ಬೆಂಗಳೂರು: ಪದ್ಮನಾಭನಗರದ ಶ್ರೀಮತ್ ಆನಂದ ತೀರ್ಥ ಸೇವಾ ಟ್ರಸ್ಟ್ನಿಂದ ಶ್ರೀ ಮಧ್ವನವಮಿ ನವರಾತ್ರೋತ್ಸವ ಕಾರ್ಯಕ್ರಮಗಳು ಫೆ. 12 ರಿಂದ 21 ರವರೆಗೆ ಶ್ರೀ ಸುಮಧ್ವ ವಿಜಯ ಸೌಧದಲ್ಲಿ ನಡೆಯಲಿದೆ.
ಈ ಪ್ರಯಕ್ತ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಸುಮಧ್ವ ವಿಜಯ ಪಾರಾಯಣ, 8.30 ಕ್ಕೆ ಅಭಿಷೇಕ, 9 ಗಂಟೆಗೆ ಸರ್ವಮೂಲ ಗ್ರಂಥ ಪಾರಾಯಣ, 10 ಗಂಟೆಗೆ ಪುಷ್ಪಾಲಂಕಾರ, 10.30 ಕ್ಕೆ ಅರ್ಚನೆ, ಮಹಾಮಂಗಳಾರತಿ ಹಾಗೂ ಪ್ರತಿ ದಿನ ಸಂಜೆ 5 ಗಂಟೆಗೆ ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರಿ0ದ ‘ಸುಮಧ್ವ ವಿಜಯ ಮಹಾಕಾವ್ಯ‘ ಕುರಿತು ಪ್ರವಚನ ನಡೆಯಲಿದೆ.
13 ರಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಪವಮಾನ ಹೋಮ, ಮಧು ಅಭಿಷೇಕ, 12 ಗಂಟೆಗೆ ಮಂಗಳಾರತಿ.
14 ರಂದು ಬೆಳಗ್ಗೆ 8.30 ಕ್ಕೆ ಸಾಮೂಹಿಕ ಸುಮಧ್ವ ವಿಜಯ ಹೋಮ, ಕನಕಾಭಿಷೇಕ, 12 ಗಂಟೆಗೆ ಮಂಗಳಾರತಿ.
21 ರಂದು ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಸುಮಧ್ವ ವಿಜಯ ಪಾರಾಯಣ, ಸರ್ವಮೂಲ ಗ್ರಂಥ ಪಾರಾಯಣ, ಮಧ್ವಾಚಾರ್ಯರಿಗೆ ಪಾದಪೂಜೆ, ಕನಕಾಭಿಷೇಕ, ಪ್ರವಚನ ಮಂಗಳ, ಪ್ರಾಕಾರದಲ್ಲಿ ಶ್ರೀ ಮಧ್ವಾಚಾರ್ಯರ ರಥೋತ್ಸವ, ಮಧ್ಯಾಹ್ನ12 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ.
ಸಂಜೆ 6ರಿಂದ ದೇವರನಾಮಗಳ ಗಾಯನ ಕಾರ್ಯಕ್ರಮ ಇರಲಿದೆ.
ಈ ಸಂದರ್ಭದಲ್ಲಿ ನಡೆಯುವ ಸೇವೆಗಳಲ್ಲಿ ಭಕ್ತರು ಕೂಡಾ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ: 9900238537 ಅಥವಾ 9900158371.