ಹಿರೆಜಂಬೂರಿನ ಭೈರವ ಶಿಲ್ಪ

*ಶ್ರೀನಿವಾಸ ಮೂರ್ತಿ ಎನ್. ಎಸ್.

ಕರ್ನಾಟಕದ ಧಾರ್ಮಿಕ ಹಿನ್ನೆಲೆಯಲ್ಲಿ ಹಲವು ಧರ್ಮಗಳು ಮತ್ತು ಪಂಥಗಳು ತಮ್ಮದೇ ನೆಲದಲ್ಲಿ ಬೆಳೆದು ಉಳಿದು ಅಥವಾ ಅಳಿದು ಹೋಗಿವೆ.  ಈ ಹಿನ್ನೆಲೆಯಲ್ಲಿ ಶೈವ ಪಂಥಗಳ ಅಧ್ಯಯನದಲ್ಲಿ ಪದೇ ಪದೆ ಕಾಣಬರುವ ಪ್ರಮುಖ ಪಂಥಗಳಲ್ಲಿ ಕಾಳಾಮುಖ ಮತ್ತು ಪಾಶುಪತ ಪರಂಪರೆಯೂ ಒಂದು. ಕರ್ನಾಟಕದಲ್ಲಿ ಇತಿಹಾಸದಲ್ಲಿ ಅತ್ಯಂತ ಪ್ರಬಲವಾಗಿದ್ದ ಅವರು ಶಿಲ್ಪ ಪರಂಪರೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಶಿವಮೊಗ್ಗದ ಬಳ್ಳಿಗಾವಿಯ ಕೋಡಿಮಠ ಕಾಳಾಮಖರ ಅಧ್ಯಯನದಲ್ಲಿ ಪ್ರಮುಖವಾಗಿ ಕಾಣಬರುವ ಕೇಂದ್ರ.

ಬಳ್ಳಿಗಾವಿಗ ಹತ್ತಿರದಲ್ಲಿ ಕಾಣ ಬರುವ ಹಿರೇಜಂಬೂರಿನಲ್ಲಿ ಕಾಣ ಬರುವ ಭೈರವ ಶಿಲ್ಪ ಈ ಪರಂಪರೆಯ ಅಧ್ಯಯನದಲ್ಲಿ ಹೊಸ ಸ್ವರೂಪವನ್ನೇ ನೀಡಿದೆ.  ಮೂಲತಹ ಭೈರವನ ಆರಾಧಕರು ಮೇಲಿನ ಪಂತಕ್ಕೆ ಸಮಾನವಾಗಿ ಬೆಳೆದಿದ್ದ ಮತ್ತೊಂದು ಪಂಥವಾದ ಕಾಪಾಲಿಕರ ಆರಾಧ್ಯ ದೈವ. ಸೈದ್ಧಾಂತಿಕವಾಗಿ ವಿಭಿನ್ನ ನಿಲುವು ಹೊಂದಿದ್ದ ಇವರು ಸಾತ್ವಿಕ ಪರಂಪರೆಯ ಹಾದಿ ಹಿಡಿಯದೇ ತಾಂತ್ರಿಕ ಪಂಥಗಳ ಜಾಡು ಹಿಡಿದಿವರು.

ಕಾಪಾಲಿಕರು ಶಿವನ ಉಗ್ರ ರೂಪವಾದ ಭೈರವನ ಆರಾಧಕರು. ಕಾಳಾಮುಖರ ಕ್ಷೇತ್ರದಲ್ಲಿ ವಿಭಿನ್ನ ನಿಲುವು ಹೊಂದಿದ ಕಾಪಾಲಿಕರ ಶಿಲ್ಪ ಕಂಡುಬಂದಿರುವುದು ಅಂದಿನ ಕಾಲದಲ್ಲಿ ಧಾರ್ಮಿಕ ಆರಾಧನೆಯಲ್ಲಿ ಸಾತ್ವಿಕ ಮತ್ತು ಉಗ್ರ ಪಂಥದ ಎರಡೂ ಸ್ವರೂಪಗಳು ಬೆಳೆದಿರುವುದು ವಿಶೇಷ.

