ಸವದತ್ತಿ: “ತಾಲೂಕಿನಲ್ಲಿಯ ಎಲ್ಲ ಗ್ರಾಮಗಳಲ್ಲಿ ಎಲ್ಲ ದೇವಸ್ಥಾನಗಳು ಮಠಗಳು ಅಭಿವೃದ್ದಿಯಾದವು. ಅದೇ ರೀತಿಯಾಗಿ ದೇವಸ್ಥಾನಕ್ಕೆ ಹೋಗಲು ರಸ್ತೆಗಳನ್ನೂ ಸಹ ವಿಧಾನಸಭಾ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ಅಭಿವೃದ್ದಿ ಪಡಿಸಿದ್ದಾರೆ ಎಂದು ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ದಂಡಪಾಣಿ ದೀಕ್ಷಿತರು ಹೇಳಿದರು.
ಅವರು ಸವದತ್ತಿ ತಾಲೂಕಿನ ಸುಕ್ಷೆತ್ರ ಬೆಡಸೂರು ಚಿದಂಬರೇಶ್ವರ ದೇವಸ್ಥಾನದಲ್ಲಿ ಫೆ.12 ರಂದು ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ಹಾಗೂ ಮಾತೋಶ್ರೀ ಲಕ್ಷಿö್ಮÃ ಮಾತಾ ಸಭಾಭವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು ಮಾತನಾಡಿ “ಸುಕ್ಷೆತ್ರ ಬೆಡಸೂರು ಚಿದಂಬರೇಶ್ವರ ದೇವಸ್ಥಾನವು ತನ್ನದೇ ಆದಂತಹ ಇತಿಹಾಸವನ್ನು ಹೊಂದಿದ0ತಹ ಕ್ಷೇತ್ರ. ಚಿದಂಬರೇಶ್ವರರ ಅಗಾಧ ಶಕ್ತಿಯಿಂದ ಭಕ್ತರೂ ಸಹ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದು ದರುಶನ ಪಡೆಯುತ್ತಾರೆ. ಎಲ್ಲ ದೇವಸ್ಥಾನಗಳಂತೆ ಈ ದೇವಸ್ಥಾನವೂ ಕೂಡಾ ಅಭಿವೃದ್ದಿಯಾಗಬೇಕು. ದೇವಸ್ಥಾನಕ್ಕೆ ಬರುವ ಭಕ್ತರೂ ಸಹ ಅಭಿವೃದ್ದಿಗೆ ಸಹಕಾರ ಕೊಡುತ್ತಿದ್ದಾರೆ ಇಲ್ಲಿಗೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳು ಸಿಗಬೇಕು. ಈ ದೇವಸ್ಥಾನದ ಅಭಿವೃದ್ದಿಗೆ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರೂ ಸಹ ಅನುದಾನವನ್ನು ನೀಡಿದ್ದರು. 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಸಮುದಾಯಭವನವನ್ನು ನಿರ್ಮಿಸಲಾಗಿದೆ. ಅದೇ ರೀತಿಯಾಗಿ ನಮ್ಮ ಗುರ್ಲಹೂಸೂರಿನ ಚಿದಂಬರೆಶ್ವರ ದೇವಸ್ಥಾನಕ್ಕೂ ಸಹ 10 ಲಕ್ಷ ರೂಪಾಯಿಗಳ ಅನುದಾನ ನೀಡಲಾಗಿದೆ” ಎಂದರು
ಇದೇ ಸಂದರ್ಭದಲ್ಲಿ ಚಿದಂಬರೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಎಚ್ ಡಿ ಟಕ್ಕಳಕಿಯವರು ಬೆಡಸೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಜಗದೀಶ ಶಿಂತ್ರಿ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ ತಾ ಪಂ ಕಾ ನಿ ಅಧಿಕಾರಿ ಯಶ್ವಂತಕುಮಾರ, ಕೆ ಆರ ಐ ಡಿ ಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್ ಸಿ ಪ್ರಭುಕುಮಾರ, ಗ್ರಾಮ ಪಂಚಾಯತ ಅಧ್ಯಕ್ಷ ಮೃತ್ಯುಂಜಯ ಅ ಕಲ್ಲೂರ, ಉಪಾಧ್ಯಕ್ಷ ನಾಗಪ್ಪಾ ಹೆಬ್ಬಾಳ, ಹಾಗು ಸದಸ್ಯರಾದ ಮಲ್ಲಪ್ಪಾ ಚ ಕುರಿ ಚಂದ್ರು ಮಲ್ಲಾಡ, ಮಾರುತಿ ಹಾರಿಬೀಡಿ, ಮಹೇಶ ತೇಗೂರ, ಬಸಪ್ಪಾ ದೊಡಮನಿ, ಕಲ್ಲಪ್ಪಾ ಪಾಣಿಗಟ್ಟಿ, ಹುಲೆಪ್ಪಾ ಕುರಿ, ಶಿವಪ್ಪಾ ತಳವಾರ, ನಾಗಪ್ಪಾ ಮೊಖಾಶಿ, ಶ್ರೀ ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ಕುಮಣ್ಣಗೌಡಾ ಪಾಟೀಲ, ಗ್ರಾಮದ ಗಣ್ಯರಾದ ಶಂಕರಗೌಡಾ ಪಾಟೀಲ, ಎಚ್ಕೆ ಪಾಟೀಲ, ಬಿ ಟಿ ಪಾಟೀಲ, ಬಿ ಎಚ್ ಪಾಟೀಲ, ವಿ ಸಿ ಪಾಟೀಲ, ಅಶೋಕ ಹಿರೇಮಠ ಉಪಸ್ಥಿತರಿದ್ದರು.