಮರಣೆ ಪ್ರಯುಕ್ತ ರಂಗೋಲಿಯಲ್ಲಿ ಸ್ವಾಮಿಗಳ ಚಿತ್ರ ಬಿಡಿಸುತ್ತಿರುವ ಕಲಾವಿದ ಶಿವಾನಂದ ಕೊಕ್ಕರಿ.

Related Articles

ಪ್ರತಿಕ್ರಿಯೆ ನೀಡಿ

Latest Articles