ಮಾಘಮಾಸಕ್ಕಿದೆ ಎಷ್ಟೊಂದು ಮಹತ್ವ

ನಮ್ಮ ಸಂಸ್ಕೃತಿಯಲ್ಲಿ ಕೆಲವು ಮಾಸಗಳಿಗೆ ತುಂಬಾ ವಿಶೇಷ ಮಹತ್ವವಿದೆ, ಅದರಲ್ಲಿ ಮಾಘ ಮಾಸದ ಮಹಿಮೆಯೂ ಅಪಾರವಾದದ್ದು.

*ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಪುಷ್ಯ ಮಾಸದ ಪೂರ್ಣಿಮಾದoದು ಮಾಘಸ್ನಾನವು ಪ್ರಾರಂಭವಾಗುತ್ತದೆ ಮಾಘಶುದ್ಧ ಹುಣ್ಣಿಮೆಯವರೆಗೂ ಒಂದು ತಿoಗಳು ಪೂರ್ಣವಾಗಿ ಅರುಣೋದಯ ಕಾಲ ಅಥವಾ ಪ್ರಾತಃ ಕಾಲದಲ್ಲಿ ನದ್ಯಾದಿಗಳಲ್ಲಿ ಸ್ನಾನವನ್ನು ಮಾಡಬೇಕು ಸೂರ್ಯನು ಸ್ವಲ್ಪ ಉದಿತನಾದಾಗ ಸ್ನಾನ ಮಾಡುವ ಯಾವ ಬ್ರಹ್ಮಜ್ಞನನ್ನು ಸುರಾಪಾನಿಯನ್ನು ಪವಿತ್ರ ಮಾಡೋಣವೇoದು ನೀರಿನ ಅಭಿಮಾನಿ ದೇವತೆಗಳು ಕೂಗುತ್ತಿರುತ್ತಾರೆ.

ಸ್ನಾನ ಕಾಲ ನಕ್ಷತ್ರವಿರುವಾಗಲೇ ಮಾಡುವ ಮಾಘಸ್ನಾನವು ಉತ್ತಮವಾದದ್ದು ನಕ್ಷೆಗಳು ಕಾಣಿಸದಿರುವಾಗ ಮಾಡುವ ಸ್ನಾನವು ಮಧ್ಯಮ ಸೂರ್ಯನುದಿಸುತ್ತಿರುವಾಗ ಮಾಡುವ ಸ್ನಾನ ಅಧಮ ಸೂರ್ಯೋದಯ ನಂತರದಲ್ಲಿ ಮಾಡುವ ಸ್ನಾನ ಕನಿಷ್ಠವೆನಿಸಿದೆ.ಕಾರ್ತಿಕ ಮಾಸವು ಸರ್ವಮಾಸಗಳಲ್ಲಿ ಶ್ರೇಷ್ಠವೆನಿಸಿದ್ದು ಕಾರ್ತೀಕಮಾಸಕ್ಕಿಂತಲೂ ಮಾಘಮಾಸವು ಲಕ್ಷಪಟ್ಟು ಶ್ರೇಷ್ಠವೆನಿಸಿದೆ ಬ್ರಹ್ಮಹತ್ಯಾದಿ ಸಮಸ್ತಪಾಪಗಳನ್ನು ಮಾಘ ಸ್ನಾನವು ಪರಿಹರಿಸುತ್ತದೆ.
ಮಾಘ ಸ್ನಾನವನ್ನು ಮಾಡಿದವನ ಪಾಪಗಳನ್ನು ಚಿತ್ರಗುಪ್ತನು,ತನ್ನ ಪುಸ್ತಕದಲ್ಲಿ ದಾಖಲಾಗಿರುವ ಪಾಪಗಳನ್ನು ಅಳಿಸಿಹಾಕುವನು. ಇದು ಯಮನ ಆಜ್ಞೆಯಾಗಿದೆ. ಸಂಕಲ್ಪವಿಲ್ಲದೆ ಮಾಡಿದ ಸ್ನಾನದಾನದಿಗಳಿಗೆ ಅಲ್ಪ ಫಲವು ಹಾಗೆಯೇ ಬಂದ ಪುಣ್ಯದಲ್ಲಿ ಅರ್ಧವು ನಶಿಸುತ್ತದೆ.


