ಗೌತಮ ಋಷಿಗಳ ಗೋತ್ರ ಸಂಪನ್ನರಾದ ಶಾಷ್ಟೀಕ ವಂಶದಲ್ಲಿ ಜನಿಸಿದ ಸುಜ್ಞಾನೇಂದ್ರ ಆಚಾರ್ಯ ಮತ್ತು ಲಕ್ಷ್ಮೀದೇವಿಯಲ್ಲಿ ಜನಿಸಿದವರು ಶ್ರೀ ವೆಂಕಟ ರಾಘವೇಂದ್ರಾಚಾರ್ಯರು. ಶ್ರೀಮಧ್ವ ಜಯತೀರ್ಥರು ಗಳಿಂದ ಅರಳಿದ ದಿವ್ಯ ಸಿಂಹಾಸನವನ್ನು ಶ್ರೀಮತ್ ಸುಯಮೀಂದ್ರ ತೀರ್ಥರು ತೀರ್ಥರಿಂದ ಸಂನ್ಯಾಸ ಸ್ವೀಕಾರದ ಮೂಲಕ ಪಡೆದವರು.
ಸುಮಾರು 28 ವರುಷ ಕಾಲ ಮೂಲರಾಮದೇವರ ಪೂಜೆ ಮಾಡಿದ ಮಹಾತ್ಮರು. ಇವರು ಪಂಡಿತರ ಸನ್ಮಾನ, ರಘುಪತಿ ವೇದವ್ಯಾಸ ಪೂಜಾ, ತಪಶ್ಚರ್ಯ, ಪಾಠಪ್ರವಚನ, ವಿದ್ಯಾಪೀಠ ಸ್ಥಾಪನೆ, ಸಜ್ಜನರ ಉದ್ದಾರ ನಿರಂತರ ನಡೆಸಿಕೊಂಡು ಹೋದವರು. ವೇದಾಂತ, ವ್ಯಾಕರಣ, ಧರ್ಮಶಾಸ್ತ್ರ, ವೇದಾಂತ, ವೇದ-ಉಪನಿಷತ್ತುಗಳಲ್ಲಿ ಅನ್ಯರ ಸಹಾಯವಿಲ್ಲದೆ ಅತ್ಯಂತ ಪ್ರಬುದ್ಧವಾದ ಮಂಡನೆ ಮಾಡುತ್ತಿದ್ದರು. ಕರ್ನಾಟಕ-ಆಂಧ್ರ ಮೊದಲಾದ ಅನೇಕ ರಾಜ್ಯಗಳಲ್ಲಿ ಪುರಪ್ರಮುಖರಿಂದ ಗೌರವಿಸಲ್ಪಟ್ಟರು ಮತ್ತು ಅತ್ಯಂತ ವಿಶೇಷವಾಗಿ ಬಳ್ಳಾರಿಯಲ್ಲಿ ಅವರು ಆಗಮಿಸಿದಾಗ ಅವರನ್ನು ಕುರಿತು ಅದ್ಭುತವಾದ ಸ್ತೋತ್ರವನ್ನು ಘೂಳೀ ಕೃಷ್ಣಾಚಾರ್ಯರು ಮಾಡಿ ಅವರಿಗೆ ಅರ್ಪಿಸಿದರು.
ಕೃಷ್ಣಾಚಾರ್ಯರು 1968ನೇ ಇಸವಿಯಲ್ಲಿ “ಸುಜಯೀಂದ್ರಪಂಚಪದ್ಯ ರತ್ನ ಮಾಲಿಕಾ” ಎಂಬುದಾಗಿ ಇದಕ್ಕೆ ಹೆಸರಿಟ್ಟರು. ಇಂದು ಇವರ ಆರಾಧನೆ. ಮಂತ್ರಾಲಯದಲ್ಲಿ ಇವರ ಮೂಲ ವೃಂದಾವನವಿದೆ.