ಇನ್ನು ಹಿರೇಜಂಬೂರಿನ ಭೈರವನ ಶಿಲ್ಪಕ್ಕೆ ಬಂದರೆ ಇದು ಸುಮಾರು ಆರು ಅಡಿ ಎತ್ತರದ ರುದ್ರ ಸ್ವರೂಪ ಹೊಂದಿದ ಭಯಂಕರ ಶಿಲ್ಪ.  ಇಡೀ ಶಿಲ್ಪ ರುದ್ರತೆಯ ತಾಂಡವ ಸ್ವರೂಪದಿಂದ ಇದ್ದು ಬಲಗೈನಲ್ಲಿ ಡಮರು ಹಾಗೂ ಎಡಗೈನಲ್ಲಿ ತ್ರಿಶೂಲವಿದೆ. ಇದರ ಕೆಳಗಡೆಯಲ್ಲಿ ಮನುಷ್ಯನ ರುಂಡ ಇದ್ದು ಇದರ ಕೆಳಭಾಗದಲ್ಲಿ ಭೈರವನ ಶಿಲ್ಪದಲ್ಲಿ ಕಾಣಬರುವ ನಾಯಿ ರುಂಡದ ರಕ್ತ ಹೀರಲು ಕಾಯುತ್ತಿರುವಂತೆ ಭಾಸವಾಗುತ್ತದೆ. ಇಡೀ ವಿಗ್ರಹದ ಸುತ್ತಲೂ ನರಪೇತಲ ಅಥವಾ ಭೂತ ಪ್ರೇತಗಳ ಕೆತ್ತನೆ ಇದೆ.  ಭೈರವ ಶಿಲ್ಪ ರುಂಡದ ಮಾಲೆಯನ್ನು ಧರಿಸಿದ್ದು ಎತ್ತರವಾದ ಪಾದುಕೆಯನ್ನು ಧರಿಸಿರುವಂತೆ ಇದೆ. ಕೆಳಭಾಗದಲ್ಲಿ ಚೇಳಿನ ಚಿತ್ರವಿದ್ದು ಇಡೀ ಶಿಲ್ಪ ಭಹುಷಹ ಕಾಪಾಲಿಕರ ಉಗ್ರ ಆಚರಣೆಯ ಕಲ್ಪನೆಯನ್ನೆ ನೀಡುತ್ತದೆ.

ಈ ಶಿಲ್ಪದ ಹಿನ್ನೆಲೆಯಲ್ಲಿ ಕಾಪಾಲಿಕರನ್ನು ಗಮನಿಸುವುದಾದರೆ ಇವರು ಶಿವನ ಆರಾಧನೆಯಲ್ಲಿ ಸಾತ್ವಿಕ ಹಾದಿಯಿಂದ ಭಿನ್ನವಾಗಿ ತಾಂತ್ರಿಕ ಹಾದಿ ಹಿಡಿದರು ಎಂಬ ನಂಬಿಕೆಗ ಪ್ರಬಲ ಸಾಕ್ಷಿಯಂತಿದೆ.  ತಲೆಬುರುಡೆಯನ್ನು ಧರಿಸಿ ಸ್ಮಶಾನವಾಸಿಗಳಾಗಿದ್ದು ಉಗ್ರ ಆರಾಧಕರಾಗಿದ್ದರು ಎಂಬ ಕಲ್ಪನೆಗೆ ಒತ್ತು ಕೊಡುವಂತಿದೆ. ಕಪಾಲವನ್ನು ಧರಿಸಿವುದರಿಂದ ಇವರಿಗೆ ಕಾಪಾಲಿಕರು ಎಂಬ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಮೂರ್ತಿ ಕರ್ನಾಟಕದಲ್ಲಿಕಾಣಭರುವ ತಾಂತ್ರಿಕ ಪಂಥಾಚರಣೆಗಳಾದ ಕಾಪಾಲಿಕ, ಕೌಲ ಮತ್ತು ನಾಥ ಪರಂಪರೆಯ ಬೆಳೆದು ಬಂದ ವಾದಕ್ಕೆ ಹೊಸ ಪುಷ್ಟಿ ನೀಡಿದೆ. ಕೌಲರು ಶಕ್ತಿಯ ಉಪಾಸಕರಾಗಿದ್ದರೆ ಕಾಪಲಿಕರು ಶಿವನ ಉಗ್ರ ಸ್ವರೂಪದ ಉಪಾಸಕರು.

Related Articles

ಪ್ರತಿಕ್ರಿಯೆ ನೀಡಿ

Latest Articles