ಮಾಘಸ್ನಾನದ ಫಲ
ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನ ಮಾಡಿದರೆ 6 ವರ್ಷಸ್ನಾನ ಮಾಡಿದ ಫಲ ಮನೆಯಿಂದ ಹೊರಗೆಹೋಗಿ ಬಾವಿಯಲ್ಲಿ ಸ್ನಾನಮಾಡಿದರೆ 12 ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ. ಕೆರೆ ಮೊದಲಾದ ಮಾನವ ನಿರ್ಮಿತ ತಟಾಕಗಳಲ್ಲಿ ಸ್ನಾನ ಮಾಡಿದರೆ ಬಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ. ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು (48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು ದೇವ ದೇವತೆಗಳು ಸನ್ನಿಹಿತರಾಗಿರುವ
ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ ಉದಾಹರಣೆ: ಸ್ವಾಮಿ ಪುಷ್ಕರಣಿ (ಚಂದ್ರಪುಷ್ಕರಣಿ) ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120 ವರ್ಷ ಸ್ನಾನಫಲ)ವು , ಗಂಗಾ ,ಯಮುನ ,ಸರಸ್ವತೀ ಮುಂತಾದ ಸಮುದ್ರವನ್ನು ನೇರವಾಗಿ ಸೇರುವ ಮಹಾನದಿಗಳಲ್ಲಿ ಸ್ನಾನ ಮಾಡಿದರೆ 100ಪಟ್ಟು ಪುಣ್ಯಫಲ (1200 ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ (ಪ್ರಯಾಗಾದಿಗಳಲ್ಲಿ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರಪಟ್ಟು ಪುಣ್ಯಫಲವು ಲಭಿಸುತ್ತದೆ.


ಮಾಘಸ್ನಾನ ವಿಧಿ
ಮಾಘಮಾಸದಲ್ಲಿ ಮಾಧವರೂಪಿ ಪರಮಾತ್ಮನ ಪ್ರೀತ್ಯರ್ಥವಾಗಿ ಪ್ರತಿನಿತ್ಯ ನದಿಸ್ನಾನವನ್ನು ಅರುಣೋದಯ ಕಾಲದಲ್ಲಿ ಮಾಡಬೇಕು. ಪುಷ್ಯಶುದ್ಧ ಹುಣ್ಣಿಮೆಯಿಂದ ಆರಂಭಿಸಿ ಮಾಘಶುದ್ಧಹುಣ್ಣಿಮೆಯವರೆಗೆ ಒಂದು ತಿಂಗಳು ಪೂರ್ಣವಾಗಿ ಅರುಣೋದಯಕಾಲ ಅಥವಾ ಪ್ರಾತಃಕಾಲದಲ್ಲಿ ಮಾಘಸ್ನಾನವನ್ನು ಮಾಡಬೇಕು. ಆಚಮನ ಪ್ರಾಣಾಯಾಮಗಳನ್ನು ಮಾಡಿ ಸ್ನಾನ
ಸಂಕಲ್ಪವನ್ನು ಮಾಡುವುದು.

ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ, ಬೌದ್ಧಾವತಾರೆ -ಶ್ರೀರಾಮಕ್ಷೆತ್ರೇ-ಅಸ್ಮಿನ್ ವರ್ತಮಾನೆ – ಸಂವತ್ಸರೇ -ಆಯಣೇ -ಋತೌ-ಮಾಸೇ-ಪಕ್ಷೇ -ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-ಏವಂ ಗುಣವಿಶಿಷ್ಟಾಯಾಂ-ಶುಭ ತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ, ಸಾಲಿಗ್ರಾಮ ,ಚಕ್ರಾಂಕಿತ -ಶ್ರೀವಿಷ್ಣು- ವೈಷ್ಣವ-ಗೊ-ತುಳಸಿ – ವೃಂದಾವನ ಸನ್ನಿಧೌ ಶ್ರೀಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಮಾಧವ ಪ್ರೀತ್ಯರ್ಥಂ ಮಾಘಸ್ನಾನಮಹo ಕರಿಷ್ಯೇ” ಎಂದು ಸಂಕಲ್ಪಿಸಿ ನಂತರ ಮಾಧವನನ್ನು ಪ್ರಾರ್ಥಿಸಬೇಕು. ಹೀಗೆ ಸಂಕಲ್ಪಿಸಿ ನಂತರ ಮಾಧವನನ್ನು ಪ್ರಾರ್ಥಿಸಿ ಮೌನಿಯಾಗಿ ಸ್ನಾನವನ್ನು ಮಾಡಬೇಕು ಯಾವುದಾದರೂ ತೀರ್ಥದಲ್ಲಿ ಒಂದು ತಿಂಗಳವರೆಗೂ ಸ್ನಾನಮಾಡುವುದಾಗಿ ಸಂಕಲ್ಪಮಾಡಬೇಕು.


