ದೆಹಲಿ ಗಣರಾಜ್ಯೋತ್ಸವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿರೂಪ

ಈ ಬಾರಿ 72ನೇ ಗಣರಾಜ್ಯೋತ್ಸವ. ಈ ದಿನದ ಪೆರೇಡ್ ಭಾಗವಾಗಿ ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರ ಪ್ರತಿಕೃತಿಯನ್ನು ರಚಿಸಿದೆ. ಇದರ ಜತೆಗೆ ಪ್ರಾಚೀನ ಅಯೋಧ್ಯೆ ಹೇಗಿತ್ತು, ಅಲ್ಲಿನ ದೀಪೋತ್ಸವ ಹಾಗೂ ರಾಮಾಯಣದ ವಿವಿಧ ಕಥಾನಕಗಳನ್ನು ಬಿಂಬಿಸುವ ಕಲಾಕೃತಿಗಳು ಟ್ಯಾಬ್ಲೋದಲ್ಲಿ ಇರಲಿವೆ.
ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪತಿಕೃತಿ ಅದರ ನಂತರ ಶ್ರೀರಾಮ ಮಂದಿರದ ಪ್ರತಿಕೃತಿ ಇರಲಿದೆ.
ಹನುಮಂತ ಸಂಜೀವಿನಿಯನ್ನು ತರುವ ಚಿತ್ರಣ, ಶ್ರೀರಾಮ ನಿಷಧರಾಜನನ್ನು ಆಲಂಗಿಸುವ ಚಿತ್ರ, ಜಟಾಯು-ಶ್ರೀರಾಮನ ಸಂವಾದ, ಶಬರಿಯ ಭೇಟಿ ಇವೇ ಮೊದಲಾದ ರಾಮಾಯಣದ ಕಥೆ ಕಲಾಕೃತಿಗಳು ಟ್ಯಾಬ್ಲೋದ ವಿಶೇಷ ಆಕರ್ಷಣೆಯಾಗಿರಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles