ಯಾದವರ ಕಾಲದಲ್ಲಿ ನಿರ್ಮಾಣಗೊಂಡ ತಿಳುವಳ್ಳಿಯ ಶಾಂತೇಶ್ವರ ದೇಗುಲವು ಹಲವು ವಿಶೇಷತೆಗಳನ್ನೊಳಗೊಂಡಿದೆ.
*ಶ್ರೀನಿವಾಸ ಮೂರ್ತಿ ಎನ್. ಎಸ್.
ಶಿಲ್ಪ ಕಲಾ ದೇವಾಲಯಗಳ ಸೊಬಗಿಗೆ ಹೊಸ ರೂಪವನ್ನ ನೀಡಿದವರು ಕಲ್ಯಾಣ ಚಾಲುಕ್ಯರು. ಅವರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಕರ್ನಾಟಕದ ವಾಸ್ತು ಶಿಲ್ಪಕ್ಕೆ ಹೊಸ ಸ್ವರೂಪವನ್ನೇ ನೀಡಿತು. ಹಾವೇರಿ ಜಿಲ್ಲೆಯಲ್ಲಿ ಕಲ್ಯಾಣ ಚಾಲುಕ್ಯರ ಹಲವು ವಾಸ್ತು ವೈಭವದ ದೇವಾಲಯಗಳು ನಿರ್ಮಾಣಗೊಂಡಿವೆ. ಇವರ ಸಮಕಾಲೀನರಾಗಿದ್ದ ಕಲಚೂರಿಗಳು, ಯಾದವರು, ಹೊಸಗುಂದ ಅರಸರು ಮೊದಲಾದ ಅರಸರು ನಿರ್ಮಿಸಿದ ದೇವಾಲಯಗಳು ಕಲ್ಯಾಣ ಚಾಲುಕ್ಯ ನಿರ್ಮಾಣ ಮಾದರಿಯನ್ನ ಅನುಸರಿಸಿದವು. ಅಂತಹ ಸುಂದರ ದೇವಾಲಯಗಳಲ್ಲಿ ಯಾದವರು ನಿರ್ಮಿಸಿದ ಹಾವೇರಿ ಜಿಲ್ಲೆಯ ಹಾನಗಲ್ಲ್ ತಾಲ್ಲೂಕಿನ ತಿಳುವಳ್ಳಿಯ ಶಾಂತೇಶ್ವರ ದೇವಾಲಯವೂ ಒಂದು.
ತಿಳುವಳ್ಳಿ ಇತಿಹಾಸ ಗಮನಿಸಿದಲ್ಲಿ, ತಿಳುವಳ್ಳಿ ಹಾನಗಲ್ಲಿನ ಒಂದು ಗ್ರಾಮವಾಗಿದ್ದು ಕಲ್ಯಾಣ ಚಾಲುಕ್ಯ ದೊರೆ 2 ನೇ ಸೋಮೇಶ್ವರ (ಭುವನಾಯಕ ಮಲ್ಲದೇವ) ತಿಳುವಳ್ಳಿ ಅಗ್ರಹಾರಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ಹಾಗಾಗಿ ಅಂದಿನ ಕಾಲದಲ್ಲಿ ಪ್ರಮುಖ ಅಗ್ರಹಾರವಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ನಂತರ ಕಾಲದಲಿ ಹಲವು ಚಾಲುಕ್ಯ ದೊರೆಗಳು ದತ್ತಿ ನೀಡಿದ ಉಲ್ಲೇಖ ಕಾಣ ಸಿಗುತ್ತದೆ. ಇಲ್ಲಿನ ದೇವಾಲಯದ ಆವರಣದಲ್ಲಿನ ವೀರಗಲ್ಲಿನಲ್ಲಿ ಸಿಂಘಣ ದೊರೆಯ ಉಲ್ಲೇಖವಿದ್ದು ದೇವಾಯದ ಕಂಭದ ಮೇಲೆ ಸುಲಿಪಲ್ಲದೇವ ಬಸವೇಶ್ವರ ದೇವಾಲಯದ ಉಲ್ಲೇಖವಿದೆ.
ಶಾಂತೇಶ್ವರ ದೇವಾಲಯವನ್ನು 1237ರಲ್ಲಿ ಯಾದವ ದೊರೆ ಸಿಂಘಣ 2ಸಾಮಂತ ಕಾಲಿದೇವ ತನ್ನ ತಂದೆಯ ನೆನಪಿನಲ್ಲಿ ಕಟ್ಟಿಸಿದ್ದ ಕಾಳಮುಖರ ಪ್ರಮುಖ ದೇವಾಲಯಗಳಲ್ಲಿ ಒಂದು. ಶಾಸನಗಳಲ್ಲಿ ಸಾವಂತೇಶ್ವರ ದೇವಾಲಯ ಎಂಬ ಉಲ್ಲೇಕವಿದ್ದು ಕ್ರಮೇಣ ಶಾಂತೇಶ್ವರವಾಗಿದೆ.
ಮೂಲತಹ ಈ ದೇವಾಲಯ ಏಕಕೂಟವಾಗಿದ್ದು ಗರ್ಭಗುಡಿ, ಅಂತರಾಳ, ನವರಂಗ ಹಾಗು ಸಭಾಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಶಾಂತೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಗರ್ಭಗುಡಿ ಬಾಗಲುವಾಡಗಲು ಸುಂದರವಾಗಿ ಅಲಂಕೃತವಾಗಿದ್ದು ಶೈವ ದ್ವಾರಪಾಲಕರಿದ್ದು ವಿತಾನದಲ್ಲಿನ ಕಲಾತ್ಮಕವಾದ ಕೆತ್ತನೆ ಇದೆ.
ಅಂತರಾಳದಲ್ಲಿ ನಂದಿ ಇದ್ದು ದೇವಾಲಯದ ಸಭಾ ಮಂಟಪ ವಿಸ್ತಾರವಾಗಿದ್ದು 44 ಸುಂದರ ಕಂಭಗಳನ್ನು ಹೊಂದಿದೆ. ಮಂಟಪದ ಸುತ್ತಲೂ ಕಕ್ಷಾಸನ ಇದ್ದು ಮೂರು ಕಡೆ ಪ್ರವೇಶವಿದೆ. ಕಕ್ಷಾಸನದ ಹೊರ ಭಾಗದಲ್ಲಿ ನೄತ್ಯ ಹಾಗು ವಾದ್ಯಗಾರರ ಕೆತ್ತನೆ ನೋಡಬಹುದು. ದೇವಾಲಯದ ವಿತಾನದಲ್ಲಿ ಸುಂದರ ಅಷ್ಟ ದಿಕ್ಪಾಲಕರ ಕೆತ್ತನೆ ಇದೆ. ಅಂತರಾಳದ ಬಾಗಿಲುವಾಡದ ಕೆತ್ತನೆ ಗಮನ ಸೆಳೆಯುತ್ತದೆ. ಇಲ್ಲಿನ ಮಹಿಷಾಸುರ ಮರ್ಧಿನೆ ಕೆತ್ತನೆ ನೋಡಬಹುದು.
ಇಲ್ಲಿನ ಔತ್ತರೇಯ ದ್ರಾವಿಡ ಶೈಲಿಯಲ್ಲಿನ ಶಿಖರ ದೇವಾಲಯಕ್ಕೆ ಮೆರುಗು ನೀಡವಂತಿದೆ. ಜಂಘಾ ಭಾಗ ನಿರಾಂಡಬರವಾಗಿದ್ದುರು ಇಲ್ಲಿ ಆವರಿಸಿಕೊಂಡಿರುವ ಶಿಖರ ಮಾದರಿಗಳು, ಕರ್ಣಕೂಟದಲ್ಲಿನ ಸೂಕ್ಷ್ಮ ಕೆತ್ತೆನೆಗಳು ಗೋಪುರವನ್ನು ಸುಂದರವಾಗಿ ಕಾಣುವಂತೆ ಮಾಡಿದೆ. ಯಾದವರ ಕಾಲದ ಈ ದೇವಾಲಯ ಕಲ್ಯಾಣ ಚಾಲುಕ್ಯ ಶೈಲಿಗೆ ಉತ್ತಮ ಉದಾಹರಣೆ. ಹೊರ ಭಿತ್ತಿಯಲ್ಲಿ ಕಲ್ಯಾಣ ಚಾಲುಕ್ಯರ ದೇವಾಲಯಗಳಂತೆ ಚಿಕ್ಕ ಚಿಕ್ಕ ಶಿಖರ ಮಾದರಿಗಳು ಗಮನಿಸ ಬೇಕಾದ ಸಂಗತಿಗಳಲ್ಲಿ ಮುಖ್ಯವಾದದ್ದು.
ತಲುಪುವ ಬಗೆ: ಈ ದೇವಾಲಯ ಹಾವೇರಿ ಹಿರೆಕೆರೂರು ರಸ್ತೆಯಲ್ಲಿ ಹಾವೇರಿಯಿಂದ ಸುಮಾರು 30 ಕಿ ಮೀ ದೂರದಲ್ಲಿದೆ. ಶಿರಸಿ – ರಾಣಿಬೆನ್ನೂರು ಮಾರ್ಗದ ಮಧ್ಯದಲ್ಲಿ ಇದ್ದು ಈ ಮೂಲಕವು ತಲುಪಬಹುದು.
ತಿಳುವಳ್ಲಿ ಇತಿಹಾಸ ಗಮನಸಿದಲ್ಲಿ, ತಿಳುವಳ್ಳಿ ಹಾನಗಲ್ಲಿನ ಒಂದು ಗ್ರಾಮವಾಗಿದ್ದು ಕಲ್ಯಾಣ ಚಾಲುಕ್ಯ ದೊರೆ 2 ನೇ ಸೋಮೇಶ್ವರ (ಭುವನಾಯಕ ಮಲ್ಲದೇವ) ತಿಳುವಳ್ಳಿ ಅಗ್ರಹಾರಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ಹಾಗಾಗಿ ಅಂದಿನ ಕಾಲದಲ್ಲಿ ಪ್ರಮುಖ ಅಗ್ರಹಾರವಗಿತ್ತು ಎನ್ನುವದರಲ್ಲಿ ಅನುಮಾನವಿಲ್ಲ. ನಂತರ ಕಾಲದಲಿ ಹಲವು ಚಾಲುಕ್ಯ ದೊರೆಗಳು ದತ್ತಿ ನೀಡಿದ ಉಲ್ಲೇಖ ಕಾಣ ಸಿಗುತ್ತದೆ. ಇಲ್ಲಿನ ದೇವಾಲಯದ ಆವರಣದಲ್ಲಿನ ವೀರಗಲ್ಲಿನಲ್ಲಿ ಸಿಂಘಣ ದೊರೆಯ ಉಲ್ಲೇಖವಿದ್ದು ದೇವಾಯದ ಕಂಭದ ಮೇಲೆ ಸುಲಿಪಲ್ಲದೇವ ಬಸವೇಶ್ವರ ದೇವಾಲಯದ ಉಲ್ಲೇಖವಿದೆ.
ಶಾಂತೇಶ್ವರ ದೇವಾಲಯವನ್ನು 1237 ರಲ್ಲಿ ಯಾದವ ದೊರೆ ಸಿಂಘಣ 2ಸಾಮಂತ ಕಾಲಿದೇವ ತನ್ನ ತಂದೆಯ ನೆನಪಿನಲ್ಲಿ ಕಟ್ಟಿಸಿದ್ದ ಕಾಳಮುಖರ ಪ್ರಮುಖ ದೇವಾಲಯಗಳಲ್ಲಿ ಒಂದು. ಶಾಸನಗಳಲ್ಲಿ ಸಾವಂತೇಶ್ವರ ದೇವಾಲಯ ಎಂಬ ಉಲ್ಲೇಕವಿದ್ದು ಕ್ರಮೇಣ ಶಾಂತೇಶ್ವರವಾಗಿದೆ.
ದೇಗುಲ ವೈಶಿಷ್ಟ್ಯ
ಮೂಲತಹ ಈ ದೇವಾಲಯ ಏಕಕೂಟವಾಗಿದ್ದು ಗರ್ಭಗುಡಿ, ಅಂತರಾಳ, ನವರಂಗ ಹಾಗು ಸಭಾಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಶಾಂತೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಗರ್ಭಗುಡಿ ಬಾಗಲುವಾಡಗಲು ಸುಂದರವಾಗಿ ಅಲಂಕೃತವಾಗಿದ್ದು ಶೈವ ದ್ವಾರಪಾಲಕರಿದ್ದು ವಿತಾನದಲ್ಲಿನ ಕಲಾತ್ಮಕವಾದ ಕೆತ್ತನೆ ಇದೆ. ಅಂತರಾಳದಲ್ಲಿ ನಂದಿ ಇದ್ದು ದೇವಾಲಯದ ಸಭಾ ಮಂಟಪ ವಿಸ್ತಾರವಾಗಿದ್ದು 44 ಸುಂದರ ಕಂಭಗಳನ್ನು ಹೊಂದಿದೆ. ಮಂಟಪದ ಸುತ್ತಲೂ ಕಕ್ಷಾಸನ ಇದ್ದು ಮೂರು ಕಡೆ ಪ್ರವೇಶವಿದೆ. ಕಕ್ಷಾಸನದ ಹೊರ ಭಾಗದಲ್ಲಿ ನೄತ್ಯ ಹಾಗು ವಾದ್ಯಗಾರರ ಕೆತ್ತನೆ ನೋಡಬಹುದು. ದೇವಾಲಯದ ವಿತಾನದಲ್ಲಿ ಸುಂದರ ಅಷ್ಟ ದಿಕ್ಪಾಲಕರ ಕೆತ್ತನೆ ಇದೆ. ಅಂತರಾಳದ ಬಾಗಿಲುವಾಡದ ಕೆತ್ತನೆ ಗಮನ ಸೆಳೆಯುತ್ತದೆ. ಇಲ್ಲಿನ ಮಹಿಶಾಸುರ ಮರ್ಧಿನೆ ಕೆತ್ತನೆ ನೋಡಬಹುದು.
ಇಲ್ಲಿನ ಔತ್ತರೇಯ ದ್ರಾವಿಡ ಶೈಲಿಯಲ್ಲಿನ ಶಿಖರ ದೇವಾಲಯಕ್ಕೆ ಮೆರುಗು ನೀಡವಂತಿದೆ. ಜಂಘಾ ಭಾಗ ನಿರಾಂಡಬರವಾಗಿದ್ದುರು ಇಲ್ಲಿ ಆವರಿಸಿಕೊಂಡಿರುವ ಶಿಖರ ಮಾದರಿಗಳು, ಕರ್ಣಕೂಟದಲ್ಲಿನ ಸೂಕ್ಷ್ಮ ಕೆತ್ತನೆಗಳು ಗೋಪುರವನ್ನು ಸುಂದರವಾಗಿ ಕಾಣುವಂತೆ ಮಾಡಿದೆ. ಯಾದವರ ಕಾಲದ ಈ ದೇವಾಲಯ ಕಲ್ಯಾಣ ಚಾಲುಕ್ಯ ಶೈಲಿಗೆ ಉತ್ತಮ ಉದಾಹರಣೆ. ಹೊರ ಭಿತ್ತಿಯಲ್ಲಿ ಕಲ್ಯಾಣ ಚಾಲುಕ್ಯರ ದೇವಾಲಯಗಳಂತೆ ಚಿಕ್ಕ ಚಿಕ್ಕ ಶಿಖರ ಮಾದರಿಗಳು ಗಮನಿಸ ಬೇಕಾದ ಸಂಗತಿಗಳಲ್ಲಿ ಮುಖ್ಯವಾದದ್ದು.
ತಲುಪುವ ಬಗೆ: ಈ ದೇವಾಲಯ ಹಾವೇರಿ ಹಿರೆಕೆರೂರು ರಸ್ತೆಯಲ್ಲಿ ಹಾವೇರಿಯಿಂದ ಸುಮಾರು 30 ಕಿ ಮೀ ದೂರದಲ್ಲಿದೆ. ಶಿರಸಿ – ರಾಣಿಬೆನ್ನೂರು ಮಾರ್ಗದ ಮಧ್ಯದಲ್ಲಿ ಇದ್ದು ಈ ಮೂಲಕವು ತಲುಪಬಹುದು.