ಸ್ನಾನಮಂತ್ರ
ಮಾಘಮಾಸೇ ರಟಂತ್ಯಾಪಃ ಕಿಂಚಿಬ್ಯುದಿತೇ ರವೌ | ಬ್ರಹಘ್ನಂ ವಾ ಸುರಾಪಾಂ ವಾ ಕಂ ಪತಂತಂ ಪುನೀಮಹೇ || ದುಃಖದಾರಿದ್ರ್ಯನಾಶಾಯ ಶ್ರೀವಿಷ್ಣೋಸ್ತೋಷಣಾಯ ಚ | ಪ್ರಾತಃಸ್ನಾನಂ ಕರೋಮ್ಯದ್ಯ ಮಾಘೇಪಾಪವಿನಾಶನಮ್ || ಮಕರಸ್ಥೆರವೌ ಮಾಘೇ ಗೋವಿಂದಾಚ್ಯುತ ಮಾಧವ | ಸ್ನಾನೇನಾನೇನ ಮೇ ದೇವ ಯಥೋಕ್ತ ಫಲದೋ ಭವ | ಕೃಷ್ಣಾಚ್ಯುತ ನಿಮಜ್ಜಾಮಿ ಪ್ರಭಾತೇಸ್ಮಿನ್ ಶುಭೋದಕೇ | ಅನೇನ ಮಾಘಸ್ನಾನೇನ ಸುಪ್ರಿತೋ ಮಾಂ ಸಮುದ್ಧರ || ಮಾಘಸ್ನಾನಂ ಕರಿಷ್ಯಾಮಿ ಮಕರಸ್ಥೇ ದಿವಾಕರೇ |ಅಸಮಾಪ್ತಿ ಮಹಾದೇವ ನಿರ್ವಿಘ್ನಂ ಕುರು ಮಾಧವ ||
ಈ ಮಂತ್ರಗಳನ್ನು ಹೇಳಿ ಸ್ನಾನಮಾಡಬೇಕು .


ಸ್ನಾನಾ ನಂತರ ಮಾಧವರೂಪಿ ಪರಮಾತ್ಮನಿಗೆ ಮತ್ತು ಸೂರ್ಯನಿಗೆ ವಿಶೇಷವಾಗಿ ಅರ್ಘ್ಯವನ್ನು ಕೊಡಬೇಕು .
ಶ್ರೀಮಾಧವಾರ್ಘ್ಯ ಮಂತ್ರ
ತಪಸ್ಯರ್ಕೋದಯೇ ನದ್ಯಾಂ ಸ್ನಾತೋಹಂ ವಿಧಿಪೂರ್ವಕಮ್ |ಮಾಧವಾಯ ದದಾಮಿದಂ ಅರ್ಘ್ಯಂ ಸಮ್ಯಕ್ ಪ್ರಸಿದತು || ಮಾಧವಾಯನಮಃ ಇದಂ ಅರ್ಘ್ಯಂ ಸಮರ್ಪಯಾಮಿ’


ಸೂರ್ಯಾರ್ಘ್ಯ ಮಂತ್ರ
ಸವಿತ್ರೆ ಪ್ರಸವಿತ್ರೇ ಚ ಪರಂ ಧಾಮ್ನೇ ನಮೋಸ್ತುತೆ |ತ್ವತ್ತೇಜಸಾ ಪರಿಭೃಷ್ಟಂ ಪಾಪಂ ಯಾತು ಸಹಸ್ರಧಾ || ಸವಿತ್ರೇನಮಃ ಇದಮರ್ಘ್ಯಂ ಸಮರ್ಪಯಾಮಿ ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ |ಪರಿಪೂರ್ಣಂ ಕುರುಷ್ವೇದಂ ಮಾಘಸ್ನಾನಂ ಮಯಾಕೃತಮ್
ಎಂದು ಅರ್ಘ್ಯವನ್ನು ಕೊಟ್ಟು ಸೂರ್ಯನನ್ನು ಪ್ರಾರ್ಥಿಸಬೇಕು.\

ನಿಯಮಗಳು
1. ಮಾಘಸ್ನಾನವನ್ನು ಬೆಳಗಿನ ಜಾಗವೇ ಮಾಡಬೇಕು.
2. ಸ್ನಾನ ಮಾಡುವವರು ಸ್ನಾನದ ನೀರಿಗೆ ಚಿಟಿಕೆ ಅರಿಸಿನ, ಹಸುವಿನ ಗಂಜು, ಒಂದು ದರ್ಭೆ ಹಾಕಿ ಪ್ರತಿದಿನ ಸ್ನಾನ ಮಾಡಬೇಕು.
3. ಮಾಘಸ್ನಾನ ಮಾಡುವವರು ಮೊದಲ ದಿನ “ಪ್ರಾಯಶ್ಚಿತ್ತ ಸಂಕಲ್ಪ ” ಮಾಡಿಕೊಂಡಿರಬೇಕು..
4. ಪ್ರತಿದಿನವೂ ಕಥೆ ಓದಿದ ಮೇಲೆ, “ಸಾವಿತ್ರೇ ಪ ಸಮಿತ್ತೇ ಚ ಪರಂಧಾಮ ಜಲೇ ಮಮ ತ್ವತ್ರೇಜ ಸಾಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ
ಎಂದು ನಿಂಬೆಹಣ್ಣು, ತುಳಸೀದಳ, ಗರಿಕೆ, ಬಿಳಿಸಾಸುವೆ, ದರ್ಭೆಗಳನ್ನು ಹಿಡಿದು ಹಾಲಿನಲ್ಲಿ ಮೂರುಸಲ ಅರ್ಘ್ಯ ಕೊಡಬೇಕು. ಆ ಹಾಲನ್ನು ತೀರ್ಥವಾಗಿ ಸೇವಿಸಬೇಕು.
5. ಮಾಘಮಾಸದಲ್ಲಿ ಎಳ್ಳು, ನೆಲ್ಲಿಕಾಯಿ, ಸಕ್ಕರೆ , ಬಿಳಿ ಕಲ್ಲುಸಕ್ಕರೆ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಶ್ರೇಯಸ್ಸಾಗುತ್ತದೆ.
6. ಮಾಘಸ್ನಾನ ಮಾಡುವವರು ರಾತ್ರಿ ಕಾಲದಲ್ಲಿ ಉಪವಾಸ ಇರಬೇಕು. (ಅಶಕ್ತರು ಹಾಲು ಹಣ್ಣು ರವೆಯ ಪದಾರ್ಥ ಸೇವಿಸಬಹುದು)
7. ಏನೇ ದಾನ ಮಾಡಿದರೂ ಬೆಳಗಿನ ಸಮಯದಲ್ಲೇ ದಾನ ಮಾಡಬೇಕು.
8. ಪ್ರತಿದಿನವೂ ಕಥೆ ಓದುವ ಮೊದಲು “ಸೂರ್ಯಹೃದಯ ಮತ್ತು ಸೂರ್ಯಕವಚ ಓದಬೇಕು.
ಆಯಾದಿನದ ಕಥೆ ಓದಿದ ಮೇಲೆ ತಾಂಬೂಲ ದಾನ ಮಾಡುವುದು ತುಂಬಾ ಶ್ರೇಷ್ಠ.
9. ಮಾಘಮಾಸದ ಕಥೆ ಪಾರಾಯಣದ ಮುಂಚೆ ಅಧ್ಯಾಯದ ಕೊನೆಯಲ್ಲಿ ಬರುವ ಮಂತ್ರಗಳನ್ನು ತಿಳಿದು ಜಪಿಸಬೇಕು.
10. ಮಾಘಸ್ನಾನವನ್ನು ಬೆಳಗಿನ ಜಾವ 4 ಘಂಟೆಯ ನಂತರ 5.45 ರ ಒಳಗೆ ಮಾಡುವುದು ಉತ್ತಮ.




Related Articles

ಪ್ರತಿಕ್ರಿಯೆ ನೀಡಿ

Latest Articles